ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸಚಿವರಿಗೆ ಕೊಕ್ ಕೊಡಲು ಕಾರಣವೇ ಈ ವಿಡಿಯೋ!

|
Google Oneindia Kannada News

Recommended Video

ಸ್ಟಾರ್ ಕ್ಯಾಂಪೇನರ್ ಪಟ್ಟಿಯಿಂದ ಅನುರಾಗ್ ಠಾಕೂರ್ ಔಟ್ | ANURAG | DELHI | ELECTION |

ನವದೆಹಲಿ, ಜನವರಿ.29: ದೆಹಲಿ ವಿಧಾನಸಭಾ ಚುನಾವಣೆಯ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಇಬ್ಬರು ನಾಯಕರನ್ನು ಕೈ ಬಿಡಲಾಗಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಹಾಗೂ ಬಿಜೆಪಿ ಮುಖಂಡ ಪರ್ವೇಶ್ ವರ್ಮಾಗೆ ಹೈಕಮಾಂಡ್ ಕೊಕ್ ನೀಡಿದೆ.

ಕಳೆದ ಜನವರಿ.27ರಂದು ದೆಹಲಿಯಲ್ಲಿ ಬಿಜೆಪಿ ನಡೆಸಿದ ರೋಡ್ ಶೋನಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಮಾತನಾಡುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದಿದ್ದರು.

ದೆಹಲಿಯಲ್ಲಿ 'ಡರ್ಟಿ ಪೊಲಿಟಿಕ್ಸ್' ನಡೆಸುತ್ತಿದೆಯಾ ಬಿಜೆಪಿ?ದೆಹಲಿಯಲ್ಲಿ 'ಡರ್ಟಿ ಪೊಲಿಟಿಕ್ಸ್' ನಡೆಸುತ್ತಿದೆಯಾ ಬಿಜೆಪಿ?

ಸಿಎಎ ಹಾಗೂ ಎನ್ ಆರ್ ಸಿ ವಿರೋಧಿಸುವವರೆಲ್ಲ ದೇಶದ್ರೋಹಿಗಳು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿಕೆ ನೀಡಿದ್ದರು. ಈ ವೇಳೆ ನೆರೆದ ಕಾರ್ಯಕರ್ತರು ದೇಶದ್ರೋಹಿಗಳನ್ನೆಲ್ಲ ಗುಂಡಿಕ್ಕಿ ಕೊಲ್ಲಬೇಕು ಎಂದು ಘೋಷಣೆ ಕೂಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಕೂಡಾ ಆಗಿತ್ತು.

Central Minister Anurag Thakur Drop From BJP Star Campaigners List

ಅನುರಾಗ್ ಠಾಕೂರ್ ಗೆ ಶೋಕಾಸ್ ನೋಟಿಸ್:

ದೆಹಲಿ ವಿಧಾನಸಭಾ ಚುನಾವಣೆ 2020ರ ನೀತಿ ಸಂಹಿತೆ ಜಾರಿಯಲ್ಲಿದ್ದು, ಇಂಥ ಸಂದರ್ಭದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಚುನಾವಣಾ ಆಯೋಗವು, ಜನವರಿ.28ರ ಮಂಗಳವಾರವೇ ಅನುರಾಗ್ ಠಾಕೂರ್ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.

ಹಾಗಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ನೀಡಿದ ಹೇಳಿಕೆ ಹೇಳಿತ್ತು ಎನ್ನುವುದನ್ನೂ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವೂ ಒಮ್ಮೆ ನೋಡಿ.

English summary
Delhi Assembly Elections 2020: Central Minister Anurag Thakur And BJP Leader Parvesh Varma Drop From BJP Star Campaigners List.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X