ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ನಂತರ ಮತ್ತೊಬ್ಬ ಕೇಂದ್ರ ಸಚಿವನಿಗೆ ಕೊರೊನಾ

|
Google Oneindia Kannada News

ದೆಹಲಿ, ಆಗಸ್ಟ್ 05: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೊರೊನಾ ವೈರಸ್ ತಗುಲಿದೆ ಬೆನ್ನಲ್ಲೆ ಮತ್ತೊಬ್ಬ ಸಚಿವನಿಗೆ ಕೊವಿಡ್ ಅಂಟಿಕೊಂಡಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮಂಗಳವಾರ ಕೊರೊನಾ ಪಾಸಿಟಿವ್ ಬಂದಿದೆ.

ಈ ಕುರಿತು ಸ್ವತಃ ಧರ್ಮೇಂದ್ರ ಪ್ರಧಾನ್ ಅವರೇ ಟ್ವೀಟ್ ಮಾಡಿದ್ದು, ''ಕೊವಿಡ್ ಲಕ್ಷಣಗಳು ಕಂಡು ಬಂದ ಹಿನ್ನೆಲೆ ನಾನು ಪರೀಕ್ಷೆಗೆ ಒಳಗಾಗಿದ್ದೆ, ಪಾಸಿಟಿವ್ ಬಂದಿದೆ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ಸೇರಿದ್ದೇನೆ. ನನ್ನ ಆರೋಗ್ಯ ಸ್ಥಿತಿರವಾಗಿದೆ'' ಎಂದು ತಿಳಿಸಿದ್ದಾರೆ.

ಈ ಹಿಂದೆ ಅಮಿತ್ ಶಾ ಅವರು ದಾಖಲಾಗಿರುವ ಮೆದಾನ್ತಾ ಆಸ್ಪತ್ರೆಯಲ್ಲೇ ಧರ್ಮೇಂದ್ರ ಪ್ರಧಾನ್ ಸಹ ದಾಖಲಾಗಿದ್ದಾರೆ. ಈ ಮೂಲಕ ಇದುವರೆಗೂ ಇಬ್ಬರು ಕೇಂದ್ರ ಸಚಿವರಿಗೆ ಕೊರೊನಾ ವಕ್ಕರಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೊನಾವೈರಸ್ ಪಾಸಿಟಿವ್!ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೊನಾವೈರಸ್ ಪಾಸಿಟಿವ್!

central-minister-dharmendra-pradhan-tests-positive-for-coronavirus

ಅಂದ್ಹಾಗೆ, ಜುಲೈ 29ರಂದು ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರು ಕ್ಯಾಬಿನೆಟ್ ಸಚಿವರು ಸಭೆ ಸೇರಿದ್ದರು. ಆದರೆ, ಈ ಸಭೆಯಲ್ಲಿ ಧರ್ಮೇಂದ್ರ ಪ್ರಧಾನ್ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಧರ್ಮೇಂದ್ರ ಪ್ರಧಾನ್ ಅವರು ಬೇಗ ಗುಣಮುಖರಾಗಲಿ ಎಂದು ಆರೋಗ್ಯ ಸಚಿವ ಡಾ ಹರ್ಷವರ್ಧನ್ ಟ್ವೀಟ್ ಮಾಡಿ ಶುಭಕೋರಿದ್ದಾರೆ.

ಇನ್ನು ದೇಶಾದ್ಯಂತ ಹಲವು ಗಣ್ಯರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಕರ್ನಾಟಕ ಸಿಎಂ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡು ರಾಜ್ಯಪಾಲರಿಗೂ ಸೋಂಕು ತಗುಲಿದೆ.

English summary
Central petroleum minister Dharmendra Pradhan tests positive for coronavirus and he, admitted to Medanta in Gurugram hospitail on august 5th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X