ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ App ನಿಷೇಧ: 'ಕೇಂದ್ರ ಸರ್ಕಾರ ತುಂಬಾ ಲೇಟ್' ಎಂದ ಸಿಎಂ

|
Google Oneindia Kannada News

ದೆಹಲಿ, ಜೂನ್ 29: ಭಾರತ ಮತ್ತು ಚೀನಾ ಸೈನ್ಯಗಳ ನಡುವೆ ಹಿಂಸಾತ್ಮಕ ಘಟನೆ ನಡೆದ ಬಳಿಕ ಚೈನಿಸ್ ವಸ್ತುಗಳನ್ನು ನಿಷೇಧಿಸಬೇಕು ಎಂಬ ಕೂಗು ದೇಶಾದ್ಯಂತ ಜೋರಾಗಿ ಸದ್ದು ಮಾಡಿತ್ತು.

ಚೀನಾ ಆಪ್‌ಗಳನ್ನು ಬ್ಯಾನ್ ಮಾಡಿ, ಟಿಕ್‌ಟಾಕ್ ನಿಷೇಧ ಮಾಡಿ ಎಂಬ ಒತ್ತಾಯ ಕೇಳಿ ಬಂದಿತ್ತು. ಇದೀಗ, ಅಂತಿಮವಾಗಿ ಚೀನಾದ 59 ಆಪ್‌ಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ನಿರ್ಬಂಧಿಸಿದೆ.

ಇದೀಗ ಅಧಿಕೃತ: Tik Tok ಸೇರಿದಂತೆ 59 Apps ಬಳಕೆ ನಿಷೇಧಇದೀಗ ಅಧಿಕೃತ: Tik Tok ಸೇರಿದಂತೆ 59 Apps ಬಳಕೆ ನಿಷೇಧ

ಟಿಕ್‌ಟಾಕ್, ಶೇರ್-ಇಟ್, ಜೂಮ್, ಯುಸಿ ಬ್ರೌಸರ್, ಕ್ಲೀನ್ ಮಾಸ್ಟರ್ ಸೇರಿದಂತೆ 59 ಆಪ್‌ಗಳನ್ನು ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡಬಹುದು ಎಂಬ ಕಾರಣ ನೀಡಿ ನಿಷೇಧ ಹೇರಿದೆ.


ಆದರೆ, ಚೀನಾ ಆಪ್‌ಗಳನ್ನು ನಿಷೇಧ ಮಾಡಿರುವ ಬಗ್ಗೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಪ್ರತಿಕ್ರಿಯಿಸಿದ್ದು, ''ಈ ವಿಚಾರದಲ್ಲಿ ಕೇಂದ್ರ ಸರ್ಕಾರ ತುಂಬಾ ಲೇಟ್, ಅದಾಗಲೇ ಚೀನಾ ಆಪ್‌ಗಳು ಸೋಂಕು ಹರಡಿಸಿದೆ'' ಎಂದಿದ್ದಾರೆ.

China Apps Already Spread The Infection Said Jharkhand Chief Minister

ಚೀನಾ ಆಪ್‌ಗಳನ್ನು ಬ್ಯಾನ್ ಮಾಡಿ ಎಂದು ಕೇಂದ್ರ ಸರ್ಕಾರ ಸೋಮವಾರ ರಾತ್ರಿ ಆದೇಶ ಹೊರಡಿಸಿದೆ. ಗುಪ್ತಚರ ಇಲಾಖೆ ನೀಡಿರುವ ಪಟ್ಟಿಯಂತೆ 59 ಆಪ್‌ಗಳನ್ನು ಭಾರತ ಸರ್ಕಾರ ನಿಷೇಧ ಮಾಡಿದೆ.

English summary
I think the Central Government is late to take this step. These mobile applications have already spread the 'infection': Jharkhand Chief Minister Hemant Soren.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X