ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂ ಕೇರ್ಸ್‌ ಫಂಡ್‌ಗೆ ಚೀನಾದಿಂದ ಅನುದಾನ: ಕಾಂಗ್ರೆಸ್ ಪ್ರತ್ಯಾರೋಪ

|
Google Oneindia Kannada News

ನವದೆಹಲಿ, ಜೂನ್ 29: ಚೀನಾದ ಅನುದಾನ ಕೇವಲ ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಬಂದಿಲ್ಲ, ಪಿಎಂ ಕೇರ್ಸ್ ಫಂಡ್‌ಗೂ ಅನುದಾನ ಬಂದಿದೆ ಎಂದು ಕಾಂಗ್ರೆಸ್ ಪ್ರತ್ಯಾರೋಪ ಮಾಡಿದೆ.

ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಚೀನಾ ಲಕ್ಷಾಂತರ ರೂ ಅನುದಾನ ನೀಡಿತ್ತು ಎಂದು ಬಿಜೆಪಿ ಈ ಹಿಂದೆ ಆರೋಪ ವ್ಯಕ್ತಪಡಿಸಿತ್ತು. ಇದೀಗ ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಈ ಪ್ರತ್ಯಾರೋಪವನ್ನು ಮಾಡಿದೆ.

ರಾಜೀವ್‌ಗಾಂಧಿ ಪ್ರತಿಷ್ಠಾನಕ್ಕೆ ಚೀನಾದ ದೇಣಿಗೆ: ಬಿಜೆಪಿ ಹೇಳೋದೇನು?ರಾಜೀವ್‌ಗಾಂಧಿ ಪ್ರತಿಷ್ಠಾನಕ್ಕೆ ಚೀನಾದ ದೇಣಿಗೆ: ಬಿಜೆಪಿ ಹೇಳೋದೇನು?

ಪ್ರಸಿದ್ಧ ಶಿಯೋಮಿ, ಒಪ್ಪೊ, ಹವಾಯಿ ಕಂಪನಿಗಳು ನೇರವಾಗಿ ಪಿಎಂ ಕೇರ್ಸ್‌ ಫಂಡ್‌ಗೆ ಅನುದಾನ ನೀಡಿವೆ ಎಂದಿದೆ.ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಚೀನಾ ನೀಡಿರುವ ಅನುದಾನದ ಬಗ್ಗೆ ಬಿಜೆಪಿಯ ಬಳಿ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿದೆ.

 Chinese Funds In PM CARES Congress Hits Back After BJP Onslaught

ಇದಕ್ಕೆ ಬಿಜೆಪಿ ಉತ್ತರಿಸಿದ್ದು, ಕೊವಿಡ್ 19 ಮಾರಕ ರೋಗ ಇಡೀ ದೇಶಕ್ಕೆ ಅಂಟಿರುವ ಸಂದರ್ಭದಲ್ಲಿ ಪಿಎಂ ಕೇರ್ಸ್ ಫಂಡ್‌ಗೆ ಅನುದಾನ ಬಂದಿರುವ ವಿಚಾರವೇ ಬೇರೆ, ಯಾವುದೇ ಸ್ವಾಯತ್ತ ಸಂಸ್ಥೆಯೊಂದಕ್ಕೆ ಚೀನಾ ನೀಡಿರುವ ಅನುದಾನವೇ ಬೇರೆ ಎಂದು ಹೇಳಿಕೆ ನೀಡಿದೆ.

ಕಾಂಗ್ರೆಸ್‌ ವಕ್ತಾರ ಅಭಿಷೇಕ್ ಸಿಂಘ್ವಿ ಮಾತನಾಡಿ, 2020ರ ಮೇ 20 ರಂದು ನರೇಂದ್ರ ಮೋದಿಯವ ಪಿಎಂ ಕೇರ್ಸ್ ಫಂಡ್‌ಗೆ 9,677 ಕೋಟಿ ರೂ ಅನುದಾನ ಬಂದಿದೆ. ಈ ಹಣವು ಚೀನಾದ ಕಂಪನಿಗಳಿಂದ ಬಂದಿದೆ.

ಪಿಎಂ ಕೇರ್ಸ್ ಫಂಡ್ ನೋಡಲು ಖಾಸಗಿ ಖಾತೆಯಂತೆ ಕಾಣುತ್ತಿದೆ. ಎಷ್ಟು ಹಣ ಬಂದಿದೆ ಎನ್ನುವ ಕುರಿತು ಯಾವುದೇ ಮಾಹಿತಿ ಸರ್ಕಾರ ನೀಡುತ್ತಿಲ್ಲ ಎಂದು ದೂರಿದ್ದಾರೆ.

English summary
The Congress, accused of accepting Chinese funds for the Rajiv Gandhi Foundation, today hit back in kind, saying donations from Chinese firms have poured into PM CARES fund also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X