• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸೋಂಕು ಉಲ್ಬಣ: 8 ರಾಜ್ಯಗಳ ಜೊತೆ ಕೇಂದ್ರ ತಜ್ಞರ ಸಭೆ!

|

ದೆಹಲಿ, ಜುಲೈ 24: ಭಾರತದಲ್ಲಿ ಕೊರೊನಾ ವೈರಸ್ ಕೇಸ್‌ಗಳು ಅತಿ ವೇಗವಾಗಿ ಏರುತ್ತಿದೆ. ಶುಕ್ರವಾರ ಬೆಳಗ್ಗೆ ಕೇಂದ್ರ ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ 24 ಗಂಟೆಯಲ್ಲಿ 49,310 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ದಿನದಿಂದ ದಿನಕ್ಕೆ ಹೊಸ ಕೇಸ್‌ಗಳು ಉಲ್ಬಣವಾಗುತ್ತಿದ್ದು ಸಹಜವಾಗಿ ಆತಂಕ ಹೆಚ್ಚಿಸಿದೆ.

   2000Cr Covid scam by Yediyurappa Govt : Siddaramaiah | Oneindia Kannada

   ಈ ಬಗ್ಗೆ ಕೇಂದ್ರ ಸರ್ಕಾರ ಕೂಡ ಚಿಂತೆಗೆ ಒಳಗಾಗಿದೆ. ರಾಜ್ಯಗಳಲ್ಲಿ ಕೊವಿಡ್ ಪರಿಸ್ಥಿತಿ ಪರಿಶೀಲಿಸಲು ಕೇಂದ್ರ ಸರ್ಕಾರ ವಿಶೇಷ ತಂಡವೊಂದನ್ನು ನಿಯೋಜಿಸಿತ್ತು. ಈ ತಂಡವೂ ರಾಜ್ಯಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದೆ. ಇದೀಗ, ದೇಶದ ಏಂಟು ರಾಜ್ಯಗಳ ಬಗ್ಗೆ ಈ ತಂಡ ಕಳವಳ ವ್ಯಕ್ತಪಡಿಸಿದೆ.

   ಭಾರತದಲ್ಲಿ 24 ಗಂಟೆಯಲ್ಲಿ 49,310 ಹೊಸ ಕೋವಿಡ್ ಪ್ರಕರಣ

   'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿರುವಂತೆ ಶುಕ್ರವಾರ ಕೇಂದ್ರದ ತಜ್ಞರ ತಂಡ ಮತ್ತು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಆಂಧ್ರಪ್ರದೇಶ, ಬಿಹಾರ, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ಕರ್ನಾಟಕ, ಮತ್ತು ಉತ್ತರ ಪ್ರದೇಶದ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಅದರಲ್ಲೂ ಈ ರಾಜ್ಯಗಳಲ್ಲಿ ನಿನ್ನೆಯ ವರದಿ ನಿಜಕ್ಕೂ ಅಚ್ಚರಿ ತಂದಿದೆ. ಮುಂದೆ ಓದಿ....

   ಆಂಧ್ರ ಪ್ರದೇಶದಲ್ಲಿ ದಾಖಲೆ

   ಆಂಧ್ರ ಪ್ರದೇಶದಲ್ಲಿ ದಾಖಲೆ

   ಆಂಧ್ರ ಪ್ರದೇಶದಲ್ಲಿ ನಿನ್ನೆ ಒಂದೇ ದಿನ 7998 ಜನರಿಗೆ ಕೊವಿಡ್ ತಗುಲಿದೆ. ಇದುವರೆಗೂ ಆಂಧ್ರದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಕೊರೊನಾ ಸೋಂಕಿತರು ವರದಿಯಾಗಿರಲಿಲ್ಲ. ಆಂಧ್ರದಲ್ಲಿ ಹೆಚ್ಚು ಪರೀಕ್ಷೆಗಳು ನಡೆಯುತ್ತಿರುವ ಕಾರಣ ಸೋಂಕು ಹೆಚ್ಚು ವರದಿಯಾಗಿದೆ ಎಂದು ಹೇಳಲಾಗಿದೆ. ಆದರೂ, ನಿನ್ನೆಯ ಸಂಖ್ಯೆ ಆಂಧ್ರ ಪಾಲಿಗೆ ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡಿದೆ.

   ಕರ್ನಾಟಕದಲ್ಲೂ 5 ಸಾವಿರ ಕೇಸ್

   ಕರ್ನಾಟಕದಲ್ಲೂ 5 ಸಾವಿರ ಕೇಸ್

   ಕರ್ನಾಟಕದ ಪಾಲಿಗೂ ನಿನ್ನೆ ಕೆಟ್ಟ ದಿನ. ಒಂದೇ ದಿನ 5030 ಜನರಿಗೆ ಕೊರೊನಾ ವೈರಸ್ ತಗುಲಿರುವುದು ದೃಢವಾಗಿದೆ. ರಾಜ್ಯದಲ್ಲೂ ಇದೇ ಮೊದಲ ಬಾರಿಗೆ 5 ಸಾವಿರಕ್ಕೂ ಹೆಚ್ಚು ಕೇಸ್ ದಾಖಲಾಗಿದೆ. ಈ ಅಂಕಿ ಅಂಶ ಗಮಿನಿಸದ ಮೇಲೆ ಕರ್ನಾಟಕದಲ್ಲಿ ಈಗ ಕೊವಿಡ್ ಗಂಭೀರತೆ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.

   ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶ?

   ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶ?

   ಉತ್ತರ ಪ್ರದೇಶದಲ್ಲಿ ನಿನ್ನೆ 2529 ಜನರಿಗೆ ಕೊರೊನಾ ವೈರಸ್ ತಗುಲಿದೆ. ಪಶ್ಚಿಮ ಬಂಗಾಳದಲ್ಲಿ 2436 ಕೇಸ್ ವರದಿಯಾಗಿದೆ. ಈ ಎರಡು ರಾಜ್ಯಗಳಲ್ಲೂ ನಿನ್ನೆ ಅತಿ ಹೆಚ್ಚು ಕೇಸ್ ದಾಖಲಾಗಿದೆ. ಕೇಂದ್ರ ಆರೋಗ್ಯ ಅಧಿಕಾರಿಗಳು ಹಾಗೂ ತಜ್ಞರ ತಂಡ ಈ ರಾಜ್ಯಗಳ ಮೇಲೂ ನಿಗಾ ವಹಿಸಿದೆ.

   ಉಳಿದ ನಾಲ್ಕು ರಾಜ್ಯಗಳ ಕಥೆ ಏನು?

   ಉಳಿದ ನಾಲ್ಕು ರಾಜ್ಯಗಳ ಕಥೆ ಏನು?

   ಬಿಹಾರ, ತೆಲಂಗಾಣ, ಒಡಿಶಾ ಹಾಗೂ ಅಸ್ಸಾಂ ರಾಜ್ಯಗಳಲ್ಲೂ ಕೊರೊನಾ ಕೇಸ್‌ಗಳು ಉಲ್ಭಣವಾಗುತ್ತಿದೆ. ಬಿಹಾರದಲ್ಲಿ ನಿನ್ನೆ 1625 ಕೊರೊನಾ ಕೇಸ್ ವರದಿಯಾಗಿದೆ. ತೆಲಂಗಾಣದಲ್ಲಿ ನಿನ್ನೆ 1567 ಜನರಿಗೆ ಸೋಂಕು ದೃಢವಾಗಿದೆ. ಅಸ್ಸಾಂನಲ್ಲಿ ನಿನ್ನೆ 1047 ಜನರಿಗೆ ಕೊವಿಡ್ ತಗುಲಿದೆ. ಒಡಿಶಾದಲ್ಲಿ ನಿನ್ನೆ 1264 ಕೇಸ್ ಪತ್ತೆಯಾಗಿದೆ.

   English summary
   Central expert team and senior health official are scheduled meeting with Andhra Pradesh, Telangana, West Bengal, Karnataka and other four states today.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more