ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸರ್ಕಾರದ ಗುತ್ತಿಗೆಗಳಿಂದ ಚೀನಾ ನಿಷೇಧಿಸಿ, ಹುತಾತ್ಮ ಯೋಧರನ್ನು ಗೌರವಿಸಿ'

|
Google Oneindia Kannada News

ದೆಹಲಿ, ಜೂನ್ 17: ಸರ್ಕಾರಿ ಟೆಂಡರ್‌ಗಳಲ್ಲಿ ಚೀನಾದ ಕಂಪೆನಿಗಳು ಭಾಗವಹಿಸುವುದನ್ನು ನಿಷೇಧಿಸುವಂತೆ ಆರ್‌ಎಸ್‌ಎಸ್ ಅಂಗಸಂಸ್ಥೆ ಸ್ವದೇಶಿ ಜಾಗರಣ ಮಂಚ್ (ಎಸ್‌ಜೆಎಂ) ಮಂಗಳವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

Recommended Video

ಗಾಲ್ವಾನ್ ಘರ್ಷಣೆಯಲ್ಲಿ ಸತ್ತ ಚೀನಾ ಸೈನಿಕರ ಲೆಕ್ಕ ಕೊಟ್ಟ ಅಮೇರಿಕಾ | Oneindia Kannada

ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ನಡೆದ ಚೀನಾ ಮತ್ತು ಭಾರತ ಸೈನಿಕರ ಘರ್ಷಣೆಯಲ್ಲಿ ಮೃತಪಟ್ಟ ಭಾರತೀಯ ಯೋಧರಿಗೆ ಈ ಮೂಲಕ ಗೌರವ ಸಲ್ಲಿಸಬೇಕು ಎಂದು ಆಗ್ರಹಿಸಿದೆ.

ಲಡಾಖ್‌ನಲ್ಲಿ ಪರಿಸ್ಥಿತಿ ಉದ್ವಿಗ್ನ: ಆತಂಕ ವ್ಯಕ್ತಪಡಿಸಿದ ಡಿಎಸ್ ಹೂಡಾಲಡಾಖ್‌ನಲ್ಲಿ ಪರಿಸ್ಥಿತಿ ಉದ್ವಿಗ್ನ: ಆತಂಕ ವ್ಯಕ್ತಪಡಿಸಿದ ಡಿಎಸ್ ಹೂಡಾ

ಎಸ್‌ಜೆಎಂ ಸಹ-ಸಂಚಾಲಕ ಅಶ್ವನಿ ಮಹಾಜನ್ ಮಾತನಾಡಿದ್ದು, 'ಭಾರತೀಯರು, ಚೀನಾದ ಉತ್ಪನ್ನಗಳನ್ನು ಬಳಸುವುದನ್ನು ನಿರ್ಬಂಧಿಸಿ' ಎಂದು ಹೇಳಿದ್ದಾರೆ. 'ನಟರು, ಕ್ರಿಕೆಟಿಗರು ಹಾಗೂ ಗಣ್ಯರು ಚೀನಾದ ಉತ್ಪನ್ನಗಳನ್ನು ಪ್ರಚಾರ ಮಾಡಬಾರದು' ಎಂದು ಮಹಾಜನ್ ಒತ್ತಾಯಿಸಿದ್ದಾರೆ.

Centre to bar China companies from participating in government tenders

ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನಾದ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಕರ್ನಲ್ ಸೇರಿದಂತೆ ಇಪ್ಪತ್ತು ಭಾರತೀಯ ಸೇನಾಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ. ಇದು ಐದು ದಶಕಗಳಲ್ಲಿ ನಡೆದ ಅತಿದೊಡ್ಡ ಮಿಲಿಟರಿ ಮುಖಾಮುಖಿಯಾಗಿದೆ.

ಈ ಘಟನೆಯಲ್ಲಿ ಚೀನಾ ಸೇನೆಯಲ್ಲೂ ಸಾವುನೋವುಗಳನ್ನು ಅನುಭವಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಆದರೆ ನಿಖರವಾದ ಮಾಹಿತಿ ನೀಡುತ್ತಿಲ್ಲ ಎಂದು ದೂರಿದೆ.

English summary
SJM co-convener Ashwani Mahajan appealed to the Centre to bar Chinese companies from participating in tenders floated by the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X