ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆಗಳ ನಡುವಿನ ಅಂತರ ಕಡಿಮೆಗೊಳಿಸುವ ಬಗ್ಗೆ ಕೇಂದ್ರ ಹೇಳಿದ್ದಿಷ್ಟು!

|
Google Oneindia Kannada News

ನವದೆಹಲಿ, ಜೂನ್ 11: ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ವರದಿಗಳ ಆಧಾರದಲ್ಲಿ ಲಸಿಕೆಯ ಎರಡು ಡೋಸ್‌ಗಳ ನಡುವಿನ ಆಂತರವನ್ನು ಕಡಿಮೆಗೊಳಿಸಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ. ಆದರೆ ಇದಕ್ಕೆ ಕೇಂದ್ರ ಆರೋಗ್ಯ ಸಂಸ್ಥೆ ಪ್ರತಿಕ್ರಿಯಿಸಿದ್ದು ಈ ವರದಿಯಿಂದ ಆತಂಕಗೊಳ್ಳುವ ಸಂಗತಿಗಳು ಇಲ್ಲ. ಈ ನಿರ್ಧಾರಗಳನ್ನು ತಜ್ಞರ ಕೂಲಂಕುಷ ಪರೀಕ್ಷೆಗಳ ನಂತರವೇ ತೆಗೆದುಕೊಳ್ಳಲಾಗಿದೆ ಎಂದು ನೀತಿ ಆಯೋಗದ ಸದಸ್ಯ ಡಾ ವಿಕೆ ಪೌಲ್ ತಿಳಿಸಿದ್ದಾರೆ.

ಇನ್ನು ಕೊರೊನಾವೈರಸ್‌ನಿಂದ ಚೇತರಿಸಿಕೊಂಡವರನ್ನು ಲಸಿಕೆ ಅಭಿಯಾನದಿಂದ ಹೊರಗಿಡಬಹುದು ಎಂಬ ತಜ್ಞರ ಸಲಹೆಗಳ ಬಗ್ಗೆಯೂ ಡಾ.ಪೌಲ್ ಪ್ರತಿಕ್ರಿಯಿಸಿದ್ದು ಇಂತಾ ಚರ್ಚೆಗಳು ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಯಾಗಬೇಕು ಎಂದು ತಿಳಿಸಿದ್ದಾರೆ. ವಿಸ್ತಾರ ದೃಷ್ಟಿಕೋನದಲ್ಲಿ ಈ ವಿಚಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಇಂತಾ ವಿಚಾರಗಳಲ್ಲಿ ಯಾವುದೇ ಹಾರ್ಡ್‌ಕೋರ್ ಸಿದ್ಧಾಂತಗಳು ಇಲ್ಲ. ಇತ್ತೀಚಿನ ಬೆಳವಣಿಗೆಗಳೊಂದಿಗೆ ನಮ್ಮ ತಜ್ಞರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ಕೊವಿಡ್ 19: ಜೂನ್ 11ರಂದು ವಿಶ್ವದಲ್ಲಿ ಎಷ್ಟು ಮಂದಿ ಚೇತರಿಕೆ?ಕೊವಿಡ್ 19: ಜೂನ್ 11ರಂದು ವಿಶ್ವದಲ್ಲಿ ಎಷ್ಟು ಮಂದಿ ಚೇತರಿಕೆ?

ಭಾರತದಲ್ಲಿ ಕೋವಿಶೀಲ್ಡ್‌ನ ಎರಡು ಲಸಿಕೆಗಳ ನಡುವಿನ ಅಂತರವನ್ನು 12 ರಿಂದ 16 ವಾರಗಳಿಗೆ ವಿಸ್ತರಿಸಲಾಯಿತು. ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ನೀಡುವ ರಕ್ಷಣೆ ದೀರ್ಘಕಾಲ ಇರುತ್ತದೆ ಎಂಬ ಅಂತಾರಾಷ್ಟ್ರೀಯ ಅಧ್ಯಯನಗಳ ಆಧಾರದ ಮೇಲೆ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಆದ್ದರಿಂದ, ಎರಡನೇ ಡೋಸ್ ವಿಳಂಬಗೊಳಿಸಬಹುದು ಎಂದು ಡಾ. ಪೌಲ್ ಹೇಳಿದ್ದಾರೆ.

Centre statement on gap between Covishield doses will change

ಆದರೆ ಇಂಗ್ಲೆಂಡ್‌ನ ಆರೋಗ್ಯ ಇಲಾಖೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಲಸಿಕೆಯ ಮೊದಲ ಡೋಸ್ ರಕ್ಷಣೆ ನೀಡುವ ಪ್ರಮಾಣ ಈ ಮೊದಲು ಅಂದಾಜಿಸಿರುವುದಕ್ಕಿಂತ ಕಡಿಮೆಯಾಗಿದೆ. ಈ ವರದಿಯ ಆಧಾರದಲ್ಲಿ ಅಲ್ಲಿ ಲಸಿಕೆಯ ನಡುವಿನ ಅಂತರವನ್ನು ಈಗಾಗಲೇ ಕಡಿಮೆಗೊಳಿಸಲಾಗಿದೆ. ಉತ್ತರ ಐರ್ಲೆಂಡ್‌ನಲ್ಲಿ ಲಭ್ಯವಿರುವ ಎಲ್ಲಾ ಲಸಿಕೆಗಳಿಗೆ ಇದ್ದ 10 ರಿಂದ 12 ವಾರಗಳ ಅಂತರವನ್ನು ಎಂಟು ವಾರಗಳಿಗೆ ಇಳಿಸಿದೆ.

ಹೊಸ ಅಧ್ಯಯನದ ವರದಿಯ ಪ್ರಕಾರ ಆಸ್ಟ್ರಜನಿಕಾ(ಭಾರತದಲ್ಲಿ ಕೋವಿಶೀಲ್ಡ್) ಲಸಿಕೆಯ ಮೊದಲ ಡೋಸ್ ಭಾರತದಲ್ಲಿ ಮೊದಲಿಗೆ ಪತ್ತೆಯಾದ 'ಡೆಲ್ಟಾ' ಮಾದರಿಯ ವಿರುದ್ಧ 33 ಪ್ರತಿಶತದಷ್ಟು ಮಾತ್ರ ರಕ್ಷಣೆಯನ್ನು ನೀಡುತ್ತದೆ. ಎರಡನೇ ಡೋಸ್ ಇದರ ಪ್ರಮಾಣವನ್ನು ಹೆಚ್ಚುಗೊಳಿಸಿ 60 ಶೇಕಡಾದಷ್ಟು ರಕ್ಷಣೆಯನ್ನು ನೀಡುತ್ತದೆ ಎಂದು ತಿಳಿಸಿದೆ.

English summary
Centre statement on gap between Covishield doses will change. There is no hardcore ideology in science VK Paul, Niti Aayog member (health) said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X