ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸೇನೆಯ ಗಸ್ತು ತಿರುಗುವುದನ್ನು ತಡೆದ ಚೀನಾ

|
Google Oneindia Kannada News

ನವ ದೆಹಲಿ, ಮೇ 23: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ತನ್ನ ನಿಯಂತ್ರಣ ರೇಖೆಯ (Line of Actual Control) ಬದಿಯಲ್ಲಿ ಭಾರತೀಯ ಸೇನೆಯ ಗಸ್ತು ತಿರುಗುವುದನ್ನು ತಡೆಯುತ್ತಿದೆ ಎಂದು ಭಾರತ ಹೇಳಿದೆ. ಸಿಕ್ಕಿಂ ಮತ್ತು ಲಡಾಕ್ ವಲಯಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ.

Recommended Video

ಗ್ರೀನ್ ಝೋನ್ ನಲ್ಲಿರುವ ರಾಮನಗರದಲ್ಲಿ ಆತಂಕ! ಈ ಟೈಮ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬೇಕಿತ್ತಾ! | Ramanagara

ಭಾರತೀಯ ಪಡೆಗಳು ಎಲ್‌ಎಸಿ(Line of Actual Control)ಯನ್ನು ದಾಟಿದೆ ಎಂದು ಚೀನಾ ಆರೋಪವನ್ನು ಮಾಡಿದೆ. ಆದರೆ, ಇದನ್ನು, ಭಾರತೀಯ ಪಡೆಗಳು ನಿರಾಕರಿಸಿದೆ. ನವದೆಹಲಿ ಭಾರತೀಯ ಪಡೆಗಳು ಎಲ್‌ಎಸಿ ದಾಟಿಲ್ಲ ಎಂದು ಹೇಳಿದ್ದಾರೆ. ಇದು ಸುಳ್ಳು, ಭಾರತ ತನ್ನ ಭದ್ರತೆಯನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದ್ದಾರೆ.

ಪುಲ್ವಾಮಾದಲ್ಲಿ ಉಗ್ರರ ದಾಳಿ: ಓರ್ವ ಪೊಲೀಸ್ ಹುತಾತ್ಮ ಪುಲ್ವಾಮಾದಲ್ಲಿ ಉಗ್ರರ ದಾಳಿ: ಓರ್ವ ಪೊಲೀಸ್ ಹುತಾತ್ಮ

ಚೀನಾದೊಂದಿಗಿನ ಗಡಿ ಪ್ರದೇಶಗಳಲ್ಲಿ ಶಾಂತಿಗೆ ಬದ್ಧವಾಗಿದೆ ಎಂದು ನವದೆಹಲಿ ತನ್ನ ನಿಲುವನ್ನು ಪುನಃ ದೃಢಪಡಿಸಿದೆ. ಈ ಸಮಸ್ಯೆಯನ್ನು ಪರಿಹರಿಸಲು ಭಾರತ ಹಾಗೂ ಚೀನಾ ಎರಡೂ ಕಡೆಯವರು ಮಾತನಾಡುತ್ತಿದ್ದಾರೆ ಎಂದು ಹೇಳಿದೆ.

Chinas Peoples Liberation Army Blocking Indian Patrols Says New Delhi

ಮೇ ತಿಂಗಳಲ್ಲಿ, ಆಕ್ರಮಣಕಾರಿ ಪಿಎಲ್‌ಎ ಗಸ್ತುಗಳನ್ನು ಭಾರತೀಯ ಪಡೆಗಳು ಭಾರತೀಯ ಭೂಪ್ರದೇಶದೊಳಗೆ ನಿಲ್ಲಿಸಿದ್ದವು. ಗುರುವಾರ ವಿದೇಶಾಂಗ ಸಚಿವಾಲಯವು ಚೀನಿಯರು ಇತ್ತೀಚೆಗೆ ಚಟುವಟಿಕೆಯನ್ನು ಕೈಗೊಂಡಿದ್ದು, ಇದು ಭಾರತೀಯ ಪಡೆಗಳ ಸಾಮಾನ್ಯ ಗಸ್ತು ಮಾದರಿಗಳಿಗೆ ಅಡ್ಡಿಯಾಗಲು ಕಾರಣವಾಯಿತು ಎಂದು ಹೇಳಿದ್ದರು.

ಎಲ್‌ಎಸಿಯ ಜೋಡಣೆಗೆ ಭಾರತೀಯ ಸೈನ್ಯವು ಸೂಕ್ಷ್ಮವಾಗಿ ಬದ್ಧವಾಗಿದೆ ಮತ್ತು ಎಲ್ಲಾ ಭಾರತೀಯ ಚಟುವಟಿಕೆಗಳು ಸಂಪೂರ್ಣವಾಗಿ ಎಲ್‌ಎಸಿಯ ಭಾರತೀಯ ಭಾಗದಲ್ಲಿವೆ ಎಂದು ಎಂಇಎ ಕೂಡ ಹೇಳಿದೆ.

English summary
China's People's Liberation Army is blocking Indian Army patrols on its side of the Line of Actual Control, India has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X