ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಹಿಂಸಾಚಾರ; ಲೋಕಸಭೆಯಲ್ಲಿ ಅಮಿತ್ ಶಾ ಉತ್ತರ

|
Google Oneindia Kannada News

ನವದೆಹಲಿ, ಮಾರ್ಚ್ 11: ದೆಹಲಿ ಹಿಂಸಾಚಾರದ ಬಗ್ಗೆ ವಿರೋಧ ಪಕ್ಷಗಳ ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಉತ್ತರಿಸಿದ್ದಾರೆ.

Recommended Video

Madhya Pradesh Congress leader Jyotiraditya Scindia quits party | Congress | Operation Kamala

ಪ್ರಚೋದಿತ ದೆಹಲಿ ಗಲಭೆಯನ್ನು ಹತ್ತಿಕ್ಕಲು ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದರಿಂದ ಹಿಂಸಾಚಾರ ವ್ಯಾಪಿಸಲಿಲ್ಲ ಎಂದು ದೆಹಲಿ ಪೊಲೀಸರನ್ನು ಸಮರ್ಥಿಸಿಕೊಂಡಿದ್ದಾರೆ.

ದೆಹಲಿ ಹಿಂಸಾಚಾರ; ಚರಂಡಿಯಲ್ಲಿ 11 ಶವಗಳು ಪತ್ತೆ ದೆಹಲಿ ಹಿಂಸಾಚಾರ; ಚರಂಡಿಯಲ್ಲಿ 11 ಶವಗಳು ಪತ್ತೆ

ಹಿಂಸಾಚಾರದ ಸಂದರ್ಭದಲ್ಲಿ ದೆಹಲಿ ಪೊಲೀಸರು ಶ್ಲಾಘನೀಯ ಕೆಲಸವನ್ನು ಮಾಡಿದ್ದಾರೆ, ಹಿಂಸಾಚಾರವನ್ನು ಹಿಂಸಾಚಾರ ಹರಡದಂತೆ ಕೇವಲ 36 ಗಂಟೆಗಳ ಒಳಗೆ ಕೊನೆಗೊಳಿಸಿದ್ದಾರೆ ಎಂದು ಶಾ ಹೇಳಿದ್ದಾರೆ. ಹಿಂಸಾಚಾರಕ್ಕೆ ಕಾರಣರಾದ ಯಾರನ್ನು ಸರ್ಕಾರ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

ಸಿಖ್ ವಿರೋಧಿ ಗಲಭೆ

ಸಿಖ್ ವಿರೋಧಿ ಗಲಭೆ

1984 ರ ವೇಳೆ ಸಿಖ್ ವಿರೋಧಿ ಗಲಭೆಯ ಸಂದರ್ಭ ಉಲ್ಲೇಖಿಸಿ, ಹಿಂಸಾಚಾರದ ಬಗ್ಗೆ ಬಿಜೆಪಿಯನ್ನು ಪ್ರಶ್ನಿಸುವ ಹಕ್ಕು ಕಾಂಗ್ರೆಸ್‌ಗೆ ಇಲ್ಲ ಎಂದು ಸಚಿವರು ದಾಖಲೆಯನ್ನು ನೀಡಿದ್ದಾರೆ.

54 ಕ್ಕೂ ಹೆಚ್ಚು ಸಾವು

54 ಕ್ಕೂ ಹೆಚ್ಚು ಸಾವು

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಅದನ್ನು ಬೆಂಬಲಿಸುವವರ ನಡುವೆ ಪ್ರತಿಭಟಿಸುವವರ ನಡುವಿನ ಘರ್ಷಣೆಯಾಗಿ, ಈಶಾನ್ಯ ದೆಹಲಿಯ ಜಾಫ್ರಾಬಾದ್‌ನಲ್ಲಿ ಪ್ರಾರಂಭವಾದ ಹಿಂಸಾಚಾರವು 54 ಕ್ಕೂ ಹೆಚ್ಚು ಜೀವಗಳನ್ನು ಕಳೆದುಕೊಂಡಿದೆ ಎಂದು ಹೇಳಿದರು.

ಪೊಲೀಸರ ನಿಷ್ಕ್ರಿಯತೆಯಿಂದ

ಪೊಲೀಸರ ನಿಷ್ಕ್ರಿಯತೆಯಿಂದ

ಸಂಸತ್ತಿನಲ್ಲಿ ದೆಹಲಿ ಹಿಂಸಾಚಾರದ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸುತ್ತಾ ವಿರೋಧ ಪಕ್ಷ ಕಾಂಗ್ರೆಸ್, ದೆಹಲಿ ಪೊಲೀಸರ ನಿಷ್ಕ್ರಿಯತೆಯಿಂದ ದಿನಗಟ್ಟಲೆ ಹಿಂಸಾಚಾರ ಮುಂದುವರೆದಿದೆ ಎಂದು ಆರೋಪಿಸಿತು.

ಫೆಬ್ರವರಿ 24 ರಿಂದ ಫೆಬ್ರವರಿ 29 ರವೆರೆಗೆ

ಫೆಬ್ರವರಿ 24 ರಿಂದ ಫೆಬ್ರವರಿ 29 ರವೆರೆಗೆ

ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯದಿಂದ ಆದೇಶಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ. ಫೆಬ್ರವರಿ 24 ರಿಂದ ಫೆಬ್ರವರಿ 29 ರವೆರೆಗೆ ದೆಹಲಿ ಈಶಾನ್ಯ ಭಾಗದಲ್ಲಿ ಸಿಎಎ ವಿರೋಧಿ ಹೆಸರಿನಲ್ಲಿ ನಡೆದ ಗಲಭೆಯಲ್ಲಿ 54 ಜನ ಮೃತಪಟ್ಟಿದ್ದರು.

English summary
Central Home Minister Answer To Parliment At Session About Delhi Violence. The Delhi Police have done a commendable job during last month's violence He said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X