ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಗಳಿಂದ ಭಾರತ ಸ್ವೀಕರಿಸಿದ ವೈದ್ಯಕೀಯ ನೆರವು ಎಷ್ಟು? ಮಾಹಿತಿ ಹಂಚಿಕೊಂಡ ಸರ್ಕಾರ

|
Google Oneindia Kannada News

ನವದೆಹಲಿ, ಮೇ 28: ಕೊರೊನಾ ವೈರಸ್‌ನ ಎರಡನೇ ಅಲೆ ಭಾರತಕ್ಕೆ ಭಾರೀ ದೊಡ್ಡ ಆಘಾತವನ್ನು ನೀಡಿದೆ. ಕೊರೊನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದೇ ಬಿಟ್ಟಿತು ಎಂದು ನಿರಾಳವಾಗುವ ಸಂದರ್ಭದಲ್ಲಿ ಮೊದಲ ಅಲೆಗಿಂತಲೂ ಭೀಕರ ಸ್ವರೂಪದಲ್ಲಿ ಹಾವಳಿಯಿಡಲು ಪ್ರಾರಂಭಿಸಿತ್ತು. ಈ ದೊಡ್ಡ ಪ್ರಮಾಣದ ಆಘಾತವನ್ನು ಎದುರಿಸಲು ಭಾರತದಲ್ಲಿನ ವೈದ್ಯಕೀಯ ವ್ಯವಸ್ಥೆಯಲ್ಲಿ ಸಂಪೂರ್ಣ ವ್ಯವಸ್ಥೆಗಳೇ ಇರಲಿಲ್ಲ. ಈ ಸಂದರ್ಭದಲ್ಲಿ ಸಾಕಷ್ಟು ರಾಷ್ಟ್ರಗಳು ಭಾರತ ನೆರವಿಗೆ ಧಾವಿಸಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿಯನ್ನು ಹಂಚಿಕೊಂಡಿದೆ

ಎರಡನೇ ಅಲೆಯಲ್ಲಿ ಭಾರತಕ್ಕೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಕಾಡಿದ್ದು ಆಮ್ಲಜನಕದ ಸಮಸ್ಯೆ. ಅನೇಕ ರಾಷ್ಟ್ರಗಳು ಈ ಸಂದರ್ಭದಲ್ಲಿ ಭಾರತಕ್ಕೆ ಆಮ್ಲಜನಕದ ಸಿಲಿಂಡರ್ ಮತ್ತು ಕಾನ್ಸಂಟ್ರೇಟರ್‌ಗಳನ್ನು ನೀಡಿ ನೆರವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಶುಕ್ರವಾರ ವಿವರಗಳನ್ನು ನೀಡಿದೆ.

ಕೋವಿಡ್ 19: ಮೇ 28ರಂದು ವಿಶ್ವದಲ್ಲಿ ಎಷ್ಟು ಮಂದಿ ಚೇತರಿಕೆ?ಕೋವಿಡ್ 19: ಮೇ 28ರಂದು ವಿಶ್ವದಲ್ಲಿ ಎಷ್ಟು ಮಂದಿ ಚೇತರಿಕೆ?

ಮೇ 27ರ ವರೆಗೆ ಭಾರತ 18,016 ಆಮ್ಲಜನಕದ ಕಾನ್ಸಂಟ್ರೇಟರ್‌ಗಳನ್ನು ಮತ್ತು 19,085 ಆಮ್ಲಜನಕದ ಸಿಲಿಂಡರ್‌ಗಳನ್ನು ಸ್ವೀಕರಿಸಿದೆ. ಇದರೊಂದಿಗೆ 19 ಆಮ್ಲಜನಕ ಜನರೇಶನ್ ಪ್ಲಾಂಟ್‌ಗಳು, 15,206 ವೆಂಟಿಲೇಟರ್‌ಗಳು, 7.7 ಲಕ್ಷ ರೆಮ್‌ಡೆಸಿವಿರ್ ವಯಲ್ಸ್‌ಗಳು, 12 ಲಕ್ಷ ಫಾವಿಪಿರವಿರ್ ಮಾತ್ರೆಗಳು ಭಾರತಕ್ಕೆ ನೆರವಿನ ರೂಪದಲ್ಲಿ ಬಂದಿವೆ ಎಂದು ಮಾಹಿತಿ ನೀಡಿದೆ.

Centre give Details of COVID-19 relief medical supplies from foreign aid dispatched so far

ಮೇ 26 ರಿಂದ ಏಪ್ರಿಲ್ 27ರ ಅವಧಿಯಲ್ಲಿ ಭಾರತ ಈ ಪ್ರಮಾಣದ ವೈದ್ಯಕೀಯ ನೆರವನ್ನು ವಿದೇಶಗಳಿಂದ ಪಡೆದುಕೊಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಎಲ್ಲಾ ನೆರವನ್ನು ಕೇಂದ್ರ ಸರ್ಕಾರ ಅಗತ್ಯವಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ರವಾನಿಸಿದೆ ಎಂದು ಕೂಡ ವಿವರಿಸಿದೆ.

ಕೇಂದ್ರಕ್ಕೆ ಕೋವಿಡ್ 19 ಅರ್ಥವೇ ಆಗಿಲ್ಲ, ಈ ಪರಿಸ್ಥಿತಿಗೆ ಸರ್ಕಾರವೇ ಹೊಣೆ: ರಾಹುಲ್ ಗಾಂಧಿಕೇಂದ್ರಕ್ಕೆ ಕೋವಿಡ್ 19 ಅರ್ಥವೇ ಆಗಿಲ್ಲ, ಈ ಪರಿಸ್ಥಿತಿಗೆ ಸರ್ಕಾರವೇ ಹೊಣೆ: ರಾಹುಲ್ ಗಾಂಧಿ

ಕೊರೊನಾ ವೈರಸ್‌ನ ಎರಡನೇ ಅಲೆ ತೀವ್ರ ಸ್ವರೂಪವನ್ನು ಪಡೆದುಕೊಂಡ ಕಾರಣ ಏಕಕಾಲದಲ್ಲಿ ದೇಶಾದ್ಯಂತ ಲಕ್ಷಾಂತರ ರೋಗಿಗಳಿಗೆ ಆಮ್ಲಜನಕದ ಅನಿವಾರ್ಯತೆಗಳು ಉಂಟಾಯಿತು. ಆದರೆ ಭಾರತದಲ್ಲಿ ಇಷ್ಟು ಪ್ರಮಾಣದಲ್ಲಿ ವ್ಯವಸ್ಥೆಗಳು ಇಲ್ಲದ ಕಾರಣ ಸಾಕಷ್ಟು ಜನರು ತ್ವರಿತ ಕಾಲದಲ್ಲಿ ಆಮ್ಲಜನಕ ಸಿಗದೆ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಭಾರತದಲ್ಲಿ ಕೊರೊನಾ ವೈರಸ್‌ನ ಪ್ರಮಾಣ ನಿಧಾನವಾಗಿ ಕೆಳಮುಖವಾಗಿ ಸಾಗುತ್ತಿದೆ.

English summary
18,016 Oxygen concentrators; 19,085 Oxygen cylinders received in foreign aid dispatched so far said Centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X