• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಿವ್ ಇನ್ ಸಂಬಂಧದ ಮಗು ಅಕ್ರಮ ಸಂತಾನವಲ್ಲ

By Srinath
|

ನವದೆಹಲಿ, ಏ.24- ಆಧುನಿಕ ಜೀವನಶೈಲಿಯ ಫಲವಾದ ಲಿವ್ ಇನ್ ಸಂಬಂಧ (live in relationship) ಮತ್ತೆ ಸುದ್ದಿಯಲ್ಲಿದೆ. ಲಿವ್ ಇನ್ ಸಂಬಂಧವನ್ನು ಈಗಾಗಲೇ ಕಾನೂನು ಚೌಕಟ್ಟಿನಲ್ಲಿ ಸ್ವೀಕರಿಸಿರುವ ಸುಪ್ರೀಂಕೋರ್ಟ್ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಹಾಕಿದೆ.

ಏನಪಾ ಅಂದರೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಜನಿಸಿದ ಮಗುವಿಗೆ ಕಾನೂನು ಮಾನ್ಯತೆ ನೀಡಿರುವ ಸುಪ್ರೀಂಕೋರ್ಟ್ ದೀರ್ಘ ಕಾಲ ಗಂಡ- ಹೆಂಡತಿಯಂತೆ ಲಿವಿಂಗ್ ಟುಗೆದರ್ ನಡೆಸಿ, ಆ ಸಂಬಂಧದಲ್ಲಿ ಮಕ್ಕಳು ಜನಿಸಿದರೆ ಕಾನೂನು ದೃಷ್ಟಿಯಲ್ಲಿ ಆ ಗಂಡು-ಹೆಣ್ಣು ಮದುವೆಯಾದಂತೆ ಎಂದು ನ್ಯಾಯಾಂಗವು ಸ್ಪಷ್ಟಪಡಿಸಿದೆ.

ಅಂದರೆ 'ಅಂತಹ ಮಕ್ಕಳು ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಕ್ಕಳಲ್ಲ' ಎಂಬುದು ಸುಪ್ರೀಂ ತೀರ್ಮಾನವಾಗಿದೆ. ನ್ಯಾಯಮೂರ್ತಿಗಳಾದ ಬಿಎಸ್ ಚೌಹಾಣ್ ಮತ್ತು ಜೆ ಚೆಲಮೇಶ್ವರ್ ಅವರ ನ್ಯಾಪೀಠವು ಈ ಮಹತ್ವದ ಆದೇಶ ನೀಡಿದೆ. (Live in ಪಾಪ್ವೂ ಅಲ್ಲ ಅಪರಾಧವೂ ಅಲ್ಲ: ಹಾಗಾಗಿ)

ಮಕ್ಕಳ ಬಂಧ ಮತ್ತು ವಿವಾಹ ಬಂಧನದೊಳಕ್ಕೆ ಲಿವ್ ಇನ್ ಸಂಬಂಧ:

ಗಮನಾರ್ಹವೆಂದರೆ ಕೋರ್ಟ್ ಆಧುನಿಕತೆ ಕಾಲಕ್ಕೆ ತಕ್ಕಂತೆ ಫ್ಯಾಷನ್ ಆಗಿ ತೆಗೆದುಕೊಂಡು ಯುವಕ-ಯುವತಿಯರು ಲಿವ್ ಇನ್ ಸಂಬಂಧದ ಬಂಧನಕ್ಕೊಳಪಡುತ್ತಿದ್ದಾರೆ. ಕಾಲಾಂತರದಲ್ಲಿ ಆ ಸಂಬಂಧಗಳು ಮುರಿದುಬೀಳುವುದು ಅಥವಾ ಅದರ ದುರುಪಯೋಗವಾಗುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿವೆ. ಕೋರ್ಟಿನ ಈ ಮಹತ್ವದ ತೀರ್ಪಿನಿಂದ ಲಿವ್ ಇನ್ ಸಂಬಂಧದ ಸ್ವೇಚ್ಛಾಚಾರಕ್ಕೆ ಇನ್ನಾದರೂ ಕಡಿವಾಣ ಬೀಳುತ್ತದಾ? ಕಾದು ನೋಡಬೇಕು.

ನ್ಯಾಯಯುತ ವಿವಾಹ ಅಂದರೆ ಸಂಪ್ರದಾಯಬದ್ಧ ಆಚರಣೆಯಂತೆ ಗಂಡ-ಹೆಂಡತಿ ಆಗುವುದಷ್ಟೇ ಮದುವೆ ಅಂತಾಗುವುದಿಲ್ಲ. ಇಂತಹ ದೀರ್ಘ ಕಾಲದ ಲಿವ್ ಇನ್ ಸಂಬಂಧಗಳನ್ನು ಸಹ ವಿವಾಹದ ಚೌಕಟ್ಟಿನೊಳಕ್ಕೆ ತರಬಹುದಾಗಿದ್ದು, ಅಂತಹ ದಂಪತಿ ಸತಿ-ಪತಿಯಾಗುತ್ತಾರೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

English summary
Child born out of live in relationship is not illegitimate Supreme Court. The Court has clarified that if a man and woman "lived like husband and wife" for a long period and had children, the judiciary would presume that the two were married. More Importantly, the SC has said children born out of prolonged live-in relationships could not be termed illegitimate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X