ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಡೀಲ್ ಬಗ್ಗೆ ಸುಳ್ಳು ಸಂಗತಿ ಬಿಂಬಿಸಲು ಯತ್ನ: ಸರ್ಕಾರ ಆರೋಪ

|
Google Oneindia Kannada News

ನವದೆಹಲಿ, ಮೇ 4: ರಫೇಲ್ ಜೆಟ್‌ಗಳ ಖರೀದಿ ಒಪ್ಪಂದ ಪ್ರಕ್ರಿಯೆ ಬಗ್ಗೆ ಪ್ರಧಾನಿ ಕಚೇರಿ ನಿಗಾ ವಹಿಸಿತ್ತು. ಆದರೆ, ಇದರ ಅರ್ಥ ಅದು ಫ್ರಾನ್ಸ್‌ನೊಂದಿಗೆ ಸಮಾನಾಂತರ ವ್ಯವಹಾರ ನಡೆಸಿದೆ ಎಂದಲ್ಲ ಎಂಬುದಾಗಿ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

'ಸರ್ಕಾರ ಮತ್ತು ಸರ್ಕಾರದ ನಡುವಿನ ಪ್ರಕ್ರಿಯೆಯನ್ನು ಪಿಎಂಒ ನಿರ್ವಹಿಸುವುದನ್ನು ಹಸ್ತಕ್ಷೇಪ ಅಥವಾ ಸಮಾನಾಂತರ ವ್ಯವಹಾರ ಎಂದು ವ್ಯಾಖ್ಯಾನಿಸಲು ಸಾಧ್ಯವಾಗುವುದಿಲ್ಲ' ಎಂದು ಕೇಂದ್ರ ಸರ್ಕಾರ ಶನಿವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ 13 ಪುಟಗಳ ಪ್ರತಿಕ್ರಿಯೆಯಲ್ಲಿ ಹೇಳಿದೆ.

ರಫೇಲ್: ಶನಿವಾರದೊಳಗೆ ಪ್ರತಿಕ್ರಿಯೆ ನೀಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆ ರಫೇಲ್: ಶನಿವಾರದೊಳಗೆ ಪ್ರತಿಕ್ರಿಯೆ ನೀಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ಈ ವ್ಯವಹಾರದಲ್ಲಿ ಪ್ರತಿಯೊಂದೂ ಪಾರದರ್ಶಕವಾಗಿದೆ. ಪಿಎಂಒ ಮತ್ತು ಫ್ರಾನ್ಸ್ ಅಧ್ಯಕ್ಷರ ಕಚೇರಿಗಳು ಸಭೆಯಿಂದ ಮೂಡಿಬಂದ ಒಪ್ಪಂದದ ಪ್ರಕ್ರಿಯೆಯನ್ನು ಗಮನಿಸುತ್ತಿವೆ ಎಂದು ಆಗಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರೇ ಹೇಳಿದ್ದರು ಎಂಬುದನ್ನು ಪ್ರಸ್ತಾಪಿಸಿದೆ.

centre files fresh affidavits in Rafale review case said pmo monitoring the process of deal

ಮಾಜ ಸಚಿವರಾದ ಅರುಣ್ ಶೌರಿ ಮತ್ತು ಯಶವಂತ್ ಸಿನ್ಹಾ ಹಾಗೂ ವಕೀಲ ಪ್ರಶಾಂತ್ ಭೂಷಣ್ ಅವರು ರಫೇಲ್ ಡೀಲ್ ಕುರಿತ ಸುಪ್ರೀಂಕೋರ್ಟ್‌ನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿರುವ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿರುವ ರಕ್ಷಣಾ ಇಲಾಖೆ, ಸರ್ಕಾರ-ಸರ್ಕಾರ ನಡುವಿನ ಆಂತರಿಕ ಖರೀದಿ ಪ್ರಕ್ರಿಯೆಯನ್ನು ಬಹಿರಂಗಪಡಿಸಲು ಮತ್ತು ಅದರ ಬಗ್ಗೆ ಕೆಲವೇ ಆಯ್ದ ಹಾಗೂ ಅಪೂರ್ಣ ಚಿತ್ರಣವನ್ನು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

ರಫೇಲ್ ಡೀಲ್ ಬಳಿಕ ಅಂಬಾನಿ ಸಾಲ ಮನ್ನಾ ಮಾಡಿತೇ ಫ್ರಾನ್ಸ್ ಸರ್ಕಾರ? ರಫೇಲ್ ಡೀಲ್ ಬಳಿಕ ಅಂಬಾನಿ ಸಾಲ ಮನ್ನಾ ಮಾಡಿತೇ ಫ್ರಾನ್ಸ್ ಸರ್ಕಾರ?

ಅರ್ಜಿದಾರರ ಕ್ರಮಗಳು ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಗೆ ಸಂಬಂಧಿಸಿದ ಸಾರ್ವಭೌಮದ ನಿರ್ಧಾರವನ್ನು ಪ್ರಶ್ನಿಸುವುದಕ್ಕೆ ಸಮವಾಗಿದೆ. ಅರ್ಜಿದಾರರು ಇದಕ್ಕೆ ಸಂಬಂಧಿಸದ ವಿವಾದಗಳನ್ನು ಬೆಸೆಯಲು ಮತ್ತು ಕೆಲವು ಮಾಧ್ಯಮಗಳ ವರದಿ ಆಧಾರದಲ್ಲಿ ವಿವಾದಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದೆ.

ರಫೇಲ್ ತೀರ್ಪು: ಕೇಂದ್ರಕ್ಕೆ ಹಿನ್ನಡೆ, ಸತ್ಯಮೇವ ಜಯತೆ ಎಂದ ಕಾಂಗ್ರೆಸ್! ರಫೇಲ್ ತೀರ್ಪು: ಕೇಂದ್ರಕ್ಕೆ ಹಿನ್ನಡೆ, ಸತ್ಯಮೇವ ಜಯತೆ ಎಂದ ಕಾಂಗ್ರೆಸ್!

ರಫೇಲ್ ಡೀಲ್‌ ಮತ್ತು ಅನಿಲ್ ಅಂಬಾನಿ ಅವರ ಆಫ್‌ಸೆಟ್‌ಗೆ ಫ್ರೆಂಚ್ ಸರ್ಕಾರ ವಿನಾಯಿತಿ ನೀಡಿರುವುದಕ್ಕೆ ಯಾವ ಸಂಬಂಧವೂ ಇಲ್ಲ ಎಂದು ಹೇಳಿದೆ.

English summary
Defence Ministry on Saturday said to Supreme Court in its fresh affidavits in Rafale deal review case, PMO was monitoring the process of the deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X