ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಸರಳ ಮನುಷ್ಯ, ನನ್ನ ಬಳಿ ಕೇವಲ ಒಂದು ಕಾರು ಇದೆ: ಅನಿಲ್ ಅಂಬಾನಿ ಇಂಗ್ಲೆಂಡ್ ನ್ಯಾಯಾಲಯಕ್ಕೆ ಹೇಳಿಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 26: ನಾನೊಬ್ಬ ಸಾಮಾನ್ಯ ಮನುಷ್ಯ ನನ್ನ ಬಳಿ ಕೇವಲ ಒಂದು ಕಾರು ಇದೆ. ಈಗಾಗಲೇ ಕೋರ್ಟ್‌ ಖರ್ಚಿಗೆ ಒಡವೆಗಳನ್ನು ಮಾರಿದ್ದಾಗಿದೆ ಎಂದು ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ ಯುಕೆ ನ್ಯಾಯಾಲಯದಲ್ಲಿ ಮೂರು ಚೀನಿ ಬ್ಯಾಂಕುಗಳು ಸಲ್ಲಿಸಿದ ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾರೆ.

ವರದಿಗಳ ಪ್ರಕಾರ, ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಣಿಸಿಕೊಂಡ ಅನಿಲ್ ಅವರು ಕೇವಲ ಒಂದು ಕಾರನ್ನು ಮಾತ್ರ ಹೊಂದಿದ್ದು, ಅವರ ಎಲ್ಲಾ ಆಭರಣಗಳನ್ನು ಮಾರಾಟ ಮಾಡುವ ಮೂಲಕ ಕಾನೂನು ಶುಲ್ಕವನ್ನು ಪಾವತಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದು 2020 ರ ಜನವರಿ ಮತ್ತು ಜೂನ್ ನಡುವೆ 9.9 ಕೋಟಿ ರೂ. ಎಂದು ಅವರು ಹೇಳಿದ್ದಾರೆ.

 ಅನಿಲ್ ಅಂಬಾನಿ ವಿರುದ್ಧ ದಿವಾಳಿ ಕಲಾಪ ನಡೆಸಲು ಎನ್‌ಸಿಎಲ್‌ಟಿ ಒಪ್ಪಿಗೆ ಅನಿಲ್ ಅಂಬಾನಿ ವಿರುದ್ಧ ದಿವಾಳಿ ಕಲಾಪ ನಡೆಸಲು ಎನ್‌ಸಿಎಲ್‌ಟಿ ಒಪ್ಪಿಗೆ

"ನನ್ನ ಖರ್ಚುಗಳು ಅತ್ಯಲ್ಪ ಮತ್ತು ಹೆಂಡತಿ ಮತ್ತು ಕುಟುಂಬದಿಂದ ಭರಿಸಲ್ಪಡುತ್ತಿವೆ. ನನಗೆ ಅದ್ದೂರಿ ಜೀವನಶೈಲಿ ಅಲ್ಲ ಮತ್ತು ಬೇರೆ ಆದಾಯವಿಲ್ಲ. ಆಭರಣಗಳ ಮಾರಾಟದಿಂದ ನಾನು ಕಾನೂನು ವೆಚ್ಚವನ್ನು ಪೂರೈಸಿದ್ದೇನೆ ಮತ್ತು ಹೆಚ್ಚಿನ ಖರ್ಚುಗಳನ್ನು ನಾನು ಪೂರೈಸಬೇಕಾದರೆ (ಅದು) ಇತರ ಆಸ್ತಿಗಳನ್ನು ವಿಲೇವಾರಿ ಮಾಡಲು ನ್ಯಾಯಾಲಯದ ಅನುಮೋದನೆ ವಿಷಯವಾಗಿರುತ್ತದೆ'' ಎಂದು ಅನಿಲ್ ಅಂಬಾನಿ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಉಲ್ಲೇಖಿಸಿದೆ.

2008ರಲ್ಲಿ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದ ಅನಿಲ್

2008ರಲ್ಲಿ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದ ಅನಿಲ್

ಅವರ ವಕ್ತಾರರು ವಿಚಾರಣೆಯ ನಂತರ ನೀಡಿದ ಹೇಳಿಕೆಯಲ್ಲಿ, ಅನಿಲ್ ಯಾವಾಗಲೂ 'ಸರಳ ಅಭಿರುಚಿಯ ಸರಳ ಮನುಷ್ಯ', ಅವರು ಅದ್ದೂರಿ ಮತ್ತು ಅಬ್ಬರದ ಜೀವನಶೈಲಿಯನ್ನು ನಡೆಸುತ್ತಿದ್ದಾರೆ ಎಂಬ ಗ್ರಹಿಕೆಗಿಂತ ಭಿನ್ನವಾಗಿದೆ ಎನ್ನಲಾಗಿದೆ. ಫೋರ್ಬ್ಸ್ ಪ್ರಕಾರ, ಅನಿಲ್ 2008 ರಲ್ಲಿ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದರು. ಅವರ ಸಂಪತ್ತು 42 ಬಿಲಿಯನ್ ಡಾಲರ್‌ನಷ್ಟಿತ್ತು.

ಅನಿಲ್ ಅಂಬಾನಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ!

ಅನಿಲ್ ಅಂಬಾನಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ!

'2012ರ ನಂತರ ಅನಿಲ್ ಅಂಬಾನಿಯವರ ಹೂಡಿಕೆಗಳು ಮಾರುಕಟ್ಟೆಯಲ್ಲಿ ಕುಸಿಯಲಾರಂಭಿಸಿತು. ಸ್ಪೆಕ್ಟ್ರಮ್ ಹಂಚಿಕೆಯಲ್ಲಿ ಭಾರತ ಸರ್ಕಾರ ಮಾಡಿಕೊಂಡ ನೀತಿಗಳ ಬದಲಾವಣೆಯಿಂದ ದೇಶದ ಟೆಲಿಕಾಂ ವಲಯಕ್ಕೆ ಇನ್ನಿಲ್ಲದ ಹೊಡೆತ ಬಿದ್ದಿದೆ. 2012ರಲ್ಲಿ 7 ಶತಕೋಟಿ ಡಾಲರ್ ಗೂ ಅಧಿಕ ಇದ್ದ ಅನಿಲ್ ಅಂಬಾನಿ ಹೂಡಿಕೆ ಮೌಲ್ಯ ಇಂದು 89 ದಶಲಕ್ಷ ಡಾಲರ್ ಗೆ ಇಳಿದಿದೆ. ಅವರ ಬಾಧ್ಯತೆಗಳ ಲೆಕ್ಕ ತೆಗೆದುಕೊಂಡರೆ ಅವರ ವ್ಯವಹಾರ ಜಾಲ ಮೌಲ್ಯ ಶೂನ್ಯವಾಗಿರುತ್ತದೆ, ಒಂದು ಕಾಲದಲ್ಲಿ ಆಗರ್ಭ ಶ್ರೀಮಂತರಾಗಿದ್ದವರು ಇಂದು ಎಲ್ಲವನ್ನೂ ಕಳೆದುಕೊಂಡಿದ್ದಾರೆ, ಹೀಗಾಗಿ 700 ದಶಲಕ್ಷ ಡಾಲರ್ ನಷ್ಟು ಮೊತ್ತ ಅವರು ನ್ಯಾಯಾಲಯಕ್ಕೆ ಕಟ್ಟಲು ಸಾಧ್ಯವಿಲ್ಲ'' ಎಂದು ಈ ಹಿಂದೆ ಯುಕೆ ಕೋರ್ಟ್ ನಲ್ಲಿ ಅಂಬಾನಿ ಬ್ಯಾರಿಸ್ಟರ್ ರಾಬರ್ಟ್ ಹೊವೆ ಹೇಳಿದ್ದಾರೆ.

ಅನಿಲ್ ಅಂಬಾನಿ ಮೇಲೆ ಕೋರ್ಟ್ ಕ್ರಮ ಏಕೆ?

ಅನಿಲ್ ಅಂಬಾನಿ ಮೇಲೆ ಕೋರ್ಟ್ ಕ್ರಮ ಏಕೆ?

ಬ್ಯಾಂಕುಗಳಿಂದ ತೆಗೆದುಕೊಂಡ ಸಾಲಗಳಿಗೆ ವೈಯಕ್ತಿಕ ಖಾತ್ರಿ ನೀಡಲು ಅನಿಲ್ ಅಂಬಾನಿ ಹಿಂದೇಟು ಹಾಕಿದಾಗ ಸಾಲದ ಒಪ್ಪಂದ ಮುರಿದ ಹಿನ್ನಲೆಯಲ್ಲಿ ಲಂಡನ್ ನ ಹೈಕೋರ್ಟ್ ತನ್ನ ಕಾನೂನು ವ್ಯಾಪ್ತಿಯಲ್ಲಿ ಅಂಬಾನಿ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಆರು ವಾರದೊಳಗೆ 100 ಮಿಲಿಯನ್ ಡಾಲರ್‌ಗಳನ್ನು ನೀಡಬೇಕೆಂದು ಇಂಗ್ಲೆಂಡ್ ಕೋರ್ಟ್ ಈ ಹಿಂದೆ ನಿರ್ದೇಶಿಸಿತ್ತು. ಆದರೆ ಅಂಬಾನಿ ತನ್ನ ಬಳಿ ಕೊಡಲು ಏನು ಉಳಿದಿಲ್ಲ ಎಂದು ವಾದಿಸಿದ್ದರು.

Recommended Video

ಇದೆ ಕಾರಣಕ್ಕೆ ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ಗೆ ಮುಜುಗರ ಆಗಿದು | Oneindia Kannada
ಅನಿಲ್ ಅಂಬಾನಿ ಯಾವ ಬ್ಯಾಂಕಿನಿಂದ, ಎಷ್ಟು ಸಾಲ ಪಡೆದಿದ್ದರು?

ಅನಿಲ್ ಅಂಬಾನಿ ಯಾವ ಬ್ಯಾಂಕಿನಿಂದ, ಎಷ್ಟು ಸಾಲ ಪಡೆದಿದ್ದರು?

ಮೂರು ರಾಜ್ಯ-ನಿಯಂತ್ರಿತ ಚೀನೀ ಬ್ಯಾಂಕುಗಳು ಈ ಹಿಂದೆ ಮೊಕದ್ದಮೆಯನ್ನು ಸಲ್ಲಿಸಿದವು. ಚೀನಾದ ಕೈಗಾರಿಕಾ ಮತ್ತು ವಾಣಿಜ್ಯ ಬ್ಯಾಂಕ್ ಲಿಮಿಟೆಡ್‌, ಚೀನಾ ಅಭಿವೃದ್ಧಿ ಬ್ಯಾಂಕ್, ಚೀನಾ ರಫ್ತು-ಆಮದು ಬ್ಯಾಂಕ್ 2012ರಲ್ಲಿ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ ಲಿಮಿಟೆಡ್‌ಗೆ 925.2 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 6,603 ಕೋಟಿ 80 ಲಕ್ಷದ 400) ಸಾಲವನ್ನು ನೀಡಿದ್ದವು.

ಜೂನ್ 12 ರ ಮೊದಲು ಮೂರು ಚೀನೀ ಬ್ಯಾಂಕುಗಳಿಗೆ 5,281 ಕೋಟಿ ರೂ. ಸಾಲ ಮತ್ತು 7 ಕೋಟಿ ರೂ. ಕಾನೂನು ವೆಚ್ಚವನ್ನು ಪಾವತಿಸಲು ಆದೇಶಿಸಲಾಯಿತು. ಇದನ್ನು ಪಾವತಿಸಲು ವಿಫಲವಾದಾಗ, ತನ್ನ ವಿಶ್ವಾದ್ಯಂತ ಸ್ವತ್ತುಗಳನ್ನು ಅಫಿಡವಿಟ್ ಮೂಲಕ ಘೋಷಿಸಲು ಆದೇಶಿಸಲಾಯಿತು.

English summary
Anil Ambani said on Friday that he lives a simple life and doesn’t own anything meaningful. He was being cross examined by a UK court in a loan repayment case filed by three Chinese banks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X