ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಕೊರೊನಾ 3ನೇ ಅಲೆ ಸಾಧ್ಯತೆ: ಸರ್ಕಾರದಿಂದ ಸಿದ್ಧತೆ

|
Google Oneindia Kannada News

ನವದೆಹಲಿ, ಜೂನ್ 12: ದೆಹಲಿಯಲ್ಲಿ ಕೊರೊನಾ ಮೂರನೇ ಅಲೆ ಶುರುವಾಗುವ ಸಾಧ್ಯತೆ ಇದ್ದು, ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಕೇಜ್ರಿವಾಲ್ ಆನ್‌ಲೈನ್ ಮೂಲಕ ದೆಹಲಿಯಾದ್ಯಂತ ಒಂಬತ್ತು ಆಸ್ಪತ್ರೆಗಳಲ್ಲಿ 22 ಹೊಸ ಪಿಎಸ್‌ಎ ಆಮ್ಲಜನಕ ಘಟಕಗಳನ್ನು ಜಂಟಿಯಾಗಿ ಉದ್ಘಾಟಿಸಿದರು.

ದೆಹಲಿಯಲ್ಲಿ ಮನೆ-ಮನೆಗೆ ತೆರಳಿ ಕೊರೊನಾ ಲಸಿಕೆ ಅಭಿಯಾನ: ಕೇಜ್ರಿವಾಲ್‌ ಘೋಷಣೆ ದೆಹಲಿಯಲ್ಲಿ ಮನೆ-ಮನೆಗೆ ತೆರಳಿ ಕೊರೊನಾ ಲಸಿಕೆ ಅಭಿಯಾನ: ಕೇಜ್ರಿವಾಲ್‌ ಘೋಷಣೆ

ಕೋವಿಡ್ ವಿರುದ್ಧ ಹೋರಾಡಲು ನಮ್ಮ ಸಿದ್ಧತೆಗಳನ್ನು ಬಲಪಡಿಸಲು ದೆಹಲಿಯಾದ್ಯಂತದ ಒಂಬತ್ತು ಆಸ್ಪತ್ರೆಗಳಲ್ಲಿನ ಈ ಹೊಸ ಆಮ್ಲಜನಕ ಘಟಕಗಳನ್ನು ಇಂದು ಸೇರಿಸಲಾಗಿದೆ ಎಂದರು.

Chance Of 3rd Wave Quite Real, Delhi GovtPreparingOn War Footing: Kejriwal

ನಂತರ ತಮ್ಮ ಭಾಷಣದಲ್ಲಿ 'ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಮೂರನೇ ಅಲೆ ಸಾಧ್ಯತೆಗಳು ಹೆಚ್ಚಿದೆ ಎಂದು ಎಚ್ಚರಿಸಿದ್ದಾರೆ. ಹೀಗಾಗಿ ನಾವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ನಮ್ಮ ಸರ್ಕಾರವು ಅದನ್ನು ಎದುರಿಸಲು ಯುದ್ಧದ ಹಾದಿಯಲ್ಲಿ ತಯಾರಿ ನಡೆಸುತ್ತಿದೆ ಎಂದು ಹೇಳಿದರು.

'ಕೋವಿಡ್ ಮೂರನೇ ಅಲೆ ನಮ್ಮನ್ನು ಹೊಡೆಯಬಾರದು ಎಂದು ನಾವು ಪ್ರಾರ್ಥಿಸುತ್ತೇವೆ. ಆದರೆ ಅದು ಸಂಭವಿಸಿದಲ್ಲಿ, ದೆಹಲಿ ಮತ್ತೆ ಒಟ್ಟಾಗಿ ಹೋರಾಡಬೇಕಾಗಿದೆ' ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಬ್ರಿಟನ್‌ನಿಂದ ಮೂರನೇ ಅಲೆಯ ಸೂಚನೆಗಳು ಬರುತ್ತಿವೆ. ಶೇಕಡಾ 45ರಷ್ಟು ವ್ಯಾಕ್ಸಿನೇಷನ್ ಹೊರತಾಗಿಯೂ ಪ್ರಕರಣಗಳು ಅಲ್ಲಿ ಹೆಚ್ಚುತ್ತಿವೆ. ಆದ್ದರಿಂದ, ನಾವು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದರು. ಮೂರನೇ ಅಲೆಯ ಸಂದರ್ಭದಲ್ಲಿ ಕೋವಿಡ್ ವಿರುದ್ಧ ಹೋರಾಡಲು ವ್ಯವಸ್ಥೆಯನ್ನು ಸಜ್ಜುಗೊಳಿಸಲು ದೆಹಲಿ ಸರ್ಕಾರವು ಆಮ್ಲಜನಕ ಟ್ಯಾಂಕರ್‌ಗಳನ್ನು ಖರೀದಿಸುತ್ತಿದೆ.

ಕೋವಿಡ್‌ನ ಎರಡನೇ ಅಲೆಯನ್ನು ದೆಹಲಿಯ ಜನರು ಭುಜಕ್ಕೆ ಭುಜ ಕೊಟ್ಟು ಶಿಸ್ತಿನಿಂದ ಎದುರಿಸುತ್ತಾ ಬಂದಿದ್ದು ಯಶಸ್ವಿಯಾಗಿ ಹೋರಾಡಿದ್ದೇವೆ. ಅಲ್ಲದೆ ಕೈಗಾರಿಕಾ ವಲಯವು ನಮ್ಮ ಜೊತೆಗೂಡಿ ಹೋರಾಡಿದ್ದು ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

Recommended Video

Rohini Sindhuri ಪರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಕೂಗು | Oneindia Kannada

English summary
Delhi Chief Minister Arvind Kejriwal on Saturday cautioned that the chances of the third wave of the COVID-19 pandemic were quite real, while he asserted that his government was preparing on a "war-footing" to combat it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X