ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಔಷಧೋದ್ಯಮಕ್ಕೆ ಶಕ್ತಿ ತುಂಬಲು ಹೊಸ ಮಾರ್ಗಸೂಚಿ

|
Google Oneindia Kannada News

ನವದೆಹಲಿ, ಜುಲೈ.27: ಕೊರೊನಾವೈರಸ್ ಸೋಂಕು ಹರಡುವಿಕೆ ಹಿನ್ನೆಲೆ ದೇಶದ ವಿವಿಧ ಭಾಗಗಳಲ್ಲಿ ನಾಲ್ಕು ʼಫಾರ್ಮಾ ಪಾರ್ಕ್ʼಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.

ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ನಾನೇ ಕ್ವಾರಂಟೈನ್ ಆಗೋದು ಸರಿನಾ: ಕೇಂದ್ರ ಸಚಿವ ಸದಾನಂದಗೌಡ ಪ್ರಶ್ನೆ!ನಾನೇ ಕ್ವಾರಂಟೈನ್ ಆಗೋದು ಸರಿನಾ: ಕೇಂದ್ರ ಸಚಿವ ಸದಾನಂದಗೌಡ ಪ್ರಶ್ನೆ!

ಕಳೆದ ಮಾರ್ಚ್‌ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟವು ಈ ಯೋಜನೆಗಳಿಗೆ ಅನುಮೋದನೆ ನೀಡಿತ್ತು. ಔಷಧೋದ್ಯಮ ವಲಯದಲ್ಲಿ ದೇಶವನ್ನು ಸಂಪೂರ್ಣ ಸ್ವಾವಲಂಬಿ ಮಾಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ, ದೂರದೃಷ್ಟಿಗೆ ಅನುಗುಣವಾಗಿ ಈ ಯೋಜನೆಗಳನ್ನು ರೂಪಿಸಲಾಗಿದೆ" ಎಂದರು.

ಫಾರ್ಮಾ ಪಾರ್ಕ್ ಅಭಿವೃದ್ಧಿಗೆ ಕೇಂದ್ರ ಮುಂದು

ಫಾರ್ಮಾ ಪಾರ್ಕ್ ಅಭಿವೃದ್ಧಿಗೆ ಕೇಂದ್ರ ಮುಂದು

ಬಲ್ಕ್ ಡ್ರಗ್ಸ್, ಆಕ್ಟಿವ್ ಫಾರ್ಮಾಸ್ಯುಟಿಕಲ್ ಇನ್‌ಗ್ರೇಡಿಯಂಟ್ಸ್ (ಎಪಿಐ), ಕೀ ಸ್ಟಾರ್ಟಿಂಗ್ ಮಟಿರಿಯಲ್ಸ್ (ಕೆಎಸ್ಎಂಇ) ವೈದ್ಯಕೀಯ ಸಲಕರಣೆಗಳ ಉತ್ಪಾದನೆ ಸೇರಿದಂತೆ ಔಷಧೋದ್ಯಮಕ್ಕೆ ಸಂಬಂಧಿಸಿದ ವಿವಿಧ ವಲಯಗಳನ್ನು ಕೇಂದ್ರೀಕೃತವಾಗಿ ಈ ಫಾರ್ಮಾ ಪಾರ್ಕ್‌ ಗಳು ಅಭಿವೃದ್ಧಿಗೊಳಿಸಲು ತೀರ್ಮಾನಿಸಲಾಗಿದೆ.

ಮೂಲಭೂತ ಸೌಕರ್ಯ ರಾಜ್ಯ ಸರ್ಕಾರದ ಹೊಣೆ

ಮೂಲಭೂತ ಸೌಕರ್ಯ ರಾಜ್ಯ ಸರ್ಕಾರದ ಹೊಣೆ

ರಾಜ್ಯ ಸರ್ಕಾರಗಳು ಕೂಡಾ ಫಾರ್ಮಾ ಪಾರ್ಕ್‌ ಗಳಲ್ಲಿ ಕನಿಷ್ಠ ಶೇಕಡಾ.51ರಷ್ಟು ಪಾಲುಗಾರಿಕೆ ಹೊಂದಿರಬೇಕು. ಅಗತ್ಯ ಭೂಮಿ, ವಿದ್ಯತ್, ನೀರು, ಸಂಪರ್ಕ ರಸ್ತೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯ ರಾಜ್ಯ ಸರ್ಕಾರವು ನಿಗದಿತ ಅವಧಿಯೊಳಗೆ ಕಲ್ಪಿಸಬೇಕಿದೆ. ಈ ಫಾರ್ಮಾ ಪಾರ್ಕ್ ಗಳು ಪ್ಲಗ್‌ ಆಂಡ್ ಪ್ಲೇ ನಮೂನೆಯಲ್ಲಿ ಸಿದ್ಧವಾಗಲಿವೆ. ಇದರಲ್ಲಿ ಆಧುನಿಕ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು ಸೇರಿದಂತೆ ಎಲ್ಲ ಮೂಲ ಸೌಕರ್ಯ ಇರಲಿವೆ.

ಸರ್ಕಾರದಿಂದ ಖಾಸಗಿ ಸಹಭಾಗಿತ್ವಕ್ಕೆ ಪ್ರೋತ್ಸಾಹ

ಸರ್ಕಾರದಿಂದ ಖಾಸಗಿ ಸಹಭಾಗಿತ್ವಕ್ಕೆ ಪ್ರೋತ್ಸಾಹ

ಫಾರ್ಮಾ ಪಾರ್ಕ್ ಗೆ ಸಂಬಂಧಿಸಿದ ಕೈಗಾರಿಕಾ ಘಟಕ ಸ್ಥಾಪಿಸಿ ಉತ್ಪಾದನೆ ಆರಂಭಿಸಲು ಉದ್ಯಮಿಗಳಿಗೂ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಸ್ಥಾಪಿತ ಘಟಕಗಳಿಗೆ ಸರ್ಕಾರದ ವತಿಯಿಂದ ಉತ್ಪಾದನಾ ಆಧಾರಿತ ಪ್ರೋತ್ಸಾಹ ಧನ ನೀಡಲಾಗುತ್ತದೆ. ದೇಶದ ಔಷಧೋದ್ಯಮಗಳು ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ಔಷಧ ಮತ್ತು ಔಷಧೋಪಕರಣಗಳನ್ನು ಉತ್ಪಾದಿಸಲು ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇಂದು ಬಿಡುಗಡೆಯಾದ ಮಾರ್ಗಸೂಚಿಯಲ್ಲಿ ಯೋಜನೆಯ ಮಾನದಂಡಗಳ ವಿವರಗಳಿವೆ. ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ "ಫಾರ್ಮಾ ಪಾರ್ಕ್‌" ಯೋಜನಾ ಸ್ಥಳಗಳ ಆಯ್ಕೆಯು ಅಂತಿಮವಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಔಷಧೋದ್ಯಮ ವೃದ್ಧಿಸಲು ಸರ್ಕಾರದ ಸಂಕಲ್ಪ

ಔಷಧೋದ್ಯಮ ವೃದ್ಧಿಸಲು ಸರ್ಕಾರದ ಸಂಕಲ್ಪ

ಕೇಂದ್ರ ಸರ್ಕಾರವು ಆರಂಭದಿಂದಲೂ ಔಷಧೋದ್ಯಮದಲ್ಲಿ ದೇಶವನ್ನು ಸ್ವಾವಲಂಬಿಗೊಳಿಸಲು ಸಂಕಲ್ಪ ಮಾಡಿದೆ. ಕೊರೊನಾವೈರಸ್ ಸಂಕಷ್ಟದ ಸಮಯವು ನಮ್ಮ ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ದೇಶದಲ್ಲಿ ಬಿಕ್ಕಟ್ಟಿನ ವೇಳೆಯಲ್ಲೂ ದೇಶಗಳಿಗೆ ಹೈಡ್ರೋಕ್ಸಿಕ್ಲೊರೊಕ್ಯೂನ್, ಪ್ಯಾರಾಸಿಟಮಲ್ ಔಷಧಗಳನ್ನು ಭಾರತ ಪೂರೈಸಿದೆ. ಇದರಿಂದ ವಿಶ್ವಾದ್ಯಂತ ಭಾರತದ ಬಗ್ಗೆ ಇರುವ ಸದ್ಭಾವನೆ ಇನ್ನಷ್ಟು ವೃದ್ಧಿಯಾಗಿದೆ. 53 ಬಗೆಯ ಮಾತ್ರೆ, ಔಷಧಿ ತಯಾರಿಕೆಗೆ ಮೂಲಕಚ್ಚಾ ರಾಸಾಯನಿಕವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಫಾರ್ಮಾ ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

40 ಸಾವಿರ ಕೋಟಿ ರೂಪಾಯಿ ರಾಸಾಯನಿಕ ಆಮದು

40 ಸಾವಿರ ಕೋಟಿ ರೂಪಾಯಿ ರಾಸಾಯನಿಕ ಆಮದು

ಭಾರತವು 2019-20ನೇ ಸಾಲಿನಲ್ಲಿ 40 ಸಾವಿರ ಕೋಟಿ ರೂಪಾಯಿ ಮೌಲ್ಯದ ಫಾರ್ಮಾ ರಾಸಾಯನಿಕಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಈ ಪೈಕಿ ಎಪಿಐ ಪಾಲು ಶೇಕಡಾ 63ರಷ್ಟಿದೆ. ಹಾಗೆ 2019-20ರಲ್ಲಿ 49,500 ಕೋಟಿ ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಇದು ದೇಶೀಯ ಅಗತ್ಯಗಳ ಶೇ.86ರಷ್ಟಾಗಿದ್ದು, ಪ್ರಸ್ತುತ ದೇಶದ ಫಾರ್ಮಾ ಉದ್ಯಮವು 40 ಶತಕೋಟಿ ಡಾಲರ್ ಮೌಲ್ಯವಾಗಿದೆ. ಇದನ್ನು 2024ರ ವೇಳೆಗೆ 100 ಶತಕೋಟಿ ಡಾಲರ್‌ (ಸುಮಾರು 7.5 ಲಕ್ಷ ಕೋಟಿ ರೂಪಾಯಿ) ಉದ್ಯಮವಾಗಿಸುವ ಗುರಿ ಹೊಂದಿದ್ದೇವೆ. ಆ ಮೂಲಕ 2025 ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಿ ರೂಪಿಸುವ ಪ್ರಧಾನಿ ಮೋದಿಯವರ ಆಕಾಂಕ್ಷೆಗೆ ಗುರುತರ ಕೊಡುಗೆ ನೀಡುವುದು ನಮ್ಮ ಉದ್ದೇಶ ಎಂದು ಸಚಿವ ಸದಾನಂದ ಗೌಡ ಹೇಳಿದ್ದಾರೆ.

English summary
Central Minister D V Sadananda Gowda Released Pharma Park Guidelines. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X