ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜಾಗೃತಿ ಸಂದೇಶ': ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಸಮರ್ಥಿಸಿಕೊಂಡ ಕೇಂದ್ರ

|
Google Oneindia Kannada News

ನವದೆಹಲಿ, ಆ.11: ಕೋವಿಡ್ ಲಸಿಕೆ ಪ್ರಮಾಣಪತ್ರಗಳ ಮೇಲಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಚಿತ್ರ ಹಾಗೂ ಲಸಿಕೆ ಪ್ರಮಾಣಪತ್ರಗಳ ಮೇಲೆ ಇರುವ ಪ್ರಧಾನ ಮಂತ್ರಿಯ ಹೇಳಿಕೆಯು ಕೊರೊನಾ ವೈರಸ್‌ ಸೋಂಕಿನ ವಿರುದ್ದ ಜನರು ಲಸಿಕೆ ಪಡೆದ ಬಳಿಕವೂ ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವ ಸಂದೇಶವನ್ನು ಬಲಪಡಿಸುವಂತಿದೆ ಎಂದು ಸರ್ಕಾರ ಮಂಗಳವಾರ ರಾಜ್ಯಸಭೆಗೆ ತಿಳಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್‌ ರ ಲಿಖಿತ ಪ್ರತಿಕ್ರಿಯೆಯು ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮುಂಚೆಯೇ ಆರಂಭವಾದ ದೊಡ್ಡ ವಿರೋಧದ ಟೀಕೆಗಳ ನಡುವೆ ಬಂದಿತು.

ಮೋದಿ ಬದಲು ಸಿಎಂ ಫೋಟೋ ಇರುವ ಲಸಿಕೆ ಪ್ರಮಾಣಪತ್ರ ನೀಡಲು ಆರಂಭಿಸಿದ ಛತ್ತೀಸ್‌ಗಢ ಸರ್ಕಾರಮೋದಿ ಬದಲು ಸಿಎಂ ಫೋಟೋ ಇರುವ ಲಸಿಕೆ ಪ್ರಮಾಣಪತ್ರ ನೀಡಲು ಆರಂಭಿಸಿದ ಛತ್ತೀಸ್‌ಗಢ ಸರ್ಕಾರ

ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ನೀಡುವ ಪ್ರಮಾಣಪತ್ರದಲ್ಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಿತ್ರವಿರುವುದು ವಿರೋಧ ಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿತ್ತು. ಪ್ರಧಾನಿಯವರ ಫೋಟೋವನ್ನು ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲೂ ಹಾಕಿರುವುದು ಸ್ವಯಂ ಪ್ರಚಾರಗಿಟ್ಟಿಸಿಕೊಳ್ಳುವ ವ್ಯಾಮೋಹ ಹಾಗೂ ಚುನಾವಣೆಗೆ ಮುಂಚಿತವಾಗಿ ಮಾಡಲಾಗುತ್ತಿರುವ ತಂತ್ರ ಎಂದು ವಿರೋಧ ಪಕ್ಷಗಳು ಆರೋಪಿಸಿದೆ. ಹಾಗೆಯೇ ಇದು ಕೇವಲ ರಾಜಕೀಯ ನಡೆ ಎಂದು ಪ್ರತಿಪಕ್ಷಗಳು ದೂರಿದೆ.

 Centre Defends PM Photo On Covid Vaccination Certificates

ಪಂಜಾಬ್, ಜಾರ್ಖಂಡ್ ಮತ್ತು ಛತ್ತೀಸ್‌ಗಢ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಆಡಳಿತದ ನಡೆಸುತ್ತಿರುವ ರಾಜ್ಯಗಳಲ್ಲಿ ಕೋವಿಡ್‌ ಲಸಿಕೆ ಪ್ರಮಾಣಪತ್ರಗಳಿಂದ ಪ್ರಧಾನಿ ನರೇಂದ್ರ ಮೋದಿ ಫೋಟೋವನ್ನು ತೆಗೆದುಹಾಕಲಾಗಿದೆ. ಕೆಲವು ರಾಜ್ಯಗಳು ತಮ್ಮ ರಾಜ್ಯದ ಮುಖ್ಯಮಂತ್ರಿಯ ಚಿತ್ರವನ್ನೇ ಕೋವಿಡ್‌ ಲಸಿಕೆ ಪ್ರಮಾಣ ಪತ್ರದಲ್ಲಿ ಹಾಕಿಕೊಂಡಿದೆ.

'ಆಕ್ಸಿಜನ್‌ ಕೊರತೆಯಿಂದ ಸಾವಿನ ಬಗ್ಗೆ ಕೇಂದ್ರ ಮಾಹಿತಿಯೇ ಕೇಳಿಲ್ಲ': ಛತ್ತೀಸ್‌ಗಢ ಆರೋಗ್ಯ ಸಚಿವ'ಆಕ್ಸಿಜನ್‌ ಕೊರತೆಯಿಂದ ಸಾವಿನ ಬಗ್ಗೆ ಕೇಂದ್ರ ಮಾಹಿತಿಯೇ ಕೇಳಿಲ್ಲ': ಛತ್ತೀಸ್‌ಗಢ ಆರೋಗ್ಯ ಸಚಿವ

ಛತ್ತೀಸ್ ಗಢ ಸರ್ಕಾರವು ಇದರಲ್ಲಿ ಬದಲಾವಣೆ ತಂದಿದ್ದು ಛತ್ತೀಸ್‌ಗಢದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಕೋವಿಡ್ ಲಸಿಕೆ ಫಲಾನುಭವಿಗಳಿಗೆ ನೀಡುವ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬದಲಾಗಿ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಫೋಟೋ ಹಾಕಲಾಗಿದೆ. ಛತ್ತೀಸ್‌ಗಢ ಸರ್ಕಾರ 18-44 ವರ್ಷದೊಳಗಿನವರಿಗೆ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಫೋಟೋ ಇರುವ ಕೋವಿಡ್‌ ಲಸಿಕೆ ಪ್ರಮಾಣಪತ್ರಗಳನ್ನು ನೀಡುತ್ತಿದೆ. ಈ ಬೆನ್ನಲ್ಲೇ ಜಾರ್ಖಂಡ್ ಸರ್ಕಾರವು ಇದೇ ರೀತಿಯ ಬದಲಾವಣೆಯನ್ನು ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಫೋಟೋ ಬದಲಾಗಿ ಜಾರ್ಖಂಡ್‌ನಲ್ಲಿ ಕೋವಿಡ್‌ ಪ್ರಮಾಣ ಪತ್ರದಲ್ಲಿ ಮುಖ್ಯಮಂತ್ರಿ ಹೇಮಂತ್‌ ಸೋರನ್‌ ಚಿತ್ರವನ್ನು ಹಾಕಿದೆ.

ರಾಜ್ಯಗಳು ಲಸಿಕೆಗಳನ್ನು ಖರೀದಿಸುವ ಹೊಣೆ ಹೊತ್ತಿದ್ದಾಗ ಕೆಲವು ನಾಯಕರು ರಾಜ್ಯಗಳ ಪ್ರಯತ್ನಗಳಿಗೆ ಕೇಂದ್ರವು ಮನ್ನಣೆ ಪಡೆಯುತ್ತಿದೆ ಎಂದು ಹೇಳಿದರು. ಕೇಂದ್ರವು ಖಾಸಗಿ ಆಸ್ಪತ್ರೆಗಳನ್ನು ಹೊರತುಪಡಿಸಿ ದೇಶಾದ್ಯಂತ ಲಸಿಕೆಗಳನ್ನು ಖರೀದಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಆದಾಗ್ಯೂ, ಲಸಿಕೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ರಾಜ್ಯಗಳು ಹೊಂದಿತ್ತು.

 Centre Defends PM Photo On Covid Vaccination Certificates

ಜಾಗೃತಿ ಸಂದೇಶ ಎಂದ ಕೇಂದ್ರ

ಮಂಗಳವಾರ, ಆರೋಗ್ಯ ಸಚಿವಾಲಯಕ್ಕೆ ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಛಾಯಾಚಿತ್ರಗಳನ್ನು ಮುದ್ರಿಸುವುದು ಅಗತ್ಯವಿದೆಯೇ ಮತ್ತು ಕಡ್ಡಾಯವೇ ಎಂದು ಪ್ರಶ್ನಿಸಲಾಗಿದೆ. ಈ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್, "ಕೋವಿಡ್‌ ಸಾಂಕ್ರಾಮಿಕದ ಸಂದರ್ಭ, ಕೊರೊನಾ ವೈರಸ್‌ನ ವಿರುದ್ದವಾಗಿ ಮತ್ತು ಕೋವಿಡ್-ಸೂಕ್ತವಾದ ನಡವಳಿಕೆಗಳನ್ನು ಅನುಸರಿಸುವುದು ರೋಗದ ಹರಡುವಿಕೆಯನ್ನು ತಡೆಗಟ್ಟುವ ಅತ್ಯಂತ ನಿರ್ಣಾಯಕ ಕ್ರಮಗಳಲ್ಲಿ ಒಂದಾಗಿದೆ. ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಗಾಗಿ, ಕೋವಿಡ್‌ ಲಸಿಕೆ ಹಾಕಿದ ನಂತರವೂ ಕೋವಿಡ್ -19 ಸೂಕ್ತ ನಡವಳಿಕೆಯನ್ನು ಅನುಸರಿಸುವ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ಜಾಗೃತಿ ಸಂದೇಶವನ್ನು ಪ್ರಮಾಣಪತ್ರಗಳು ಬಲಪಡಿಸುತ್ತವೆ,"ಎಂದು ಪ್ರತಿಪಾದಿಸಿದರು.

ಛತ್ತೀಸ್‌ಗಢ: 1,600 ರು. ಮೌಲ್ಯದ 800 ಕೆಜಿ ಗೋವಿನ ಸಗಣಿ ಕಳವು! - ಪ್ರಕರಣ ದಾಖಲುಛತ್ತೀಸ್‌ಗಢ: 1,600 ರು. ಮೌಲ್ಯದ 800 ಕೆಜಿ ಗೋವಿನ ಸಗಣಿ ಕಳವು! - ಪ್ರಕರಣ ದಾಖಲು

ಇಂತಹ ನಿರ್ಣಾಯಕ ಸಂದೇಶಗಳು ಜನರಿಗೆ ತಲುಪುವಂತೆ ಮತ್ತು ಪರಿಣಾಮಕಾರಿಯಾಗಿ ಉಳಿಯುವಂತೆ ನೋಡಿಕೊಳ್ಳುವುದು ಸರ್ಕಾರದ "ನೈತಿಕ ಹೊಣೆಗಾರಿಕೆ" ಎಂದು ಕೂಡಾ ಹೇಳಿದರು. ಕೊವಿನ್ ಆಪ್‌ನಿಂದ ಲಸಿಕೆ ಪ್ರಮಾಣಪತ್ರದ ಸ್ವರೂಪಗಳನ್ನು ಪ್ರಮಾಣೀಕರಿಸಲಾಗಿದೆ ಮತ್ತು ವಿಶ್ವ ಆರೋಗ್ಯ ಪ್ರಾಧಿಕಾರದ ಮಾರ್ಗಸೂಚಿಗಳಿಗೆ ಅನುಸಾರವಾಗಿದೆ ಎಂದು ಸರ್ಕಾರದ ಪ್ರತಿಕ್ರಿಯೆಯೂ ಸೇರಿಸಲಾಗಿದೆ. ಕೋವಿಡ್‌ ಲಸಿಕೆ ಪ್ರಮಾಣಪತ್ರದ ಸ್ವರೂಪ, ಕೋವಿಡ್‌ ಲಸಿಕೆ ಪ್ರಮಾಣಪತ್ರಗಳಿಗೆ ಡಬ್ಲ್ಯುಎಚ್‌ಒ ಮಾನದಂಡಗಳಿಗೆ ಅನುಸಾರವಾಗಿ, ಲಸಿಕೆಯ ನಂತರವೂ ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವ ಮಹತ್ವದ ಬಗ್ಗೆ ಸಂದೇಶ ಮತ್ತು ಪ್ರಸ್ತುತಿ ಸೇರಿದಂತೆ, ಈ ಎಲ್ಲ ಅಂಶಗಳನ್ನು ಪರಿಗಣಿಸಿ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
The photograph along with the message of the Prime Minister in the vaccination certificates reinforces the message for creating Covid awareness says Centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X