ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗಸ್ಟಾ ವೆಸ್ಟ್ ಲ್ಯಾಂಡ್: ಇಟಲಿ ಮಹಿಳೆಯ ಮಗನ ಹೆಸರು ಹೇಳಿದ ಮೈಕಲ್

|
Google Oneindia Kannada News

ನವದೆಹಲಿ, ಡಿಸೆಂಬರ್ 29: ಭಾರಿ ವಿವಾದ ಕೆರಳಿಸಿರುವ ಅಗಸ್ಟಾ ವೆಸ್ಟ್ ಲ್ಯಾಂಡ್‌ ಅತಿ ಗಣ್ಯರ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಬಂಧಿತನಾಗಿರುವ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್, ವಿಚಾರಣೆ ವೇಳೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿ ಅವರ ಹೆಸರು ಬಹಿರಂಗಪಡಿಸಿರುವುದಾಗಿ ಜಾರಿ ನಿರ್ದೇಶನಾಲಯ (ಇ.ಡಿ) ದೆಹಲಿಯ ನ್ಯಾಯಾಲಯವೊಂದಕ್ಕೆ ಶನಿವಾರ ತಿಳಿಸಿದೆ.

ಅಲ್ಲದೆ, 'ಇಟಲಿಯ ಮಹಿಳೆಯ ಮಗ' ಮತ್ತು ಅವರು 'ದೇಶದ ಮುಂದಿನ ಪ್ರಧಾನಿಯಾಗಲು ಹೊರಟಿದ್ದಾರೆ' ಎಂದು ರಾಹುಲ್ ಗಾಂಧಿ ಅವರ ಬಗ್ಗೆ ಮೈಕಲ್ ಉಲ್ಲೇಖಿಸಿದ್ದಾನೆ ಎಂದು ಇ.ಡಿ ವಕೀಲರು ತಿಳಿಸಿದ್ದಾರೆ.

ಅಗಸ್ಟಾ ಹಗರಣ: ಸೋನಿಯಾ ಬಯಕೆಯಂತೆ ಹೆಲಿಕಾಪ್ಟರ್ ಖರೀದಿ ಒಪ್ಪಂದ?ಅಗಸ್ಟಾ ಹಗರಣ: ಸೋನಿಯಾ ಬಯಕೆಯಂತೆ ಹೆಲಿಕಾಪ್ಟರ್ ಖರೀದಿ ಒಪ್ಪಂದ?

ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಕ್ರಿಶ್ಚಿಯನ್ ಮೈಕಲ್‌ನನ್ನು ಈ ತಿಂಗಳ ಆರಂಭದಲ್ಲಿ ಯುಎಇಯಿಂದ ಗಡಿಪಾರು ಮಾಡಲಾಗಿತ್ತು. ಮೈಕಲ್ ಭಾರತಕ್ಕೆ ಬಂದಿಳಿಯುತ್ತಿದ್ದಂತೆಯೇ ಬಂಧಿಸಲಾಗಿತ್ತು. ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಏಳು ದಿನಗಳ ಇ.ಡಿ ವಶಕ್ಕೆ ನೀಡಿತ್ತು.

christian michel sonia gandhi son of italian lady ed agustawestland

ಕ್ರಿಶ್ಚಿಯನ್ ಮೈಕಲ್ ಮತ್ತು ಇತರೆ ವ್ಯಕ್ತಿಗಳ ನಡುವೆ ಸಂವಹನದಲ್ಲಿ ಬಳಕೆಯಾಗಿರುವ 'ಆರ್' ಎಂಬ ದೊಡ್ಡ ವ್ಯಕ್ತಿ ಯಾರು ಎಂಬುದನ್ನು ಭೇದಿಸಬೇಕಿದೆ. ಈ ರಹಸ್ಯ ಭೇದಿಸಲು ಮೈಕಲ್‌ನನ್ನು ಇತರೆ ಕೆಲವು ವ್ಯಕ್ತಿಗಳೊಂದಿಗೆ ಮುಖಾಮುಖಿಯನ್ನಾಗಿಸಬೇಕಿದೆ ಎಂದು ಇ.ಡಿ. ಕೋರ್ಟ್‌ಗೆ ತಿಳಿಸಿದೆ.

ಕ್ರಿಶ್ಚಿಯನ್ ನಿಂದ ಕುಟುಂಬಕ್ಕೆ ಹಣ ಸಂದಾಯ! ಆ 'ಕುಟುಂಬ' ಯಾವುದು?ಕ್ರಿಶ್ಚಿಯನ್ ನಿಂದ ಕುಟುಂಬಕ್ಕೆ ಹಣ ಸಂದಾಯ! ಆ 'ಕುಟುಂಬ' ಯಾವುದು?

ವಿವಿಐಪಿ ಹೆಲಿಕಾಪ್ಟರ್‌ಗಳ ಪೂರೈಕೆಗೆ ಸಂಬಂಧಿಸಿದಂತೆ 2010ರ ಫೆಬ್ರುವರಿ 8ರಂದು ನಡೆದ ಒಪ್ಪಂದದಲ್ಲಿ 2,666 ಕೋಟಿ ನಷ್ಟ ಸಂಭವಿಸಿದೆ ಎಂದು ಸಿಬಿಐ ಆರೋಪಿಸಿತ್ತು. ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪೆನಿಯಿಂದ ಕ್ರಿಶ್ಚಿಯನ್ ಮೈಕಲ್ 225 ಕೋಟಿ ರೂ ಪಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

English summary
Alleged middleman christian michel in the AgustaWestland VVIP chopper case has named Sonia Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X