ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಷ್ಮಾ ಚುನಾವಣೆ ನಿವೃತ್ತಿ... ಚಿದು ಟ್ವೀಟ್ ನಲ್ಲಿ ಕಂಡ ವಿಕೃತಿ!

|
Google Oneindia Kannada News

Recommended Video

ಸುಷ್ಮಾ ಚುನಾವಣೆ ನಿವೃತ್ತಿ... ಚಿದು ಟ್ವೀಟ್ ನಲ್ಲಿ ಕಂಡ ವಿಕೃತಿ! | Oneindia Kannada

ನವದೆಹಲಿ, ನವೆಂಬರ್ 21: ವಿರೋಧ ಪಕ್ಷ ಎಂದ ಮಾತ್ರಕ್ಕೆ ಮಾಡಿದ್ದೆಲ್ಲವನ್ನೂ ಆಡಿಕೊಳ್ಳಲೇಬೇಕಾ?, ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹೊರತಾಗಿಯೂ ವೈಯಕ್ತಿಕ ನಿರ್ಧಾರಗಳನ್ನು ಗೌರವಿಸುವ ಪ್ರಬುದ್ಧತೆಯನ್ನು ರಾಜಕಾರಣಿಗಳಲ್ಲಿ ಹುಡುಕುವುದು ಮರೀಚಿಕೆಯಾ?

ಇಂಥ ಪ್ರಶ್ನೆ ಎದ್ದಿದ್ದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಬಿಜೆಪಿ ನಾಯಕಿ, ವಿದೇಶಾಂಗ ಸಚಿವ ಸುಷ್ಮಾ ಅವರ ಬಗ್ಗೆ ಮಾಡಿದ ಟ್ವೀಟ್ ನೋಡಿದಾಗ.

ನಿವೃತ್ತಿ ಪರ್ವ ಸುಷ್ಮಾರಿಂದ ಆರಂಭವಷ್ಟೇ; ಲೋಕಸಭೆ ಚುನಾವಣೆಗೆ ಏನೆಲ್ಲ ಬದಲಾವಣೆ?ನಿವೃತ್ತಿ ಪರ್ವ ಸುಷ್ಮಾರಿಂದ ಆರಂಭವಷ್ಟೇ; ಲೋಕಸಭೆ ಚುನಾವಣೆಗೆ ಏನೆಲ್ಲ ಬದಲಾವಣೆ?

ಮಧ್ಯಪ್ರದೇಶದಲ್ಲಿ ಮಂಗಳವಾರ ನಡೆದ ಸಭೆಯೊಂದರಲ್ಲಿ ಸುಷ್ಮಾ ಸ್ವರಾಜ್ ಅವರು ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸುವ ಸೂಚನೆ ನೀಡಿದರು. ಅನಾರೋಗ್ಯದ ಕಾರಣ ತಾವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರು. ಅವರ ಈ ಏಕಾಏಕಿ, ಅನಿರೀಕ್ಷಿತ ನಿರ್ಧಾರ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸುತ್ತಿದ್ದರೆ, ಇತ್ತ ಪಿ ಚಿದಂಬರಂ ಮಾಡಿದ ಟ್ವೀಟ್ ಸುಷ್ಮಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು.

ನಿವೃತ್ತಿ ಘೋಷಣೆ ಮಾಡಿದ ಸುಷ್ಮಾ ಸ್ಮಾರ್ಟ್!

"ಸುಷ್ಮಾ ಸ್ವರಾಜ್ ಮಧ್ಯಪ್ರದೇಶದಿಂದ ಸಂಸತ್ತಿಗೆ ಆಯ್ಕೆಯಾದ ಸಂಸದರು ಮತ್ತು ಅವರು ಸ್ಮಾರ್ಟ್! ಮಧ್ಯಪ್ರದೇಶದಲ್ಲಿ ಅವರು ಈಗ 2019 ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸೋಲ್ಲ ಎಂದು ಘೋಷಿಸಿದ್ದಕ್ಕೆ ಕಾರಣವಿದೆ" ಎಂದು ಪಿ.ಚಿದಂಬರಂ ಟ್ವೀಟ್ ಮಾಡಿದ್ದರು. ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಬಿಜೆಪಿಯತ್ತ ಅನುಕಂಪದ ಅಲೆ ಸೃಷ್ಟಿಸಲು ಸುಷ್ಮಾ ಈ ರೀತಿ ಘೋಷಣೆ ಮಾಡಿದ್ದಾರೆ ಎಂಬರ್ಥದಲ್ಲಿದ್ದ ಚಿದಂಬರಂ ಟ್ವೀಟ್ ಸಾಕಷ್ಟು ವಿವಾದ ಸೃಷ್ಟಿಸಿತ್ತು.

ಲೋಕಸಭೆಗೆ ಸ್ಪರ್ಧೆ ಇಲ್ಲ: ಸಚಿವೆ ಸುಷ್ಮಾ ಸ್ವರಾಜ್ ರಾಜಕೀಯ ನಿವೃತ್ತಿ?ಲೋಕಸಭೆಗೆ ಸ್ಪರ್ಧೆ ಇಲ್ಲ: ಸಚಿವೆ ಸುಷ್ಮಾ ಸ್ವರಾಜ್ ರಾಜಕೀಯ ನಿವೃತ್ತಿ?

ತೇಪೆ ಹಚ್ಚುವ ಕಾರ್ಯ!

ಹಾಗಂತ ಟ್ವೀಟ್ ಮಾಡಿ, ಅದು ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾದ ಮೇಲೆ ಎಚ್ಚೆತ್ತುಕೊಂಡ ಚಿದಂಬರಂ, 'ಅನಾರೋಗ್ಯದ ನಡುವೆಯೂ ಸುಷ್ಮಾ ಸ್ವರಾಜ್ ಅವರು ಘನತೆಯಿಂದ ದೇಶದ ಸೇವೆ ಮಾಡಿದ್ದಾರೆ. ಅವರಿಗೆ ದೇವರು ಉತ್ತಮ ಆರೋಗ್ಯ ಮತ್ತು ಆಯಸ್ಸು ನೀಡಲಿ' ಎಂದು ಹಾರೈಸುತ್ತೇನೆ ಟ್ವೀಟ್ ಮಾಡಿ, ತಮ್ಮ ಮೊದಲ ಟ್ವೀಟ್ ಗೆ ತೇಪೆ ಹಚ್ಚುವ ಕೆಲಸ ಮಾಡಿದರು.

ಸೋನಿಯಾ-ಸುಷ್ಮಾ ಜಿದ್ದಾಜಿದ್ದಿ ನೆನಪಿಸಿದ ಬಳ್ಳಾರಿಯ ಉಗ್ರಪ್ಪ ಗೆಲುವುಸೋನಿಯಾ-ಸುಷ್ಮಾ ಜಿದ್ದಾಜಿದ್ದಿ ನೆನಪಿಸಿದ ಬಳ್ಳಾರಿಯ ಉಗ್ರಪ್ಪ ಗೆಲುವು

ನಿಮ್ಮ ಬಗ್ಗೆ ಮರುಕವಾಗುತ್ತಿದೆ!

ಸುಷ್ಮಾ ಸ್ವರಾಜ್ ಅವರ ಬಗ್ಗೆ ಅಂಥ ಟ್ವೀಟ್ ಮಾಡಿದ ಚಿದಂಬರಂ ಅವರನ್ನು ಆಡಿಕೊಂಡ ಬಿಜೆಪಿ ಶಾಸಕ ಸುರೇಶ್ ಕುಮಾರ್, 'ಚಿದಂಬರಂ ಅವರು ನಿಜಕ್ಕೂ ಅನುಭವೀ ವಕೀಲರೇ? ನನಗೆ ನಿಜಕ್ಕೂ ನಿಮ್ಮನ್ನು ನೋಡಿ ಮರುಕವಾಗುತ್ತಿದೆ' ಎಂದಿದ್ದಾರೆ.

ಕಾಂಗ್ರೆಸ್ ಎಲ್ಲೆಲ್ಲೂ ರಾಜಕೀಯ ಹುಡುಕುತ್ತದೆ!

ಕಾಂಗ್ರೆಸ್ ಎಂದಿಗೂ ತನ್ನ ರಾಜಕೀಯ ಮತ್ತು ನೈತಿಕ ಅಧಃಪತನದಿಂದ ಹೊರಬರುವುದಿಲ್ಲ. ಸುಷ್ಮಾ ಸ್ವರಾಜ್ ಅವರು ಸ್ಪಷ್ಟವಾಗಿ ತಾವು ಚುನಾವಣೆ ರಾಜಕೀಯದಿಂದ ಮಾತ್ರ ಹಿಂದೆ ಸರಿಯುವುದಾಗಿ ಹೇಳಿದರೂ, ಅವರು ರಾಜಕೀಯದಿಂದಲೇ ನಿವೃತ್ತರಾಗುತ್ತಿದ್ದಾರೆ ಎಂಬಂತೆ ಕಾಂಗ್ರೆಸ್ ಮಾತನಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

ಪ್ರಬುದ್ಧತೆ ಮೆರೆದ ಶಶಿ ತರೂರ್!

ಆದರೆ ಚಿದಂಬರಂ ಅವರ ನಡೆಗೆ ವ್ಯತಿರಿಕ್ತ ಎಂಬಂತೆ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರು ಟ್ವೀಟ್ ಮಾಡಿದ್ದಾರೆ. "ನಮ್ಮೆಲ್ಲ ರಾಜಕೀಯ ಭಿನ್ನಾಭಿಪ್ರಾಯದ ಹೊರತಾಗಿಯೂ ನಾನು ಸುಷ್ಮಾ ಸ್ವರಾಜ್ ಅವರು ಮುಂದೆ ಸಂಸತ್ತಿನಲ್ಲಿರುವುದಿಲ್ಲ ಎಂಬುದನ್ನು ನೆನೆದು ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಮಾಜಿ ವಿದೇಶಾಂಗ ಸಚಿವನಾಗಿ, ಅವರನ್ನೊಬ್ಬ ಮಹಾನ್ ವಿದೇಶಾಂಗ ಸಚಿವೆ ಎಂದು ನಂಬುತ್ತೇನೆ" ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

English summary
Former union minister and Congress leader P Chidambaram's tweet on External affairs minister Sushma Swaraj's announcement on her retirement from election politics becomes a controversy now
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X