ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಟೆಲ್, ರೆಸ್ಟೋರೆಂಟ್ ತೆರೆಯಲು ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ

|
Google Oneindia Kannada News

ದೆಹಲಿ, ಜೂನ್ 4: ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ತಿಂಗಳುಗಳ ಕಾಲ ಮುಚ್ಚಲಾಗಿದ್ದ ರೆಸ್ಟೋರೆಂಟ್, ಹೋಟೆಲ್ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಜೂನ್ 8 ರಿಂದ ದೇಶಾದ್ಯಂತ ರೆಸ್ಟೋರೆಂಟ್ ಮತ್ತು ಹೋಟೆಲ್ ಉದ್ಯಮ ಪುನಾರಂಭವಾಗುತ್ತಿದೆ.

ಅದಕ್ಕಾಗಿ ಗೃಹ ಸಚಿವಾಲಯ ಮಾರ್ಗಸೂಚಿ ಪ್ರಕಟಿಸಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಪ್ರಮುಖ ಕರ್ತವ್ಯ ಎಂದು ತಿಳಿಸಿದೆ. ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳಿಗೆ ಕೊರೊನಾ ರೋಗಲಕ್ಷಣ ಹೊಂದಿಲ್ಲದ ಸಿಬ್ಬಂದಿ ಮತ್ತು ಗ್ರಾಹಕರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಸೂಚಿಸಿದೆ.

ಭಾರತದಲ್ಲಿ ದೇವಸ್ಥಾನ, ಮಂದಿರ, ಚರ್ಚ್ ಪ್ರವೇಶಕ್ಕೆ ಹೊಸ ರೂಲ್ಸ್! ಭಾರತದಲ್ಲಿ ದೇವಸ್ಥಾನ, ಮಂದಿರ, ಚರ್ಚ್ ಪ್ರವೇಶಕ್ಕೆ ಹೊಸ ರೂಲ್ಸ್!

ಆರೋಗ್ಯ ದೃಷ್ಟಿಯಿಂದ ತೊಂದರೆಯಲ್ಲಿರುವ ಸಿಬ್ಬಂದಿ, ಹಿರಿಯ ಸಿಬ್ಬಿಂದಿ, ಗರ್ಭಿಣಿ ಮಹಿಳೆಯರ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸಚಿವಾಲಯ ತಿಳಿಸಿದೆ. ಮುಂದೆ ಓದಿ...

ಪ್ರತ್ಯೇಕ ಪ್ರವೇಶ, ಪ್ರತ್ಯೇಕ ನಿರ್ಗಮನ

* ಹೋಟೆಲ್ ಹಾಗೂ ರೆಸ್ಟೋರೆಂಟ್ ರಿಸಪ್ಷನ್‌ನಲ್ಲಿ ಮಾಸ್ಕ್, ಗ್ಲೌಸ್ ಕಡ್ಡಾಯವಾಗಿ ಧರಿಸಬೇಕು
* ಗ್ರಾಹಕರೊಂದಿಗೆ ನೇರ ಸಂವಹನ ಮಾಡಬಾರದು

* ವಾಹನ ನಿಲುಗಡೆ ಸ್ಥಳಗಳಲ್ಲಿ ಮತ್ತು ಆವರಣದ ಹೊರಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು.

* ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಬರುವವರಿಗೆ ಪ್ರತ್ಯೇಕ ಪ್ರವೇಶ ಮತ್ತು ಪ್ರತ್ಯೇಕ ನಿರ್ಗಮನದ ವ್ಯವಸ್ಥೆ ಮಾಡಿಕೊಳ್ಳಬೇಕು.

* ಆನ್‌ಲೈನ್ ಪಾವತಿ, ಡಿಜಿಟಲ್ ಪಾವತಿಯನ್ನು ಪ್ರೋತ್ಸಾಹಿಸಬೇಕು

ಗ್ರಾಹಕರ ವಿಳಾಸ, ಪ್ರಯಾಣದ ಮಾಹಿತಿ ಪಡೆಯಬೇಕು

ಗ್ರಾಹಕರ ವಿಳಾಸ, ಪ್ರಯಾಣದ ಮಾಹಿತಿ ಪಡೆಯಬೇಕು

* ಹೋಟೆಲ್ ಮತ್ತು ರೆಸ್ಟೋರೆಂಟ್ ಬರುವ ಗ್ರಾಹಕರ ಐಡಿ, ವಿಳಾಸ, ಪ್ರಯಾಣದ ಹಿನ್ನೆಲೆ, ವೈದ್ಯಕೀಯ ಸ್ಥಿತಿ ಬಗ್ಗೆ ಸರಿಯಾದ ದಾಖಲೆ ಅಥವಾ ಮಾಹಿತಿ ಪಡೆದುಕೊಳ್ಳಬೇಕು.

* ಲಗೇಜ್‌ಗಳನ್ನು ಕೋಣೆಗಳಿಗೆ ಕಳುಹಿಸುವ ಮೊದಲು ಸೋಂಕು ರಹಿತಗೊಳಿಸಬೇಕು.

* ಕೊಠಡಿ ಸೇವೆಗಾಗಿ, ಅತಿಥಿಗಳು ಮತ್ತು ಸಿಬ್ಬಂದಿಗಳ ನಡುವಿನ ಸಂವಹನವು ಇಂಟರ್‌ಕಾಮ್ / ಮೊಬೈಲ್ ಫೋನ್ ಮೂಲಕ ಇರಬೇಕು.

* ಸಾಮಾಜಿಕ ಅಂತರ ಕಾಯ್ದುಕೊಂಡು ಕೊಠಡಿ ಸೇವೆ ನೀಡಬೇಕು.

ಮಕ್ಕಳ ಆಟದ ಕೇಂದ್ರ ಬಂದ್

ಮಕ್ಕಳ ಆಟದ ಕೇಂದ್ರ ಬಂದ್

* ಮಕ್ಕಳು ಆಡುವ ಪ್ರದೇಶಗಳು (ಗೇಮಿಂಗ್ ಆರ್ಕೇಡ್‌ಗಳು) ಮುಚ್ಚಲ್ಪಡುತ್ತವೆ.

* ರೆಸ್ಟೋರೆಂಟ್‌ಗಳ ಆಸನ ಸಾಮರ್ಥ್ಯವನ್ನು ಶೇಕಡಾ 50ಕ್ಕೆ ಇಳಿಸಿದೆ.

* ಆಹಾರ ವಿತರಣಾ ಸಿಬ್ಬಂದಿ ಪ್ಯಾಕೆಟ್‌ಗಳನ್ನು ಗ್ರಾಹಕರ ಬಾಗಿಲಲ್ಲಿ ಇಡಬೇಕು. ಆಹಾರ ಪ್ಯಾಕೆಟ್ ಅನ್ನು ನೇರವಾಗಿ ಗ್ರಾಹಕರಿಗೆ ಹಸ್ತಾಂತರಿಸಬಾರದು.

* ಹೋಮ್ ಡಿಲವರಿ ಮಾಡುವ ಸಿಬ್ಬಂದಿಯ ಉಷ್ಣಾಂಶ ಪರೀಕ್ಷಿಸಬೇಕಾಗುವುದು ರೆಸ್ಟೋರೆಂಟ್ ಅಧಿಕಾರಿಗಳು ಕರ್ತವ್ಯ ಎಂದು ಸಚಿವಾಲಯ ಹೇಳಿದೆ.

ಹವಾನಿಯಂತ್ರಣ 24-30 ಡಿಗ್ರಿ

ಹವಾನಿಯಂತ್ರಣ 24-30 ಡಿಗ್ರಿ

* ಕ್ಯೂ ವ್ಯವಸ್ಥೆ ನಿರ್ವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆವರಣದಲ್ಲಿ ನಿರ್ದಿಷ್ಟ ಗುರುತುಗಳನ್ನು ಹಾಕಬೇಕು.

* ರೆಸ್ಟೋರೆಂಟ್ ಒಳಗೆ ಪ್ರವೇಶ ಸಂದರ್ಭದಲ್ಲಿ ಕನಿಷ್ಠ 6 ಅಡಿಗಳಷ್ಟು ದೈಹಿಕ ಅಂತರ ಕಾಪಾಡಿಕೊಳ್ಳುವುದು.

* ಎಲ್ಲಾ ಹವಾನಿಯಂತ್ರಣ ಸಾಧನಗಳ ತಾಪಮಾನ ಸೆಟ್ಟಿಂಗ್ 24-30 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿರಬೇಕು.

English summary
Union Ministry of Health and Family Welfare has issued Standard Operating Procedure to contain the spread of COVID19 at restaurants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X