ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಚಿತ ಲಸಿಕೆ ಘೋಷಣೆಯ ಮರುದಿನವೇ 44 ಕೋಟಿ ಲಸಿಕೆಗೆ ಆರ್ಡರ್ ಮಾಡಿದ ಕೇಂದ್ರ

|
Google Oneindia Kannada News

ನವದೆಹಲಿ, ಜೂನ್ 8: ಸೋಮವಾರ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಲಸಿಕೆ ವಿಚಾರವಾಗಿ ಮಹತ್ವದ ಘೋಷಣೆಯನ್ನು ಮಾಡಿದ್ದರು. ಎಲ್ಲಾ ವಯಸ್ಕರಿಗೂ ಉಚಿತ ಲಸಿಕೆಯನ್ನು ನೀಡಲು ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರಗಳಿಗೆ ಲಸಿಕೆಯನ್ನು ನೀಡಲಿದೆ ಎಂದು ತಿಳಿಸಿದರು. ಈ ಘೋಷಣೆಯ ಮರುದಿನ ಮಂಗಳವಾರ ದೊಡ್ಡ ಪ್ರಮಾಣದಲ್ಲಿ ಕೇಂದ್ರ ಸರ್ಕಾರ ಲಸಿಕೆಗೆ ಆರ್ಡರ್ ಮಾಡಿದೆ.

ಭಾರತದಲ್ಲಿ ಉತ್ಪಾದನೆಯಾಗುವ ಎರಡು ಲಸಿಕೆಗಳಾದ ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆಗಳಿಗೆ ದೊಡ್ಡ ಪ್ರಮಾಣದಲ್ಲಿ ಕೇಂದ್ರ ಆರ್ಡರ್ ಮಾಡಿದೆ. ಈ ಎರಡು ಲಸಿಕೆಗಳ 44 ಕೋಟಿ ಡೋಸ್‌ಗೆ ಕೇಂದ್ರ ಸರ್ಕಾರ ಬೇಡಿಕೆಯನ್ನು ಇಟ್ಟಿದೆ. ಈ ಮೂಲಕ ಹೆಚ್ಚಿನ ಲಸಿಕೆಯ ಲಭ್ಯತೆಗೆ ಕ್ರಮಕೈಗೊಳ್ಳಲು ಮುಂದಾಗಿದೆ.

ಎಲ್ಲಾ ವಯಸ್ಕರಿಗೂ ಲಸಿಕೆ ನೀಡಿದ ದೇಶದ ಮೊದಲ ಹಳ್ಳಿ ಇದು...ಎಲ್ಲಾ ವಯಸ್ಕರಿಗೂ ಲಸಿಕೆ ನೀಡಿದ ದೇಶದ ಮೊದಲ ಹಳ್ಳಿ ಇದು...

ಭಾನುವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕೇಂದ್ರೀಕೃತ ಲಸಿಕೆ ನೀತಿಯನ್ನು ಘೋಷಿಸಿದರು. ಇದೇ ಸಂದರ್ಭದಲ್ಲಿ ಅವರು ಜೂನ್ 21ರ ನಂತರ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆಯನ್ನು ನೀಡಲಿದೆ ಎಂದು ತಿಳಿಸಿದರು. ಈ ವೇಳೆ ಮುಂದಿನ ದಿನಗಳಲ್ಲಿ ಭಾರತ ಲಸಿಕೆ ಉತ್ಪಾದನೆಯ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದೆ ಎಂದಿದ್ದಾರೆ ಪ್ರಧಾನಿ ಮೋದಿ.

Centre places orders for 44 crore doses of corona vaccine

ಲಸಿಕೆಗೆ ಆದೇಶವನ್ನು ನೀಡಿರುವ ವಿಚಾರವಾಗಿ ನೀತಿ ಆಯೋಗದ ಸದಸ್ಯ ಡಾ. ವಿಕೆ ಪೌಲ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಕೇಂದ್ರ ಸರ್ಕಾರ 25 ಕೋಟಿ ಕೋವಿಶೀಲ್ಡ್ ಲಸಿಕೆಯ ಡೋಸ್‌ಗಳನ್ನು ಮತ್ತು 19 ಕೋಟಿ ಕೊವಾಕ್ಸಿನ್ ಡೋಸ್‌ಗಳನ್ನು ಆರ್ಡರ್ ಮಾಡಿದೆ. ಇವುಗಳ ಜೊತೆಗೆ ಈಗಾಗಲೇ 30 ಕೋಟಿ ಡೋಸ್ ಬಯೋಲಾಜಿಕಲ್ ಈ ಲಸಿಕೆಗೆ ಕೂಡ ಆರ್ಡರ್ ಮಾಡಿದ್ದು ಸೆಪ್ಟೆಂಬರ್ ತಿಂಗಳಿಗೆ ಅದು ಲಭ್ಯವಾಗಲಿದೆ" ಎಂದು ತಿಳಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಖಾಸಗಿ ವಲಯಕ್ಕೆ ನೀಡುವ ಲಸಿಕೆಯ ಬೆಲೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಖಾಸಗಿ ವಲಯಕ್ಕೆ(ಆಸ್ಪತ್ರೆಗಳಿಗೆ) ನೀಡುವ ಲಸಿಕೆಯ ಬೆಲೆಯನ್ನು ಉತ್ಪಾದಕರು ನಿಗದಿಪಡಿಸುತ್ತಾರೆ. ಖಾಸಗಿ ವಲಯಕ್ಕೆ ಲಸಿಕೆಗಳ ಬೇಡಿಕೆಯನ್ನು ರಾಜ್ಯಗಳು ತಮ್ಮ ವ್ಯವಸ್ಥೆಗಳ ಮೂಲಕ ಸಂಗ್ರಹಿಸುತ್ತವೆ" ಎಂದು ಡಾ. ವಿಕೆ ಪೌಲ್ ತಿಳಿಸಿದ್ದಾರೆ.

English summary
Centre places orders for 44 crore doses of corona vaccine after PM Narendra Modi announces new vaccine policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X