ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ವಿವಾಹ ಕಾಯ್ದೆಯಲ್ಲಿ ಸಲಿಂಗ ವಿವಾಹ ಒಪ್ಪಿಗೆ ಅಸಾಧ್ಯ:ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ,ಫೆಬ್ರವರಿ 25: ವಿಶೇಷ ವಿವಾಹ ಕಾಯ್ದೆ ಹಾಗೂ ಭಾರತದಲ್ಲಿ ಹಿಂದೂ ವಿವಾಹ ಕಾಯ್ದೆ1956ರಲ್ಲಿ ಸಲಿಂಗ ವಿವಾಹಕ್ಕೆ ಅನುಮತಿ ಕೋರಿ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಮನವಿಯನ್ನು ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.

ಸಲಿಂಗಕಾಮ ಅಪರಾಧ ಅಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿವರ್ಷಗಳೇ ಕಳೆದಿದ್ದರೂ ಈ ವಿಚಾರದಲ್ಲಿ ಚರ್ಚೆ ಮಾತ್ರ ನಿರಂತರ, ಸಲಿಂಗಿಗಳುಲಿವ್ ಇನ್ ರಿಲೇಶನ್‌ಶಿಪ್ ನಲ್ಲಿ ಮುಂದುವರೆಯಲು ನ್ಯಾಯಾಲಯ ಆದೇಶ ನೀಡಿತ್ತು.

ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುತ್ತಿಲ್ಲ ಸೆಕ್ಷನ್ 377 ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುತ್ತಿಲ್ಲ ಸೆಕ್ಷನ್ 377

ಒಂದೇ ಲಿಂಗದ ಇಬ್ಬರು ಮದುವೆಯಾಗುವುದನ್ನು ನಮ್ಮ ಕಾನೂನು,ಸಮಾಜ ಹಾಗೂ ಮೌಲ್ಯಗಳು ಒಪ್ಪುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

Centre Opposes Pleas To Recognise Same-Sex Marriage Under Special Marriage Act

ಹಿಂದೂ ವಿವಾಹ ಕಾಯ್ದೆ ಗಂಡ ಮತ್ತು ಹೆಂಡತಿ ಎಂದು ಉಲ್ಲೇಖ ಮಾಡುತ್ತದೆ, ಒಂದೇ ಲಿಂಗದವರು ಇದ್ದಲ್ಲಿ ಹೇಗೆ ಎಂದು ಪ್ರಶ್ನೆ ಮಾಡಿದೆ.ಪಾರ್ಟ್ನರ್‌ಗಳಂತೆ ಜತೆಗಿರುವುದು ಹಾಗೂ ಸಲಿಂಗ ಸಂಬಂಧವು ಭಾರತದ ಕೌಟುಂಬಿಕ ವ್ಯವಸ್ಥೆಗೆ ವಿರುದ್ಧವಾಗಿದ್ದು ಎಂದು ಕೇಂದ್ರ ಸರ್ಕಾರ ಹೇಳಿದೆ.

ದೇಶದಲ್ಲಿ ಸಲಿಂಗ ವಿವಾಹಗಳಿಗೆ ಮಾನ್ಯತೆ ಹಾಗೂ ನೋಂದಣಿ ಕೋರಿ ಸಲ್ಲಿಸಿರುವ ಅರ್ಜಿ ಕುರಿತು ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ.ವಿವಾಹವೆನ್ನುವುದು ಪವಿತ್ರತೆಯನ್ನು ಹೊಂದಿರುತ್ತದೆ, ದೇಶದ ಪ್ರಮುಖ ಭಾಗಗಳಲ್ಲಿ ಅದನ್ನು ಸಂಸ್ಕಾರವೆಂದು ಪರಿಗಣಿಸಲಾಗುತ್ತದೆ. ವಿಶೇಷ ವಿವಾಹಕಾಯ್ದೆಯಲ್ಲಿ ಸಲಿಂಗ ವಿವಾಹವನ್ನು ಗುರುತಿಸಬೇಕೆಂಬ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ಮದುವೆಯು ಖಾಸಗಿ ಪರಿಕಲ್ಪನೆ ಮಾತ್ರವಲ್ಲದೇ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಭಾರತೀಯ ದಂಡ ಸಂಹಿತೆ 377 ರ ನಿರ್ಣಯೀಕರಣ ಹೊರತಾಗಿಯೂ, ಅರ್ಜಿದಾರರು ಸಲಿಂಗ ಮದುವೆಗೆ ಮೂಲಭೂತ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

English summary
The Centre has opposed pleas to recognise same-sex marriage under the special marriage act. In its affidavit filed in the Delhi High Court in pleas seeking to recognise same-sex marriage, Centre said that there is a "larger legislative framework" that recognises marriage only as between a man and a woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X