ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳ ನೇಮಕ ಮಾಡುವಲ್ಲಿ ಕೇಂದ್ರ ವಿಫಲ: ಪಿ ಚಿದಂಬರಂ

|
Google Oneindia Kannada News

ನವದೆಹಲಿ, ಆಗಸ್ಟ್ 06: ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳ ನೇಮಕ ಹಾಗೂ ನ್ಯಾಯಮಂಡಳಿಗಳಲ್ಲಿ ಅಧ್ಯಕ್ಷರ ಸ್ಥಾನ ಖಾಲಿ ಇದೆ, ಕೇಂದ್ರ ಸರ್ಕಾರ ಈ ಸ್ಥಾನಗಳನ್ನು ಭರ್ತಿ ಮಾಡಲು ವಿಫಲವಾಗಿದೆ' ಎಂದು ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ ಆರೋಪಿಸಿದ್ದಾರೆ.

ನಮ್ಮ ದೇಶದಲ್ಲಿ ಈ ಸ್ಥಾನಗಳಿಗೆ ಬೇಕಾಗಿರುವ ಅರ್ಹ ವಕೀಲರು ಮತ್ತು ನ್ಯಾಯಧೀಶರ ಕೊರತೆಗಳಿಲ್ಲ. ಆದರೆ ಕೇಂದ್ರ ಸರ್ಕಾರವು ತನ್ನ ಸಿದ್ಧಾಂತಗಳ ಬಗ್ಗೆ ಸಹಾನುಭೂತಿ ಹೊಂದಿರುವ ಜನರನ್ನು ಈ ಹುದ್ದೆಗಳಿಗಾಗಿ ಹುಡುಕುತ್ತಿದೆ. ಹಾಗಾಗಿ ಈ ಸ್ಥಾನಗಳು ಖಾಲಿಯಾಗಿಯೇ ಉಳಿದಿವೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪೆಗಾಸಸ್ ಬೇಹುಗಾರಿಕೆ ಬಗ್ಗೆ ತನಿಖೆಗೆ ಏಕೆ ಆದೇಶಿಸಿಲ್ಲ ಪ್ರಧಾನಿ ಮೋದಿ ಸರ್ಕಾರ!?ಪೆಗಾಸಸ್ ಬೇಹುಗಾರಿಕೆ ಬಗ್ಗೆ ತನಿಖೆಗೆ ಏಕೆ ಆದೇಶಿಸಿಲ್ಲ ಪ್ರಧಾನಿ ಮೋದಿ ಸರ್ಕಾರ!?

ಈ ಸಂಬಂಧ ಟ್ವೀಟ್ ಮಾಡಿರುವ ಅವರು, 'ಹೈಕೋರ್ಟ್‌ಗಳಿಗೆ ಮಂಜೂರಾಗಿರುವ 1,080 ನ್ಯಾಯಮೂರ್ತಿ ಹುದ್ದೆಗಳ ಪೈಕಿ 416 ಖಾಲಿಯಿವೆ.ಡಿಆರ್‌ಟಿ, ಎನ್‌ಸಿಎಲ್‌ಎಟಿ, ಟಿಡಿಎಸ್‌ಎಟಿ ಸೇರಿದಂತೆ ಹಲವು ನ್ಯಾಯಮಂಡಳಿಗಳಲ್ಲಿ ಅಧ್ಯಕ್ಷರ ಸ್ಥಾನಗಳೂ ಖಾಲಿಯಿವೆ' ಎಂದು ಅವರು ಹೇಳಿದ್ದಾರೆ.

Chidambaram Slams Govt Over Vacant Posts Of HC Judges, Tribunal Chairpersons

'7 ವರ್ಷಗಳಿಂದ ಮೋದಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದೆ. ಆದರೂ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ' ಎಂದು ದೂರಿದ್ದಾರೆ. ನಮ್ಮ ದೇಶದಲ್ಲಿ ಈ ಸ್ಥಾನಗಳಿಗೆ ಬೇಕಾಗಿರುವ ಅರ್ಹ ವಕೀಲರು ಮತ್ತು ನ್ಯಾಯಾಧೀಶರ ಕೊರತೆ ಇಲ್ಲ, ಆದರೆ ಕೇಂದ್ರ ಸರ್ಕಾರವು ತನ್ನ ಸಿದ್ಧಾಂತಗಳ ಬಗ್ಗೆ ಸಹಾನುಭೂತಿ ಹೊಂದಿರುವ ಜನರನ್ನು ಈ ಹುದ್ದೆಗಳಿಗಾಗಿ ಹುಡುಕುತ್ತಿದೆ. ಹಾಗಾಗಿ ಸ್ಥಾನಗಳು ಖಾಲಿಯಾಗಿಯೇ ಉಳಿದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಹಾಗೆಯೇ ಕೆಲವೇ ಕೆಲವು ದಿನಗಳ ಹಿಂದಷ್ಟೇ ಪೆಗಾಸಸ್ ವಿಷಯವಾಗಿ ಕೇಂದ್ರ ಸರ್ಕಾರವನ್ನು ದೂರಿದ್ದರು. ಇಸ್ರೇಲಿನ ಪೆಗಾಸಸ್ ತಂತ್ರಾಂಶದ ಮೂಲಕ ಬೇಹುಗಾರಿಕೆ ಪ್ರಕರಣದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿ ತನಿಖೆ ಅಥವಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನೇತೃತ್ವದ ಸಮಿತಿಗೆ ವಹಿಸುವಂತೆ ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ಆಗ್ರಹಿಸಿದ್ದಾರೆ. ದೇಶದಲ್ಲಿ ಬೇಹುಗಾರಿಕೆ ನಡೆದಿದೆಯೋ ಇಲ್ಲವೋ ಎನ್ನುವುದರ ಕುರಿತು ಸಂಸತ್ ಅನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು ಎಂದಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ. "ಕಳೆದ 2019ರಲ್ಲಿ ನಡೆದ ಚುನಾವಣೆಗಳ ಮಾಹಿತಿ ಬಹುಪಾಲು ಸೋರಿಕೆ ಆಗಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ.

ಆದರೆ ಬಿಜೆಪಿಗೆ ಅದರಿಂದ ಸಹಾಯವಾಗಿರಬಹುದು," ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಮಾಹಿತಿ ತಂತ್ರಜ್ಞಾನದ ವಿಷಯದಲ್ಲಿ ಸಂಸದೀಯ ಸ್ಥಾಯಿ ಸಮಿತಿಯ ತನಿಖೆಗಿಂತ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ತನಿಖೆ ಹೆಚ್ಚು ಪರಿಣಾಮಕಾರಿಯಾಗಬಲ್ಲದು ಎಂದು ಚಿದಂಬರಂ ಹೇಳಿದ್ದಾರೆ.

ಸಂಸತ್ತಿನ ಮಾಹಿತಿ ಮತ್ತು ತಂತ್ರಜ್ಞಾನ ಸಮಿತಿಯು ಆದೇಶದ ಮೇರೆಗೆ ತನಿಖೆ ನಡೆಸುತ್ತಿದ್ದು, ಜಂಟಿ ಸಂಸದೀಯ ಸಮಿತಿಯ ತನಿಖೆ ಅಗತ್ಯವಿಲ್ಲ ಎಂದ ಐಟಿ ತಂಡದ ಮುಖ್ಯಸ್ಥ ಶಶಿ ತರೂರ್ ಹೇಳಿಕೆಗೂ ಚಿದಂಬರಂ ತಿರುಗೇಟು ನೀಡಿದ್ದಾರೆ. ಐಟಿ ತಂಡದಲ್ಲಿ ಬಹುಪಾಲು ಸದಸ್ಯರು ಬಿಜೆಪಿಯವರೇ ಆಗಿದ್ದು, ಈ ತನಿಖೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪಿ ಚಿದಂಬರಂ ಸಂಪೂರ್ಣ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಸಂಸದೀಯ ಸಮಿತಿ ನಿಯಮಗಳು ಹೆಚ್ಚು ಕಟ್ಟುನಿಟ್ಟಾಗಿರುತ್ತವೆ. ಉದಾಹರಣೆಗೆ ಅವರು ಸಾಕ್ಷ್ಯವನ್ನು ಬಹಿರಂಗವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಸಾರ್ವಜನಿಕ ದೃಷ್ಟಿಯಲ್ಲಿ ಸಾಕ್ಷ್ಯಗಳನ್ನು ತೆಗೆದುಕೊಳ್ಳಲು, ಸಾಕ್ಷಿಗಳನ್ನು ಪರೀಕ್ಷಿಸಲು ಮತ್ತು ದಾಖಲೆಗಳನ್ನು ಕರೆಸಲು ಸಂಸತ್ತಿನಿಂದ ಜಂಟಿ ಸಂಸದೀಯ ಸಮಿತಿ ಅಧಿಕಾರ ನೀಡಬಹುದು.

ಹಾಗಾಗಿ ಸಂಸದೀಯ ಸಮಿತಿಗಿಂತ ಜಂಟಿ ಸಂಸದೀಯ ಸಮಿತಿಗೆ ಹೆಚ್ಚಿನ ಅಧಿಕಾರವಿರುವುದಾಗಿ ಭಾವಿಸುತ್ತೇನೆ," ಎಂದು ಪಿ ಚಿದಂಬರಂ ಹೇಳಿದರು. ಇದೇ ವೇಳೆ ಈ ವಿಷಯದ ಬಗ್ಗೆ ಸಂಸದೀಯ ಸಮಿತಿ ತನಿಖೆ ಮಾಡುವ ಮಟ್ಟಕ್ಕಿಲ್ಲ ಎಂದು ದೂಷಿಸುತ್ತಿಲ್ಲ. ಬದಲಾಗಿ ಸಂಸದೀಯ ಮಂಡಳಿ ತನಿಖೆಯನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.

English summary
Pointing at several vacant posts of High Court judges and tribunal chairpersons, senior Congress leader P Chidambaram on August 7 alleged the government is not able to fill these vacancies as it is looking for people who sympathise with its "retrograde" philosophy and ideology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X