ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಜತೆ ವಿದೇಶಕ್ಕೆ ಪ್ರಯಾಣಿಸಿದವರ ಹೆಸರು ಬಹಿರಂಗಕ್ಕೆ ಸೂಚನೆ

|
Google Oneindia Kannada News

ನವದೆಹಲಿ, ಆಗಸ್ಟ್ 4: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಭೇಟಿಗಳ ಸಂದರ್ಭದಲ್ಲಿ ಅವರ ಜತೆಗೆ ಪ್ರಯಾಣಿಸಿದ ಖಾಸಗಿ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗವು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸೂಚನೆ ನೀಡಿದೆ.

ಪ್ರಧಾನಿ ಮೋದಿ ಅವರು 2015-16, 2016-17ನೇ ಸಾಲಿನಲ್ಲಿ ಮಾಡಿದ ವಿದೇಶ ಪ್ರಯಾಣಗಳ ವೆಚ್ಚ ಹಾಗೂ ಅವರ ಜತೆಗೆ ಪ್ರಯಾಣಿಸಿದವರ ಹೆಸರುಗಳ ಪಟ್ಟಿಯ ಮಾಹಿತಿ ನೀಡುವಂತೆ ಕಳೆದ ಅಕ್ಟೋಬರ್‌ನಲ್ಲಿ ಕರಬಿ ದಾಸ್ ಎಂಬುವವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.

ಮೋದಿ ನಾಲ್ಕು ವರ್ಷದ ವಿದೇಶ ಪ್ರಯಾಣ ವೆಚ್ಚ 355 ಕೋಟಿಮೋದಿ ನಾಲ್ಕು ವರ್ಷದ ವಿದೇಶ ಪ್ರಯಾಣ ವೆಚ್ಚ 355 ಕೋಟಿ

ಆದರೆ, ಸಚಿವಾಲಯದಿಂದ ತೃಪ್ತಿಕರ ಉತ್ತರ ದೊರಕದ ಹಿನ್ನೆಲೆಯಲ್ಲಿ ಅವರು ಕೇಂದ್ರ ಮಾಹಿತಿ ಆಯೋಗದ ಮೊರೆ ಹೋಗಿದ್ದರು.

CIC directed MEA disclose names of private persons PM Modi on foreign tours

ಮಾಹಿತಿ ಒದಗಿಸಲು 224 ರೂ. ಠೇವಣಿ ಇರಿಸುವಂತೆ ಸಚಿವಾಲಯ ಸೂಚಿಸಿತ್ತು ಎಂದು ಅರ್ಜಿದಾರರ ಪರ ಹಾಜರಿದ್ದ ಕಾರ್ಯಕರ್ತ ಸುಭಾಷ್ ಅಗರ್ವಾಲ್ ಮಾಹಿತಿ ಆಯುಕ್ತ ಆರ್‌ಕೆ ಮಾಥೂರ್ ಅವರಿಗೆ ವಿಚಾರಣೆ ವೇಳೆ ತಿಳಿಸಿದರು.

ಅಮಿತ್ ಶಾ ಭದ್ರತೆಯ ವೆಚ್ಚದ ವಿವರ ಬಹಿರಂಗಕ್ಕೆ ಸಿಐಸಿ ನಕಾರಅಮಿತ್ ಶಾ ಭದ್ರತೆಯ ವೆಚ್ಚದ ವಿವರ ಬಹಿರಂಗಕ್ಕೆ ಸಿಐಸಿ ನಕಾರ

ಪ್ರಧಾನಿಯವರ ಪ್ರಯಾಣದ ದಿನಾಂಕ, ಭೇಟಿಯ ಸ್ಥಳ ಮತ್ತು ವಿಮಾನ ಪ್ರಯಾಣದ ವೆಚ್ಚ ಹೊರತುಪಡಿಸಿ ಉಳಿದ ಯಾವುದೇ ಮಾಹಿತಿಗಳನ್ನು ನಿರ್ವಹಿಸಿಲ್ಲ. 224 ರೂ ಹಣ ಪಾವತಿಯ ಬಗ್ಗೆ ಮರುಪರಿಶೀಲನೆ ನಡೆಸಿ ಹೊಸ ಮಾಹಿತಿಯನ್ನು ಒದಗಿಸುವುದಾಗಿ ಸಚಿವಾಲಯ ಆಯೋಗಕ್ಕೆ ತಿಳಿಸಿತು.

ಬಿಜೆಪಿಯ ದೇಣಿಗೆ ಸಂಗ್ರಹದಲ್ಲಿ ಬರೋಬ್ಬರಿ ಶೇ 539 ರಷ್ಟು ಏರಿಕೆ!ಬಿಜೆಪಿಯ ದೇಣಿಗೆ ಸಂಗ್ರಹದಲ್ಲಿ ಬರೋಬ್ಬರಿ ಶೇ 539 ರಷ್ಟು ಏರಿಕೆ!

ಆದರೆ, ಅರ್ಜಿದಾರರ ವಾದವನ್ನು ಮಾನ್ಯ ಮಾಡಿದ ಆಯುಕ್ತರು, ಸರ್ಕಾರಿ ವೆಚ್ಚದಲ್ಲಿ ಮೋದಿ ಅವರೊಂದಿಗೆ ಪ್ರಯಾಣಿಸಿದ ಖಾಸಗಿ ವ್ಯಕ್ತಿಗಳಿಗೆ (ಭದ್ರತೆಗೆ ಸಂಬಂಧಿಸದವರು) ಮಾಡಿದ ವೆಚ್ಚ ಮತ್ತು ಹೆಸರುಗಳನ್ನು ಅರ್ಜಿದಾರರಿಗೆ ಒದಗಿಸುವಂತೆ ಆದೇಶಿಸಿದರು.

English summary
Central Information Commssion has directed the External Affairs Ministry to disclose the names of private individuals who travelled with PM Narednra Modi on Foreign tours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X