ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರು ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಅಲರ್ಟ್

|
Google Oneindia Kannada News

ನವದೆಹಲಿ, ಜನವರಿ 08: ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಇದೀಗ ಆರು ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಕೇರಳ, ರಾಜಸ್ಥಾನ, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ ಹಾಗೂ ಗುಜರಾತ್ ನಲ್ಲಿ ಹಕ್ಕಿ ಜ್ವರ ಇರುವುದಾಗಿ ಖಚಿತ ಪಡಿಸಿದ್ದು, ಈ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಈ ರಾಜ್ಯಗಳಿಗೆ ಸೂಚಿಸಿದೆ.

ಹಕ್ಕಿ ಜ್ವರ ಪ್ರಕರಣಗಳು ಕಾಣಿಸಿಕೊಳ್ಳದ ರಾಜ್ಯಗಳಲ್ಲಿಯೂ ಹಕ್ಕಿಗಳು ಅನುಮಾನಾಸ್ಪದವಾಗಿ ಸತ್ತಿದ್ದು ಕಂಡುಬಂದರೆ ತಕ್ಷಣ ಅಧಿಕಾರಿಗಳ ಗಮನಕ್ಕೆ ತರಬೇಕಾಗಿ ಸೂಚನೆ ನೀಡಿದೆ.

ಹಕ್ಕಿ ಜ್ವರ; ಮೊಟ್ಟೆ, ಮಾಂಸ ಸಂಪೂರ್ಣ ಬೇಯಿಸದೇ ತಿನ್ನಬೇಡಿಹಕ್ಕಿ ಜ್ವರ; ಮೊಟ್ಟೆ, ಮಾಂಸ ಸಂಪೂರ್ಣ ಬೇಯಿಸದೇ ತಿನ್ನಬೇಡಿ

ಇದುವರೆಗೂ ದೇಶದ ಆರು ರಾಜ್ಯಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ದೃಢಪಟ್ಟಿವೆ. ಕೇರಳದಲ್ಲಿ ಹಕ್ಕಿಗಳನ್ನು ಕೊಲ್ಲುವ ಕಾರ್ಯವೂ ಮುಗಿದಿದೆ. ದೆಹಲಿಯ ಡಿಡಿಎ ಪಾರ್ಕ್ ನಲ್ಲಿ ಇಂದು ಹದಿನಾರು ಹಕ್ಕಿಗಳು ಸಾವನ್ನಪ್ಪಿದ್ದು, ಅವುಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ದೆಹಲಿಯಲ್ಲಿ ಹಕ್ಕಿ ಜ್ವರ ಇನ್ನೂ ದೃಢಪಟ್ಟಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Centre Confirms Bird Flu In 6 states

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತುಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

ಕೇರಳ, ಹರಿಯಾಣ, ಹಿಮಾಚಲ ಪ್ರದೇಶದಲ್ಲಿ ಕೇಂದ್ರದಿಂದ ತಂಡಗಳನ್ನು ಪರಿಶೀಲನೆಗೆ ಕಳುಹಿಸಲಾಗುತ್ತಿದೆ. ಹಕ್ಕಿ ಜ್ವರ ಪೀಡಿತ ಸುತ್ತಮುತ್ತಲ ರಾಜ್ಯಗಳಲ್ಲೂ ಕೋಳಿ ಸಾಗಣೆ ಬಗ್ಗೆ ನಿಗಾ ವಹಿಸುವಂತೆ ಸೂಚಿಸಲಾಗಿದೆ.

English summary
Bird flu has been confirmed in Kerala, Rajasthan, Madhya Pradesh, Himachal Pradesh, Haryana and Gujarat so far, the Centre said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X