ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀಫ್‌ ಡಿಫೆನ್ಸ್‌ ಸ್ಟಾಫ್ ಹುದ್ದೆಗೆ ನಿವೃತ್ತಿ ನಿಯಮ ಅಂತಿಮ

|
Google Oneindia Kannada News

ನವದೆಹಲಿ, ಡಿಸೆಂಬರ್ 30: ಇನ್ನೆರಡು ದಿನಗಳಲ್ಲಿ ದೇಶವು ಮೊದಲ ಚೀಫ್‌ ಡಿಫೆನ್ಸ್‌ ಸ್ಟಾಫ್(ಸಿಡಿಎಸ್) ಹುದ್ದೆಗೆ ನೇಮಕ ನಡೆಯಲಿದ್ದು, ಈಗ ನಿವೃತ್ತಿ ವಯಸ್ಸು ನಿಗದಿಗೊಳಿಸಲಾಗಿದೆ.

ಸಿಡಿಎಸ್ ಹುದ್ದೆ ಏರುವವರು 65 ವರ್ಷದವರೆಗೆ ಮುಂದುವರಿಯಬಹುದಾಗಿದೆ. ಇದರ ಜತೆಗೆ ಮೂರು ಸೇನಾ ಮುಖ್ಯಸ್ಥರು 62 ವರ್ಷಕ್ಕೆ ನಿವೃತ್ತಿ ಹೊಂದಲಿದ್ದಾರೆ. ಸೇನಾ ಮುಖ್ಯಸ್ಥರ ಹುದ್ದೆಯು 3 ವರ್ಷದ ಅವಧಿ ಹೊಂದಿರಲಿದೆ. ಇವರಲ್ಲಿ ಹಿರಿಯರಿಗೆ ಸಿಡಿಎಸ್ ಹುದ್ದೆ ದೊರೆಯಲಿದೆ.

ಸಿಡಿಎಸ್ ಆದವರು ಯಾವುದೇ ಸರ್ಕಾರಿ ಹುದ್ದೆ ಅನುಭವಿಸುವಂತಿಲ್ಲ. ಅದಲ್ಲದೇ ನಿವೃತ್ತಿಯಾದ 5 ವರ್ಷಗಳ ಅವಧಿಗೆ ಖಾಸಗಿ ಕಂಪನಿ ಸೇರಲು ಕೂಡ ನಿರ್ಬಂಧವಿದೆ.

Bipin Rawat

ಐದು ವರ್ಷಗಳ ಬಳಿಕವೂ ಕೇಂದ್ರದ ಅನುಮತಿಯಿಲ್ಲದೇ ಯಾವುದೇ ಖಾಸಗಿ ಹುದ್ದೆ ಒಪ್ಪಿಕೊಳ್ಳುಂತಿಲ್ಲ.

ಭಾರತದಲ್ಲಿ ಸಿಡಿಎಸ್ ಹುದ್ದೆ ಸೃಷ್ಟಿಗೆ ಕಳೆದ ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿತ್ತು. ರಕ್ಷಣಾ ವ್ಯವಹಾರ ಹಾಗೂ ಭದ್ರತೆಗೆ ಸಂಬಂಧಿಸಿ ಮೂರು ಸೇನೆಗಳ ಪರವಾಗಿ ಕೇಂದ್ರ ಸರ್ಕಾರಕ್ಕೆ ಸಿಡಿಎಸ್ ನೇರ ಸಲಹೆ, ಸೂಚನೆ ನೀಡಲಿದ್ದಾರೆ. ಹಾಗೆಯೇ ಮೂರು ಸೇನೆಗಳ ಮಧ್ಯೆ ಸಮನ್ವಯ ಸಾಧಿಸಲು ಕೂಡ ನೆರವಾಗಲಿದ್ದಾರೆ.

ಕೇಂದ್ರದ ಮೂಲಗಳ ಪ್ರಕಾರ ಮಂಗಳವಾರ ಸಂಜೆಯೊಳಗೆ ಮೊದಲ ಸಿಡಿಎಸ್ ನೇಮಕವಾಗಲಿದೆ. ಭೂಸೇನೆಯ ಹಾಲಿ ಮುಖ್ಯಸ್ಥ ಬಿಪಿನ್‌ ರಾವತ್‌ ಮೊದಲ ಸಿಡಿಎಸ್ ಆಗುವುದು ಬಹುತೇಕ ಖಚಿತವಾಗಿದೆ.

English summary
Central Government Formulated the rules for Chief Defence staff for retirement CDS Will retire at the age of 65.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X