ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಲ್ವಾನ್ ಕಣಿವೆ ಗಡಿಯಿಂದ ಸೇನೆ ಹಿಂದಕ್ಕೆ ಪಡೆದ ಚೀನಾ?

|
Google Oneindia Kannada News

ಲಡಾಖ್, ಜೂನ್ 25: ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆ ಪ್ರದೇಶದಿಂದ ಚೀನಾ ಸೇನೆ ಹಿಂದಕ್ಕೆ ಸರಿದಿದೆ ಎಂದು ಗುರುವಾರ ವರದಿಯಾಗಿದೆ.

ಜೂನ್ 22 ರಂದು ನಡೆದಿದ್ದ ಮಿಲಿಟರಿ ಕಮಾಂಡರ್‌ಗಳ ಮಾತುಕತೆ ಬಳಿಕ ಚೀನಾ ಸೇನೆ, ಹಿಂದಕ್ಕೆ ಸರಿಯುವುದಾಗಿ ಭರವಸೆ ನೀಡಿತ್ತು. ಅದರಂತೆ ಇಂದು ಗಡಿ ಪ್ರದೇಶದಿಂದ ಕೆಲವು ವಾಹನಗಳು ಹಾಗೂ ಸೇನ್ಯವನ್ನು ಚೀನಾ ಹಿಂದಕ್ಕೆ ಕರೆಸಿಕೊಂಡಿದೆ ಎಂದು ಎಎನ್ಐ ವರದಿ ಮಾಡಿದೆ.

ಜೂನ್ 22ರಂದು ಭಾರತ ಮತ್ತು ಚೀನಾ ಸೇನೆಯ ಕಮಾಂಡರ್‌ಗಳ ಸುಮಾರು 11 ಗಂಟೆಗೂ ಅಧಿಕ ಸಮಯ ಮಾತುಕತೆ ನಡೆಸಿದ್ದರು. ಭಾರತೀಯ ಸೇನೆಯ 14 ಕಾರ್ಪ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಚೀನಾ ಕಮಾಂಡರ್ ಜೊತೆಗೆ ಎರಡನೇ ಬಾರಿ ಮಹತ್ವದ ಸಭೆಯನ್ನು ನಡೆಸಿದ್ದರು.

China troops move back from front to the Galwan area

ಜೂನ್ 14 ರಂದು ರಾತ್ರಿ ಲಡಾಖ್‌ನ ಗಾಲ್ವಾನ ಕಣಿವೆ ಪ್ರದೇಶದಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಈ ಘರ್ಷಣೆಯಲ್ಲಿ ಭಾರತ ಕರ್ನಲ್ ಸೇರಿ 20 ಜನ ಯೋಧರು ಹುತಾತ್ಮರಾಗಿದ್ದರು. ಆದರೆ, ಚೀನಾ ಸೇನೆಯಲ್ಲಿ ಉಂಟಾದ ಸಾವು ನೋವಿನ ಬಗ್ಗೆ ಸ್ಪಷ್ಟನೆ ನೀಡಿಲ್ಲ.

English summary
On June 22, the Chinese side had given assurance that they will move back troops from front to the depth areas. In this regard, some troops and vehicles were moved back by them in the Galwan area: Sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X