ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಿಂದ 14 ರಾಜ್ಯಗಳಿಗೆ 6,195 ಕೋಟಿ ಕೊವಿಡ್ ಅನುದಾನ ಬಿಡುಗಡೆ

|
Google Oneindia Kannada News

ದೆಹಲಿ, ಮೇ 12: ದೇಶಕ್ಕೆ ಮಾರಕವಾಗಿರುವ ಕೊರೊನಾ ವೈರಸ್‌ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಸರ್ಕಾರ ಎರಡನೇ ಹಂತದಲ್ಲಿ 14 ರಾಜ್ಯಗಳಿಗೆ 6,195 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಕೊವಿಡ್ ವೈರಸ್‌ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಹಲವು ಕ್ಷೇತ್ರಗಳ ಕಲ್ಯಾಣಕ್ಕಾಗಿ ಮಾರ್ಚ್ ತಿಂಗಳಲ್ಲಿ, 1.70 ಲಕ್ಷ ಕೋಟಿ ಅನುದಾನವನ್ನು ಹಣಕಾಸು ಇಲಾಖೆ ಘೋಷಿಸಿತ್ತು.

ಕೊರೊನಾ ಹೊಡೆತ: ವಿಮೆ, ಭವಿಷ್ಯ ನಿಧಿ, ಮಹಿಳೆಗೆ ಆರ್ಥಿಕ ಬಲ ತಂದ ಸರ್ಕಾರ ಕೊರೊನಾ ಹೊಡೆತ: ವಿಮೆ, ಭವಿಷ್ಯ ನಿಧಿ, ಮಹಿಳೆಗೆ ಆರ್ಥಿಕ ಬಲ ತಂದ ಸರ್ಕಾರ

ಮೊದಲನೇ ಹಂತದಲ್ಲಿ 11,092 ಕೋಟಿ ಹಣವನ್ನು ಬಿಡುಗಡೆ ಮಾಡಿತ್ತು. ಈಗ ಎರಡನೇ ಹಂತದಲ್ಲಿ 14 ರಾಜ್ಯಗಳಿಗೆ 6,195 ಕೋಟಿ ರಿಲೀಸ್ ಮಾಡಿದೆ. ಎರಡನೇ ಹಂತದ ಅನುದಾನದಲ್ಲಿ ಕರ್ನಾಟಕಕ್ಕೆ ಯಾವುದೇ ಪರಿಹಾರ ಸಿಕ್ಕಿಲ್ಲ ಎನ್ನುವುದು ನಿರಾಸೆಯ ಸಂಗತಿ.

Centre Releases Over Rs 6,195 Crore To 14 States

ಎರಡನೇ ಹಂತದಲ್ಲಿ ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ್, ಮೇಘಲಾಯ, ಮಿಜಾರೋಂ, ನಾಗಲ್ಯಾಂಡ್, ಪಂಜಾಬ್, ತಮಿಳುನಾಡು, ತ್ರಿಪುರ, ಉತ್ತರಾಖಂಡ, ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ.

English summary
Centre releases over Rs 6,195 crore to 14 states as 2nd equated monthly installment of Post Devolution Revenue Deficit Grant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X