ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಮಾಲಿನ್ಯ ನಿಯಂತ್ರಣಕ್ಕೆ ಶೀಘ್ರದಲ್ಲಿಯೇ ಕಾನೂನು: ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಅಕ್ಟೋಬರ್ 26: ದೆಹಲಿ ಹಾಗೂ ರಾಜಧಾನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಬೆಳೆ ಸುಡುವ ಚಟುವಟಿಕೆಗಳು ಹಾಗೂ ವಾಯುಮಾಲಿನ್ಯವನ್ನು ನಿಯಂತ್ರಿಸಲು ಸೂಕ್ತ ಶಾಸನ ರೂಪಿಸಲಾಗುವುದಾಗಿ ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ.

ರಾಜಧಾನಿ ಸುತ್ತಲಿನ ಎನ್‌ಸಿಆರ್ ರಾಜ್ಯಗಳಲ್ಲಿ ಕೃಷಿ ಕೂಳೆಗಳನ್ನು ನಾಶಪಡಿಸಲು ಬೆಂಕಿ ಹಚ್ಚುವುದರಿಂದ ರಾಜಧಾನಿಯನ್ನು ಅಪಾರ ಪ್ರಮಾಣದಲ್ಲಿ ಮಾಲಿನ್ಯ ಕಾಡಲು ಕಾರಣವಾಗಿದೆ ಎಂಬ ಆರೋಪವಿದ್ದು, ಅದನ್ನು ಖುದ್ದು ಪರಿಶೀಲಿಸುವ ಸಂಬಂಧ ಏಕ ಸದಸ್ಯ ಸಮಿತಿಯನ್ನು ನೇಮಿಸಿ ಸುಪ್ರೀಂಕೋರ್ಟ್ ಆದೇಶಿಸಿತ್ತು. ಈಗ ಕೇಂದ್ರದ ಭರವಸೆಯ ಕಾರಣದಿಂದ ತನ್ನ ಆದೇಶಕ್ಕೆ ತಡೆ ನೀಡಿದೆ.

ಮಾಲಿನ್ಯ: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಮತ್ತಷ್ಟು ಕ್ಷೀಣಮಾಲಿನ್ಯ: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಮತ್ತಷ್ಟು ಕ್ಷೀಣ

ಕೂಳೆ ಸುಡುವ ಅಂಶ ಸೇರಿದಂತೆ ವಾಯು ಮಾಲಿನ್ಯ ತಡೆಯುವ ಕಾರ್ಯವನ್ನು ನಿಭಾಯಿಸಲು ಪರಿಣಾಮಕಾರಿ ಕಾನೂನು ತರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸೋಮವಾರ ತಿಳಿಸಿದೆ. ಇದನ್ನು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರ ನೇತೃತ್ವದ ನ್ಯಾಯಪೀಠ ಪರಿಗಣಿಸಿದೆ.

Centre Assures Supreme Court To Bring Legislation To Tackel Air Pollution

ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ಕೂಳೆ ಸುಡುವುದರಿಂದ ಉಂಟಾಗುವ ವಾಯುಮಾಲಿನ್ಯದ ಬಗ್ಗೆ ಪರಿಶೀಲನೆ ನಡೆಸುವಂತೆ ಅಕ್ಟೋಬರ್ 16ರಂದು ನಿವೃತ್ತ ನ್ಯಾಯಮೂರ್ತಿ ಮದನ್ ಬಿ ಲೋಕುರ್ ಅವರ ಏಕ ಸದಸ್ಯ ಸಮಿತಿಯನ್ನು ನೇಮಿಸಿ ಸುಪ್ರೀಂಕೋರ್ಟ್ ಅದೇಶ ಹೊರಡಿಸಿತ್ತು.

2019ರಲ್ಲಿ ವಾಯುಮಾಲಿನ್ಯದಿಂದ 5 ಲಕ್ಷ ನವಜಾತ ಶಿಶುಗಳ ಸಾವು2019ರಲ್ಲಿ ವಾಯುಮಾಲಿನ್ಯದಿಂದ 5 ಲಕ್ಷ ನವಜಾತ ಶಿಶುಗಳ ಸಾವು

ಎನ್‌ಸಿಆರ್‌ನಲ್ಲಿ ಕೂಳೆ ಸುಡುವುದನ್ನು ಪರಿಶೀಲಿಸಲು ಮತ್ತು ತಡೆಯಲು ಶೀಘ್ರದಲ್ಲಿಯೇ ಸುಗ್ರೀವಾಜ್ಞೆ ಹೊರಡಿಸಲಾಗುವುದು. ಶೀಘ್ರದಲ್ಲಿಯೇ ಆದೇಶ ಹೊರಡಿಸಲು ಸರ್ಕಾರ ಬಯಸಿರುವುದರಿಂದ ಸುಗ್ರೀವಾಜ್ಞೆ ಹೊರಡಿಸಲಾಗುತ್ತದೆ ಎಂದು ಸಾಲಿಸಿಟರ್ ಜನರ್ಲ ತುಷಾರ್ ಮೆಹ್ತಾ ತಿಳಿಸಿದ್ದಾರೆ.

English summary
The Centre has told the Supreme Court tha it is planning to bring a legislation to tackle air pllution and stubble burning issue in Delhi-NCR area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X