ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹ ಪೀಡಿತ ರಾಜ್ಯಗಳಿಗೆ ಅನುದಾನ, ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

|
Google Oneindia Kannada News

ನವದೆಹಲಿ ಮಾರ್ಚ್ 4: ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆ 5 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 1,682.11 ಕೋಟಿ ರೂ. ಕೇಂದ್ರದ ಹೆಚ್ಚುವರಿ ಸಹಾಯಧನಕ್ಕೆ ಅನುಮೋದನೆ ನೀಡಿದೆ. ಕರ್ನಾಟಕ ರಾಜ್ಯಕ್ಕೆ 459 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ನೀಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ಸಭೆ 2021 ರಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಐದು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್‌ಡಿಆರ್‌ಎಫ್) ಅಡಿಯಲ್ಲಿ ಹೆಚ್ಚುವರಿ ಕೇಂದ್ರ ಸಹಾಯವನ್ನು ಅನುಮೋದಿಸಿದೆ ಎಂದು ಸಚಿವಾಲಯದ ಹೇಳಿದೆ.

ಸಮಿತಿಯು ಐದು ರಾಜ್ಯಗಳಿಗೆ 1,664.25 ಕೋಟಿ ರೂ. ಹೆಚ್ಚುವರಿ ಕೇಂದ್ರ ಸಹಾಯವನ್ನು ಅನುಮೋದಿಸಿದೆ. ಆಂಧ್ರಪ್ರದೇಶಕ್ಕೆ ₹ 351.43 ಕೋಟಿ; ಹಿಮಾಚಲ ಪ್ರದೇಶಕ್ಕೆ ₹112.19 ಕೋಟಿ; ಕರ್ನಾಟಕಕ್ಕೆ ₹492.39 ಕೋಟಿ; ಮಹಾರಾಷ್ಟ್ರಕ್ಕೆ ₹355.39 ಕೋಟಿ; ತಮಿಳುನಾಡಿಗೆ ₹352.85 ಕೋಟಿ; ಮತ್ತು ಪುದುಚೇರಿಯ ಯುಟಿಗೆ ₹17.86 ಕೋಟಿ ರೂ. ಅನುದಾನ NDRF ನಿಂದ ನೀಡಿದೆ.

Centre approves funds to States affected by flood

"ಈ ಹೆಚ್ಚುವರಿ ನೆರವು ಈಗಾಗಲೇ ರಾಜ್ಯಗಳಿಗೆ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಲ್ಲಿ (SDRF) ರಾಜ್ಯಗಳಿಗೆ ಕೇಂದ್ರದಿಂದ ಬಿಡುಗಡೆಯಾದ ನಿಧಿಗಿಂತ ಹೆಚ್ಚಾಗಿರುತ್ತದೆ. 2021-22 ರ ಹಣಕಾಸು ವರ್ಷದಲ್ಲಿ, ಕೇಂದ್ರ ಸರ್ಕಾರವು 28 ರಾಜ್ಯಗಳಿಗೆ ತಮ್ಮ ಎಸ್‌ಡಿಆರ್‌ಎಫ್‌ನಲ್ಲಿ ₹ 17,747.20 ಕೋಟಿ ಮತ್ತು ಎನ್‌ಡಿಆರ್‌ಎಫ್‌ನಿಂದ 8 ರಾಜ್ಯಗಳಿಗೆ ₹ 4,645.92 ಕೋಟಿ ಬಿಡುಗಡೆ ಮಾಡಿದೆ" ಎಂದು ಸಚಿವಾಲಯ ಹೇಳಿಕೆ ತಿಳಿಸಿದೆ.

English summary
A high level committee chaired by Union Home Minister Amit Shah, has approved additional central assistance under the National Disaster Response Fund (NDRF) to five States and one Union Territory, which were affected by floods and landslides in 2021, a statement by the Ministry of Home Affairs (MHA) said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X