ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂರ್ವ ಲಡಾಖ್‌ನಲ್ಲಿ ಪರಿಸ್ಥಿತಿ ಉದ್ವಿಗ್ನ: ಬಿಪಿನ್ ರಾವತ್

|
Google Oneindia Kannada News

ನವದೆಹಲಿ, ನವೆಂಬರ್ 06: ಪೂರ್ವ ಲಡಾಖ್‌ನ ಗಡಿ ವಾಸ್ತುವ ರೇಖೆ(ಎಲ್‌ಸಿ)ಬಳಿ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಭಾರತೀಯ ರಕ್ಷಣಾ ಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ.

ಭಾರತ-ಚೀನಾ ಮಧ್ಯೆ ಗಡಿ ಸಂಘರ್ಷ ಆರಂಭವಾಗಿ ಆರು ತಿಂಗಳುಗಳು ಕಳೆದಿದೆ. ಕಳೆದ ಆಗಸ್ಟ್ 29 ಮತ್ತು ಸೆಪ್ಟೆಂಬರ್ 8ರ ಮಧ್ಯೆ ಉತ್ತಮ ಮತ್ತು ದಕ್ಷಿಣ ತೀರದ ಪ್ಯಾಂಗಾಂಗ್ ಸರೋವರದ ಮಧ್ಯೆ ಗಡಿ ರೇಖೆಯುದ್ದಕ್ಕೂ ಚೀನಾ ಸೇನೆ ಸಂಘರ್ಷಕ್ಕೆ ಮುಂದಾಗಿದ್ದರಿಂದ ಭಾರತೀಯ ಸೇನೆ ಅದಕ್ಕೆ ತಕ್ಕ ಉತ್ತರ ನೀಡಬೇಕಾಗಿ ಬಂದಿದ್ದು ಎರಡೂ ದೇಶಗಳ ನಡುವಣ ಸಂಬಂಧ ತೀರಾ ಹದಗೆಟ್ಟಿದೆ ಎನ್ನಬಹುದು.

ಭಾರತದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಇರುವುದೊಂದೇ ದಾರಿ: ಬಿಪಿನ್ ರಾವತ್ಭಾರತದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಇರುವುದೊಂದೇ ದಾರಿ: ಬಿಪಿನ್ ರಾವತ್

ಕಳೆದ 45 ವರ್ಷಗಳಲ್ಲಿಯೇ ಇದೇ ಮೊದಲ ಬಾರಿಗೆ ಗಾಳಿಯಲ್ಲಿ ಸಹ ಗುಂಡು ಹಾರಿಸಲಾಗಿದೆ.ಪೂರ್ವ ಲಡಾಖ್‌ನಲ್ಲಿ ಚೀನಾ ಸೇನೆಯು 40 ಸಾವಿರಕ್ಕೂ ಅಧಿಕ ಸೈನಿಕರನ್ನು ನೇಮಿಸಿತ್ತು. ಚೀನಾ ಹಾಗೂ ಭಾರತದ ಕಮಾಂಡರ್‌ಗಳ ಮಧ್ಯೆ ಸಾಕಷ್ಟು ಸುತ್ತಿನ ಮಾತುಕತೆ ನಡೆದರೂ ಎಲ್ಲವೂ ವಿಫಲವಾಗಿದೆ.

Chinese Military Facing Unanticipated Consequences For Misadventure On LAC

ಇದೀಗ ಭಾರತಕ್ಕೆ ಎರಡನೇ ಹಂತದಲ್ಲಿ ಮೂರು ರಫೇಲ್ ಯುದ್ಧ ವಿಮಾನಗಳು ಬಂದಿದ್ದು, ಇದು ಯುದ್ಧದ ಮುನ್ಸೂಚನೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ.ಪೂರ್ವ ಲಡಾಕ್ ನ ಗಡಿ ರೇಖೆ ಬಳಿ ಭಾರತೀಯ ಸೇನಾಪಡೆ ನೀಡುತ್ತಿರುವ ದಿಟ್ಟ ಪ್ರತಿಕ್ರಿಯೆಯಿಂದಾಗಿ ಚೀನಾ ಅನಿರೀಕ್ಷಿತ ಪರಿಸ್ಥಿತಿಗಳನ್ನು ಎದುರಿಸುತ್ತಿದೆ.

ನಮ್ಮ ಸೇನಾ ನಿಲುಗಡೆ ಅಲ್ಲಿ ನಿಸ್ಸಂದಿಗ್ಧವಾಗಿದ್ದು, ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಯಾವುದೇ ಬದಲಾವಣೆಯನ್ನು ನಾವು ಒಪ್ಪುವುದಿಲ್ಲ ಎಂದು ಜ.ಬಿಪಿನ್ ರಾವತ್ ಹೇಳಿದ್ದಾರೆ.

ಚೀನಾದಿಂದ ಗಡಿಯಲ್ಲಿ ಮುಖಾಮುಖಿ ಮತ್ತು ಅಪ್ರಚೋದಿತ ಕ್ರಮಗಳು ನಮ್ಮ ನಿಲುವಿನಲ್ಲಿ ಯಾವುದೇ ರೀತಿಯಲ್ಲಿಯೂ ಸಡಿಲಿಕೆ ಮಾಡಲಾಗದಷ್ಟು ಮಟ್ಟಿಗೆ ಸಂಘರ್ಷಕ್ಕೆ ತಿರುಗುತ್ತಿದೆ ಎಂದು ಹೇಳಿದರು.

English summary
China’s People’s Liberation Army (PLA) is facing unanticipated consequences for its misadventure in eastern Ladakh because of the firm and strong responses by the Indian Armed Forces, Chief of Defence Staff Gen Bipin Rawat has said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X