ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಕೊರೊನಾ ಲಸಿಕೆ ಕುರಿತ ಮಾಹಿತಿಯನ್ನು ಕೇಂದ್ರ ಮುಕ್ತವಾಗಿರಿಸಬೇಕು"

|
Google Oneindia Kannada News

ನವದೆಹಲಿ, ಮೇ 17: ಕೇಂದ್ರ ಸರ್ಕಾರ ರಾಜ್ಯಗಳಿಗೆ ವಿತರಿಸುವ ಕೊರೊನಾ ಲಸಿಕೆ ಕುರಿತ ಮಾಹಿತಿಯನ್ನು ಸಾರ್ವಜನಿಕರಿಗೆ ಮುಕ್ತವಾಗಿಸಬೇಕು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮನವಿ ಮಾಡಿದ್ದಾರೆ. ಜೊತೆಗೆ ದೆಹಲಿಯಲ್ಲಿ 18-45 ವಯಸ್ಸಿನವರಿಗಾಗಿ 3.82 ಲಕ್ಷ ಡೋಸ್‌ ಹೆಚ್ಚುವರಿ ಲಸಿಕೆ ನೀಡಬೇಕೆಂದು ಕೇಳಿಕೊಂಡಿದ್ದಾರೆ.

ಸದ್ಯಕ್ಕೆ ದೆಹಲಿಯಲ್ಲಿ 45 ವಯಸ್ಸಿನ ಮೇಲ್ಪಟ್ಟವರಿಗೆ ನೀಡಲು ನಾಲ್ಕು ದಿನಗಳಿಗೆ ಕೊರೊನಾ ಲಸಿಕೆ ದಾಸ್ತಾನು ಇದೆ. ಇನ್ನು ಮೂರೇ ದಿನಗಳಲ್ಲಿ ಲಸಿಕೆ ಅಭಾವ ಎದುರಾಗಲಿದೆ ಎಂದು ಹೇಳಿದರು.

ದೆಹಲಿಯಲ್ಲಿ ಒಂದೂವರೆ ತಿಂಗಳ ನಂತರ ಕಡಿಮೆಯಾದ ಕೊರೊನಾ ಪ್ರಕರಣದೆಹಲಿಯಲ್ಲಿ ಒಂದೂವರೆ ತಿಂಗಳ ನಂತರ ಕಡಿಮೆಯಾದ ಕೊರೊನಾ ಪ್ರಕರಣ

ಮೂರು ಬೇಡಿಕೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರವೂ ಇದಕ್ಕೆ ಪ್ರತಿಕ್ರಿಯೆ ನೀಡಿದೆ. 45 ವಯಸ್ಸಿನ ಮೇಲ್ಪಟ್ಟವರಿಗೆ ಲಸಿಕೆ ನೀಡಲು 3.83 ಲಕ್ಷ ಡೋಸ್‌ಗಳನ್ನು ನೀಡಲು ಕೇಂದ್ರ ಒಪ್ಪಿಗೆ ನೀಡಿದೆ. ಆದರೆ ಸದ್ಯಕ್ಕೆ 18-44 ವಯೋಮಾನದವರಿಗೆ ಮೇ ತಿಂಗಳಿನಲ್ಲಿ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿರುವುದಾಗಿ ಹೇಳಿದರು.

Centre Should Make Data On Vaccine Allocation To States Public Says Manish Sisodia

18-44 ವಯೋಮಾನದವರಿಗೆ ತುರ್ತಾಗಿ ಲಸಿಕೆ ನೀಡಬೇಕಿದೆ. ಲಸಿಕೆ ಖರೀದಿಗೆ ನಾವು ಸಿದ್ಧರಿದ್ದೇವೆ. ಆದರೆ ಲಸಿಕೆ ಲಭ್ಯವಿಲ್ಲ. ಮೂರು ದಿನಗಳ ನಂತರ 18-44 ವಯೋಮಾನದವರಿಗೆ ಲಸಿಕೆ ನೀಡುವ ಕೇಂದ್ರಗಳನ್ನು ಮುಚ್ಚಬೇಕಿರುವ ಪರಿಸ್ಥಿತಿ ಎದುರಾಗಲಿದೆ ಎಂದರು.

ಕೇಂದ್ರ ಸರ್ಕಾರ ರಾಜ್ಯಗಳಿಗೆ ವಿತರಿಸುತ್ತಿರುವ ಲಸಿಕೆಗಳ ಕುರಿತು ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು. ಮಾಹಿತಿಯಲ್ಲಿ ಪಾರದರ್ಶಕತೆ ಇರಬೇಕು. ಅಂಕಿ ಸಂಖ್ಯೆಗಳ ಕುರಿತು ಎಲ್ಲರಿಗೂ ತಿಳಿಯಬೇಕು. ಹೀಗಾದಾಗ ಎಷ್ಟು ಲಸಿಕೆಗಳು ದೇಶದಲ್ಲಿ ಲಭ್ಯವಿದೆ ಎಂಬುದೂ ತಿಳಿಯುತ್ತದೆ. ರಾಜ್ಯಗಳಿಗೂ ಇದು ಅನುಕೂಲವಾಗುತ್ತದೆ ಎಂದು ಸಿಸೋಡಿಯಾ ಹೇಳಿದ್ದಾರೆ.

English summary
Delhi Deputy Chief Minister Manish Sisodia urged the Centre on Monday to make the data on vaccines supplied by it to the states public
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X