ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹ ಸಚಿವ ಅಮಿತ್ ಶಾ ಮುಂದಿದೆ ಪ್ರಮುಖ ಐದು ಸವಾಲುಗಳು

|
Google Oneindia Kannada News

ನವದೆಹಲಿ, ಜೂನ್ 1: ಇದೇ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡು ದಿನಗಳ ಬಳಿಕ ಶನಿವಾರ ಮಹತ್ವದ ಗೃಹ ಖಾತೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಗುಜರಾತ್‌ನ ಗಾಂಧಿನಗರ ಲೋಕಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ಅಮಿತ್ ಶಾ, ಪ್ರಚಂಡ ಗೆಲುವು ಸಾಧಿಸಿದ್ದರು. ರಾಜ್ಯಸಭೆ ಸದಸ್ಯರಾಗಿದ್ದರೂ ಕಳೆದ ಬಾರಿಯ ಮೋದಿ ಸರ್ಕಾರದಲ್ಲಿ ಅವರು ಯಾವುದೇ ಸಂಪುಟ ಸ್ಥಾನ ಪಡೆದುಕೊಂಡಿರಲಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷಗಿರಿಯನ್ನಷ್ಟೇ ಮುಂದುವರಿಸಿದ್ದರು.

ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಮೂಲಕ ಸಂಪುಟಕ್ಕೆ ಪ್ರವೇಶಿಸಿರುವ ಅಮಿತ್ ಶಾ, ಕಚೇರಿಯಲ್ಲಿನ ತಮ್ಮ ಮೊದಲ ದಿನದಂದು ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮಿನಿಸ್ಟ್ರಿ ಆಫ್.... ಅಮಿತ್ ಶಾರನ್ನು ಕೆಣಕಿದ ಪ್ರಿಯಾಂಕ್ ಖರ್ಗೆ ಮಿನಿಸ್ಟ್ರಿ ಆಫ್.... ಅಮಿತ್ ಶಾರನ್ನು ಕೆಣಕಿದ ಪ್ರಿಯಾಂಕ್ ಖರ್ಗೆ

'ನಾಗರಿಕರ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣ ನರೇಂದ್ರ ಮೋದಿ ಅವರ ಸರ್ಕಾರದ ಮೊದಲ ಆದ್ಯತೆಯಾಗಲಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಇದನ್ನು ಸಾಧಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ' ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಕಳೆದ ಸಾಲಿನಲ್ಲಿ ಮೋದಿ ಅವರ ಸರ್ಕಾರದಲ್ಲಿ ರಾಜನಾಥ್ ಸಿಂಗ್ ಗೃಹಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಈ ಬಾರಿ ಅವರಿಗೆ ರಕ್ಷಣಾ ಇಲಾಖೆ ನೀಡಲಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆ ದೊಡ್ಡ ಮಟ್ಟದಲ್ಲಿರುವುದರಿಂದ ಅಮಿತ್ ಶಾ ಅವರಿಗೆ ಸವಾಲುಗಳೂ ಸಾಕಷ್ಟಿವೆ. ಪ್ರಸ್ತುತ ಅವರ ಹೆಗಲ ಮೇಲೆ ಅನೇಕ ಜವಾಬ್ದಾರಿಗಳಿವೆ. ಅವುಗಳಲ್ಲಿ ಪ್ರಮುಖವಾದ ಐದು ಸವಾಲುಗಳು ಇಲ್ಲಿವೆ...

ಒಳ ನುಸುಳುಕೋರರ ಸಮಸ್ಯೆ

ಒಳ ನುಸುಳುಕೋರರ ಸಮಸ್ಯೆ

ಭದ್ರತಾ ಪಡೆಗಳ ಕಣ್ತಪ್ಪಿಸಿ ಗಡಿ ದಾಟಿ ಬರುವ ನುಸುಳುಕೋರರ ಸಮಸ್ಯೆ ಭಾರತದ ಭದ್ರತೆಗೆ ಬಹುದೊಡ್ಡ ಬೆದರಿಕೆಗಳಲ್ಲಿ ಒಂದು. ಈ ನುಸುಳುಕೋರರ ಕಾಟ ಭಾರತ-ಪಾಕಿಸ್ತಾನ ಗಡಿಯಲ್ಲಿ ಮಾತ್ರವಲ್ಲದೆ, ಬಾಂಗ್ಲಾದೇಶ ಹಾಗೂ ಮಯನ್ಮಾರ್ ಗಡಿಯಲ್ಲಿಯೂ ಇದೆ. 2016-2018ರ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿಯೇ ಸುಮಾರು 400 ಉಗ್ರರು ಭಾರತದ ಗಡಿದಾಟಿ ಬರುವಲ್ಲಿ ಸಫಲರಾಗಿದ್ದಾರೆ ಎಂದು ಸರ್ಕಾರದ ದಾಖಲೆಗಳು ಹೇಳುತ್ತವೆ. ಬಾಂಗ್ಲಾದೇಶದ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ನುಸುಳುಕೋರರ ಹಾವಳಿ ತೀವ್ರವಾಗಿದೆ. ತಮ್ಮದೇ ನೆಲದಲ್ಲಿ ಮೂಲನಿವಾಸಿಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಕಳೆದ ಮೂರು-ನಾಲ್ಕು ದಶಕಗಳಲ್ಲಿ ಅಸ್ಸಾಂ ಈ ಬೆದರಿಕೆಗೆ ಒಳಗಾಗುತ್ತಿದೆ.

ಚಾಣಕ್ಯ ಅಮಿತ್ ಶಾಗೆ ಕೇಂದ್ರ ಗೃಹಖಾತೆ ಜವಾಬ್ದಾರಿ ಚಾಣಕ್ಯ ಅಮಿತ್ ಶಾಗೆ ಕೇಂದ್ರ ಗೃಹಖಾತೆ ಜವಾಬ್ದಾರಿ

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ

ಭಾರತದ ಮುಕುಟುದಲ್ಲಿರುವ ಜಮ್ಮು ಮತ್ತು ಕಾಶ್ಮೀರಲ್ಲಿ ಚುನಾಯಿತ ಸರ್ಕಾರವಿಲ್ಲದೆ ಬಹುತೇಕ ಒಂದು ವರ್ಷ ಉರುಳಿದೆ. ಕಳೆದ ಜೂನ್ ತಿಂಗಳಿನಿಂದ ಇಲ್ಲಿ ರಾಜ್ಯಪಾಲರ ಆಡಳಿತವಿತ್ತು. ಡಿಸೆಂಬರ್‌ನಿಂದ ರಾಷ್ಟ್ರಪರಿ ಆಳ್ವಿಕೆಯಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳ ಸಮಸ್ಯೆ, ಭಯೋತ್ಪಾದಕರ ಹಾವಳಿ, ಕಾನೂನು ಸುವ್ಯವಸ್ಥೆಯ ಸಮಸ್ಯೆಗಳು ಜೋರಾಗಿದೆ. ಈ ಕಾರಣಗಳಿಂದ ಚುನಾವಣಾ ಆಯೋಗ ವಿಧಾನಸಭೆ ಚುನಾವಣೆಯನ್ನು ಮುಂದೂಡಿದೆ. ನಾಗರಿಕರು ಮತ್ತು ಸೇನಾಪಡೆಗಳ ಮೇಲೆ ಉಗ್ರರ ದಾಳಿ ನಿರಂತರವಾಗಿದೆ. ಈ ನಡುವೆ ರಾಜ್ಯದ ವಿಶೇಷಾಧಿಕಾರವನ್ನು ತೆಗೆದುಹಾಕುವ ಸಂಗತಿಯೂ ಚರ್ಚೆಯಲ್ಲಿದೆ. ಇವುಗಳನ್ನು ಅಮಿತ್ ಶಾ ಹೇಗೆ ನಿಭಾಯಿಸುತ್ತಾರೆ ಎನ್ನುವುದು ಕುತೂಹಲವಾಗಿದೆ.

ನಾಗರಿಕ ಹಕ್ಕು ಮಸೂದೆ

ನಾಗರಿಕ ಹಕ್ಕು ಮಸೂದೆ

ಲೋಕಸಭೆ ಚುನಾವಣೆಗೂ ಮುನ್ನ ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ಮಸೂದೆ ವ್ಯಾಪಕ ಚರ್ಚೆಗೆ ಒಳಗಾಗಿತ್ತು. ಅಸ್ಸಾಂನಲ್ಲಿ ಎನ್‌ಆರ್‌ಸಿ ಜಾರಿ ಭಾರಿ ವಿವಾದ ಸೃಷ್ಟಿಸಿತ್ತು. ಅಸ್ಸಾಂನಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು (ಮುಖ್ಯವಾಗಿ ಬಾಂಗ್ಲಾದೇಶದವರು) ಗುರುತಿಸಿ ಅವರನ್ನು ತಮ್ಮ ದೇಶಕ್ಕೆ ಮರಳಿ ಕಳುಹಿಸುವುದು ಇದರ ಗುರಿ. ಮತ್ತೊಂದೆಡೆ ಧಾರ್ಮಿಕ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಓಡಿಬಂದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತೀಯ ನಾಗರಿಕತ್ವ ನೀಡುವ ಪೌರತ್ವ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಅಮಿತ್ ಶಾ ಜಾತಕ ಫಲದಲ್ಲಿ ವಿವಿಧ ಹಗರಣಗಳ ಆರೋಪಿಗಳು ಜೈಲು ಪಾಲುಅಮಿತ್ ಶಾ ಜಾತಕ ಫಲದಲ್ಲಿ ವಿವಿಧ ಹಗರಣಗಳ ಆರೋಪಿಗಳು ಜೈಲು ಪಾಲು

ಮಾವೊವಾದಿಗಳ ದಾಳಿ

ಮಾವೊವಾದಿಗಳ ದಾಳಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು, ಕಲ್ಲು ತೂರಾಟಗಾರರ ಸಮಸ್ಯೆಯಾದರೆ, ಕೇಂದ್ರ ಭಾರತದಲ್ಲಿ ಮಾವೊವಾದಿಗಳ ಹಾವಳಿ ಬಹುದೊಡ್ಡ ಸಮಸ್ಯೆಯಾಗಿದೆ. ಇಲ್ಲಿ ನಕ್ಸಲರು ನಿರಂತರವಾಗಿ ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಿದ್ದರೂ ನಕ್ಸಲರ ಹಿಂಸಾಚಾರ ನಿಂತಿರಲಿಲ್ಲ. ಛತ್ತೀಡಗಡದ ದಾಂತೇವಾಡದ ಬಿಜೆಪಿ ಶಾಸಕ ಭೀಮಾ ಮಾಂಡವಿ ಅವರನ್ನು ನಕ್ಸಲರು ಗುಂಡಿಕ್ಕಿ ಕೊಂಡಿದ್ದರು. ಗೃಹ ಸಚಿವರಾಗಿ ಅಮಿತ್ ಶಾ ಅವರು ತಮ್ಮ ಅಧೀನದಲ್ಲಿ ಬರುವ ಎಲ್ಲ ಕೇಂದ್ರ ಅರೆಸೇನಾ ಪಡೆಗಳನ್ನು ನಿಭಾಯಿಸುವ ಜವಾಬ್ದಾರಿ ಹೊತ್ತಿದ್ದಾರೆ. ನಕ್ಸಲರ ನಿಯಂತ್ರಣ ಅವರಿಗೆ ಸುಲಭದ ಸಂಗತಿಯಲ್ಲ.

ಹೆಚ್ಚುತ್ತಿರುವ ಅಪರಾಧಗಳ ಪ್ರಮಾಣ

ಹೆಚ್ಚುತ್ತಿರುವ ಅಪರಾಧಗಳ ಪ್ರಮಾಣ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಪ್ರಮುಖ ಘಟಕ. ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಅದು ಮಹತ್ವದ ವಾರ್ಷಿಕ ವರದಿ ನೀಡುತ್ತದೆ. 1953ರಿಂದಲೂ ಎನ್‌ಸಿಆರ್‌ಬಿ ಭಾರತದಲ್ಲಿನ ಅಪರಾಧಗಳು ಶೀರ್ಷಿಕೆಯಲ್ಲಿ ಪ್ರತಿ ವರ್ಷ ವರದಿ ನೀಡುತ್ತದೆ. ಇದರಲ್ಲಿ ರಾಜ್ಯವಾರು ಕೊಲೆ, ಅತ್ಯಾಚಾರ, ಗಲಭೆ, ಅಪಹರಣ, ಮಾನವಕಳ್ಳಸಾಗಣೆ ಮುಂತಾದ ಎಲ್ಲ ವರದಿಗಳನ್ನು ನೀಡುತ್ತದೆ. ಆದರೆ, 2016ರ ಬಳಿಕ ಇದು ವರದಿ ಸಲ್ಲಿಸಿಲ್ಲ.

2015ರಲ್ಲಿ ಸಲ್ಲಿಸಿದ್ದ ವರದಿಯಲ್ಲಿ ಪ್ರತಿ ದಿನ ಸರಾಸರಿ 34 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. 2015ರಲ್ಲಿ 12,602 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಲ್ಲಿ ಮಹಾರಾಷ್ಟ್ರ (37.8%), ತೆಲಂಗಾಣ (16.7%) ಮತ್ತು ಕರ್ನಾಟಕ (14.9%) ಆತ್ಮಹತ್ಯೆಗಳು ವರದಿಯಾಗಿದ್ದವು. ದೇಶದಲ್ಲಿನ ಅಪರಾಧ ಪ್ರಕರಣ ಏರಿಕೆ ಗಮನಹರಿಸಬೇಕಾದ ಪ್ರಮುಖ ಸಂಗತಿ.

English summary
Home Minister Amit Shah took charge on Saturday. There are many challenges before him to solve as Home Minister. Here some of the key challenges he has.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X