ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಿಕಾ ಅಭಿನಯದ ಚಪಾಕ್ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ

|
Google Oneindia Kannada News

ನವದೆಹಲಿ, ಜನವರಿ 12: ನಟಿ ದೀಪಿಕಾ ಪಡುಕೋಣೆ ಅಭಿನಯದ ಚಪಾಕ್ ಹಿಂದಿ ಚಿತ್ರಕ್ಕೆ ಮತ್ತೆ ಸಂಕಟ ಎದುರಾಗಿದೆ. ಚಿತ್ರ ನಿರ್ಮಾಪಕರ ವಿರುದ್ಧ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಪರ ವಕೀಲೆ ಅಪರ್ಣ ಭಟ್ ನ್ಯಾಯಾಲಯದ ಮೊರೆ ಹೋಗಿದ್ದು, ಜನವರಿ 15ರೊಳಗೆ ಕೋರ್ಟ್ ಆದೇಶ ಪಾಲಿಸದಿದ್ದರೆ, ಚಿತ್ರ ಪ್ರದರ್ಶನ ನಿಲ್ಲಿಸಬೇಕಾಗುತ್ತದೆ.

''ಸಿನಿಮಾದಲ್ಲಿ ನನಗೆ ಕ್ರೆಡಿಟ್ ಕೊಟ್ಟಿಲ್ಲ" ಎಂದು ಲಕ್ಷ್ಮಿ ಅಗರ್ವಾಲ್ ಮೇಲೆ ಆಸಿಡ್ ದಾಳಿ ಆದ ಬಳಿಕ ವಕೀಲೆ ಅಪರ್ಣ ಭಟ್ ಕೋರ್ಟ್ ನಲ್ಲಿ ವಾದ ಮಾಡಿದ್ದರು. ಲಕ್ಷ್ಮಿ ಜೀವನದಲ್ಲಿ ಅಪರ್ಣ ಭಟ್ ಅವರದ್ದು ಪ್ರಮುಖ ಪಾತ್ರವಾಗಿದೆ. ಆದರೆ, ಚಪಾಕ್ ಸಿನಿಮಾದಲ್ಲೂ ತಮ್ಮ ಪಾತ್ರ ಬಳಸಿದ್ದರೂ, ಟೈಟಲ್ ಕಾರ್ಡ್ ನಲ್ಲಿ ಯಾವುದೇ ಕ್ರೆಡಿಟ್ ನೀಡಿಲ್ಲ ಎನ್ನುವುದು ವಕೀಲೆಯ ಆರೋಪಿಸಿದ್ದರು. ಈ ಕುರಿತಂತೆ ಸೂಕ್ತ ಗೌರವಕ್ಕೆ ಆಗ್ರಹಿಸಿ ಕೋರ್ಟ್ ಮೊರೆ ಹೋಗಿದ್ದರು.

‘Chhapaak’: Delhi HC Restrains Screening From January 15

ಅರ್ಜಿ ಆಲಿಸಿದ ಹೆಚ್ಚುವರಿ ಹಿರಿಯ ಸಿವಿಲ್ ಜಡ್ಜ್ ಡಾ. ಪಂಕಜ್ ಶರ್ಮ ಚಿತ್ರತಂಡಕ್ಕೆ ಕ್ರೆಡಿಟ್ ನೀಡುವಂತೆ ಸೂಚಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಮುಂಚೆ ಕ್ರೆಡಿಟ್ ನೀಡಿ ನಂತರ ಬಿಡುಗಡೆ ಮಾಡಿ ಎಂದು ಆದೇಶಿಸಿದ್ದರು. ಆದರೆ, ಜನವರಿ 10ರಂದು ಚಿತ್ರ ಬಿಡುಗಡೆಯಾಗಿದ್ದು, ಅಪರ್ಣ ಅವರಿಗೆ ಕ್ರೆಡಿಟ್ ನೀಡಲಾಗಿಲ್ಲ.

Chhapaak Review: ಅದ್ಭುತ ಸಿನಿಮಾ, ಅತ್ಯದ್ಭುತ ನಟನೆ

ನಂತರ ಪ್ರಕರಣ ದೆಹಲಿ ಕೋರ್ಟ್ ಮೆಟ್ಟಿಲೇರಿತ್ತು. ಅಪರ್ಣ ಸಲ್ಲಿಸಿದ್ದ ಅರ್ಜಿ ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಫಾಕ್ಸ್ ಸ್ಟಾರ್ ಸ್ಟುಡಿಯೋ ಪರ ವಕೀಲರು ವಾದಿಸಿ, ಅಪರ್ಣ ಅವರಿಗೆ ಯಾವುದೇ ಹಕ್ಕು ಇಲ್ಲ, ಚಿತ್ರೀಕರಣದ ವೇಳೆ ಅವರ ನೆರವು ಪಡೆದು, ಗೌರವ ಸಲ್ಲಿಸಲಾಗಿದೆ ಎಂದಿದ್ದರು.

ಹೈಕೋರ್ಟ್ ಜಸ್ಟೀಸ್ ಪ್ರತಿಭಾ ಎಂ ಸಿಂಗ್ ಅವರು, ಕೆಳ ಹಂತದ ನ್ಯಾಯಾಲಯದ ಆದೇಶ ಪರಿಗಣಿಸಿ, ಜನವರಿ 15ರೊಳಗೆ ಆದೇಶ ಪಾಲಿಸದಿದ್ದರೆ, ಮಲ್ಟಿಪೆಕ್ಸ್, ಲೈವ್ ಸ್ಟ್ರೀಮಿಂಗ್ ಆಪ್, ಸಿಂಗಲ್ ಸ್ಕ್ರೀನ್ ಸೇರಿದಂತೆ ಎಲ್ಲೆಡೆ ಚಿತ್ರ ಪ್ರದರ್ಶನ ಬಂದ್ ಮಾಡುವಂತೆ ಶನಿವಾರ(ಜನವರಿ 11)ದಂದು ಮತ್ತೊಮ್ಮೆ ಆದೇಶ ಹೊರಡಿಸಿದ್ದಾರೆ.

ದೀಪಿಕಾ ಅಭಿನಯದ 'ಚಪಾಕ್' ಚಿತ್ರ ಬೆಂಬಲಿಸಲು ಖರ್ಗೆ ಪುತ್ರ ಮಾಡಿದ್ದೇನು!ದೀಪಿಕಾ ಅಭಿನಯದ 'ಚಪಾಕ್' ಚಿತ್ರ ಬೆಂಬಲಿಸಲು ಖರ್ಗೆ ಪುತ್ರ ಮಾಡಿದ್ದೇನು!

ಜೆ ಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದೀಪಿಕಾ ಸಿನಿಮಾ ನೋಡಬಾರದು ,ಮೇಘನಾ ಗುಲ್ಜಾರ್ ನಿರ್ದೇಶನದ ಚಪಾಕ್ ಸಿನಿಮಾವನ್ನ ನಿಷೇಧಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಒಂದೆಡೆ ನಡೆದಿದ್ದರೆ, ಅನೇಕ ರಾಜ್ಯಗಳಲ್ಲಿ ಈ ಚಿತ್ರದ ಟಿಕೆಟ್ ದರದ ಮೇಲೆ ತೆರಿಗೆ ತೆಗೆದು ಹಾಕಲಾಗಿದೆ. ಸದ್ಯಕ್ಕೆ ಚಪಾಕ್ ಸಿನಿಮಾಗೆ ಯಾವುದೇ ಅಡ್ಡಿ ಆತಂಕ ಇಲ್ಲ. ಆದರೆ ಕಾನೂನು ಸಮರ ಮುಂದುವರೆದಿದ್ದು, ವಕೀಲೆ ಅಪರ್ಣಗೆ ಕ್ರೆಡಿಟ್ ನೀಡದಿದ್ದರೆ ಪ್ರದರ್ಶನಕ್ಕೆ ತಡೆಯುಂಟಾಗಲಿದೆ.

English summary
The Delhi High Court on Saturday restrained the makers of the Deepika Padukone starer “Chhapaak” from releasing without giving credit to the victim’s lawyer Aparna Bhat who represented real-life acid attack survivor Lakshmi Agarwal in her legal battle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X