• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

5 ವರ್ಷಗಳಲ್ಲಿ ಭಾರತದ 'ಬಣ್ಣ' ಎಷ್ಟೆಲ್ಲ ಬದಲಾಯಿತು ನೋಡಿ...

|
   2014 ರಿಂದ 2018 ಬಿಜೆಪಿ ಮತ್ತು ಕಾಂಗ್ರೆಸ್ ಆಳ್ವಿಕೆಯ ರಾಜ್ಯಗಳು | 5 ವರ್ಷಗಳಲ್ಲಿ ಭಾರತದ ಬಣ್ಣ ಬದಲಾಗಿದ್ದು ಹೀಗೆ

   ನವದೆಹಲಿ, ಡಿಸೆಂಬರ್ 11: ಕಳೆದ ಐದು ವರ್ಷಗಳಲ್ಲಿ ಭಾರತದ ರಾಜಕೀಯ ಇತಿಹಾಸ ಸಾಕಷ್ಟು ಬದಲಾಗಿದೆ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿತ್ತು. 2018ರ ಮಾರ್ಚ್‌ ವೇಳೆಗೆ ಶೇ 70ರಷ್ಟು ಭಾರತೀಯರು ಬಿಜೆಪಿ ಆಡಳಿತದ ರಾಜ್ಯಗಳಲ್ಲಿದ್ದರು.

   ಮಾರ್ಚ್‌ನಲ್ಲಿ 21 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿತ್ತು. ಉತ್ತರ ಪ್ರದೇಶ, ಮಹಾರಾಷ್ಟ್ರ, ಹರಿಯಾಣಗಳಲ್ಲಿ ಭಾರಿ ಗೆಲುವು ಕಂಡಿತ್ತು.

   ಪಂಚ ರಾಜ್ಯ ಸೋಲಿನ ಬಳಿಕ ಬಿಜೆಪಿಗೆ ಉಳಿದದ್ದು ಎಷ್ಟು ರಾಜ್ಯಗಳು?

   ಬಳಿಕ ತ್ರಿಪುರಾದಲ್ಲಿ ಸಿಪಿಎಂಗೆ ಆಘಾತಕಾರಿ ಸೋಲುಣಿಸಿತು. ಜೊತೆಗೆ ನಾಗಾಲ್ಯಾಂಡ್‌ನಲ್ಲಿಯೂ ರಾಜಕೀಯವಾಗಿ ಪ್ರಚಲಿತಕ್ಕೆ ಬಂದಿತು. 21 ರಾಜ್ಯಗಳಲ್ಲಿ ಸ್ವತಂತ್ರವಾಗಿ, ಇಲ್ಲವೇ ಮೈತ್ರಿ ಮೂಲಕ ಅಧಿಕಾರದಲ್ಲಿತ್ತು.

   ಯಾವ ಪಕ್ಷವೂ ಈ ರೀತಿ ವ್ಯಾಪಕವಾಗಿ ಸರ್ಕಾರ ರಚಿಸದ ಕಾರಣ ಇದನ್ನು ಬೃಹತ್ ಸಾಧನೆ ಎಂದೇ ಪರಿಗಣಿಸಲಾಗಿದೆ. 1993ರ ಅಂತ್ಯದ ವೇಳೆಗೆ ಕಾಂಗ್ರೆಸ್ 26 ರಾಜ್ಯಗಳ ಪೈಕಿ 16ರಲ್ಲಿ ಸರ್ಕಾರದ ಭಾಗವಾಗಿತ್ತು. ಅದರಲ್ಲಿ 15 ರಾಜ್ಯಗಳಲ್ಲಿ ಅದು ಸ್ವತಂತ್ರವಾಗಿ ಅಧಿಕಾರ ಸಂಪಾದಿಸಿತ್ತು.

   ಆದರೆ, ಬಿಜೆಪಿಯ ಈ ಪ್ರಾಬಲ್ಯ ಮುಂದುವರೆದಿಲ್ಲ. ತನ್ನ ಕೈಯಲ್ಲಿದ್ದ ಮೂರು ರಾಜ್ಯಗಳನ್ನು ಬಿಜೆಪಿ ಕಳೆದುಕೊಳ್ಳುವ ಮೂಲಕ ಬದಲಾವಣೆಗಳು ಉಂಟಾದವು. ಹಿಂದಿ ಪ್ರಶಸ್ತ್ಯದ ಪ್ರದೇಶಗಳಲ್ಲಿ ಸೋಲು ಅನುಭವಿಸಿತು. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢಗಳಲ್ಲಿ ಅಧಿಕಾರವನ್ನೇ ಕಳೆದುಕೊಂಡಿತು.

   ಕಾಂಗ್ರೆಸ್ ಮುಕ್ತ ಈಶಾನ್ಯ ಭಾರತ, ಬಿಜೆಪಿ ಕನಸು ನನಸಾಯ್ತು!

   ಇದಕ್ಕೂ ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ಮೈತ್ರಿ ಸರ್ಕಾರದಿಂದ ಬಿಜೆಪಿ ಹೊರಬಂದಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು.

   2014ರಲ್ಲಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಳ್ಳುವಾಗ 13 ರಾಜ್ಯಗಳಲ್ಲಿದ್ದ ಕಾಂಗ್ರೆಸ್ ಸರ್ಕಾರ, ಕೇವಲ ನಾಲ್ಕು ಸ್ಥಾನಗಳಿಗೆ ಕುಸಿಯಿತು.

   ಇತ್ತೀಚಿನ ವಿಧಾನಸಭಾ ಫಲಿತಾಂಶದ ಬಳಿಕ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ಪಂಜಾಬ್, ಕರ್ನಾಟಕ ಮತ್ತು ಪುದುಚೆರಿಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಜೊತೆಗೆ ಮಿಜೋರಾಂನಲ್ಲಿನ ಅಧಿಕಾರವನ್ನು ಕಳೆದುಕೊಂಡಿದೆ.

   2014ರ ಭಾರತದ ರಾಜಕೀಯ

   2014ರ ಭಾರತದ ರಾಜಕೀಯ

   2014ರ ಮಧ್ಯಭಾಗದಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ ಬಿಜೆಪಿ ಕೇವಲ ಏಳು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿತ್ತು. ಇಲ್ಲಿ ಕೇಸರಿ ಬಣ್ಣದಲ್ಲಿ ಬಿಂಬಿಸಿರುವುದು ಬಿಜೆಪಿ ಆಡಳಿತವಿದ್ದ ರಾಜ್ಯಗಳು. ನೀಲಿ ಬಣ್ಣಗಳನ್ನು ಸಂಕೇತಿಸಿರುವುದು ಕಾಂಗ್ರೆಸ್ ಆಡಳಿತದ ರಾಜ್ಯಗಳು. ಹಸಿರು ಬಣ್ಣದಲ್ಲಿರುವುದು ಇತರೆ ಪಕ್ಷಗಳ ಆಡಳಿತವಿರುವ ರಾಜ್ಯಗಳು.

   ಕಾಶ್ಮೀರದಲ್ಲಿಯೂ ಅಧಿಕಾರ

   ಕಾಶ್ಮೀರದಲ್ಲಿಯೂ ಅಧಿಕಾರ

   2015ರ ವೇಳೆಗೆ ಬಿಜೆಪಿಯ ಪ್ರಾಬಲ್ಯ ವಿಸ್ತರಿಸಿತು. ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಮೊದಲ ಬಾರಿಗೆ ಅಧಿಕಾರದ ಭಾಗ್ಯ ಅನುಭವಿಸುವ ಅವಕಾಶ ದೊರಕಿತು. ಮೆಹಬೂಬಾ ಮುಫ್ತಿ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಅಲ್ಲಿ ಸರ್ಕಾರ ರಚಿಸಿತ್ತು. ಇಲ್ಲಿ ಬಿಜೆಪಿ ಸ್ವತಂತ್ರ ಅಧಿಕಾರವಿರುವ ರಾಜ್ಯಗಳಲ್ಲದೆ, ಮೈತ್ರಿ ಮಾಡಿಕೊಂಡ ರಾಜ್ಯಗಳ ಬಣ್ಣವೂ ಕೇಸರಿಯಲ್ಲಿದೆ.

   ಪಂಚರಾಜ್ಯ ಫಲಿತಾಂಶ: ಬಿಜೆಪಿ ಧೂಳಿಪಟವಾಗೋಕೆ 5 ಕಾರಣ

   ಈಶಾನ್ಯದತ್ತ ವಿಸ್ತರಣೆ

   ಈಶಾನ್ಯದತ್ತ ವಿಸ್ತರಣೆ

   2016ರ ವೇಳೆಗೆ ಭಾರತದ ಭೂಪಟ ಮತ್ತಷ್ಟು ಕೇಸರಿಮಯವಾಯಿತು. ಉತ್ತರ ಭಾಗವನ್ನು ಆವರಿಸಿಕೊಂಡ ಕೇಸರಿ, ಪೂರ್ವದ ರಾಜ್ಯಗಳಲ್ಲಿಯೂ ನೆಲೆ ಕಂಡಿತು. ಅವುಗಳಲ್ಲಿ ಮೈತ್ರಿ ಸರ್ಕಾರದ ಪಾಲೂ ಇದೆ. ಮುಖ್ಯವಾಗಿ ಈಶಾನ್ಯ ರಾಜ್ಯಗಳಲ್ಲಿಯೂ ಬಿಜೆಪಿ ಛಾಯೆ ಪಸರಿಸಿತು.

   ಮಧ್ಯಭಾಗಕ್ಕೂ ಆವರಿಸಿತು

   ಮಧ್ಯಭಾಗಕ್ಕೂ ಆವರಿಸಿತು

   ಕಳೆದ ವರ್ಷ, 2017ರಲ್ಲಿ ಬಿಜೆಪಿ ಇನ್ನಷ್ಟು ಪ್ರಬಲವಾಯಿತು. ಮಧ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಮುಖ್ಯವಾಗಿ ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಗೋವಾ, ಉತ್ತರಾಖಂಡಗಳಲ್ಲಿ ಚುನಾವಣಾ ಫಲಿತಾಂಶ ಬಿಜೆಪಿ ಪರವಾಗಿತ್ತು.

   15 ವರ್ಷದ ಬಳಿಕ ಛತ್ತೀಸ್ ಗಢದಲ್ಲಿ ಮುಗ್ಗರಿಸಿದ ಬಿಜೆಪಿ: ಸೋಲಿಗೆ 5 ಕಾರಣಗಳು

   ಈಗಿನ ಸ್ಥಿತಿ ಹೀಗಿದೆ

   ಈಗಿನ ಸ್ಥಿತಿ ಹೀಗಿದೆ

   2018ರ ವಿಧಾನಸಭೆ ಚುನಾವಣೆ ಪೂರ್ಣಗೊಂಡ ಬಳಿಕ ಭಾರತದ ರಾಜಕೀಯ ಸ್ಥಿತಿ ಹೀಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಅಲ್ಲಿ ರಾಜ್ಯಪಾಲರ ಆಡಳಿತ ಇರುವುದರಿಂದ ಗುಲಾಬಿ ಬಣ್ಣ ಬಳಸಲಾಗಿದೆ. ಇನ್ನು ಕೇಂದ್ರ ಭಾರತದಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ ರಾಜ್ಯಗಳ ಹಿಡಿತವನ್ನು ಬಿಜೆಪಿ ಕಳೆದುಕೊಂಡಿದೆ.

   English summary
   BJP was in power in 21 states till March 2018. But the things have been changed, as it lost Madhya Pradesh, Rajasthan, Chhattisgarh, Punjab in recent elections. Here is the analysis how the colors of Indian states ruled by BJP and Congress is changed.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X