ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಿಂದ ಖಾಸಗೀಕರಣದ ಹೆಸರಿನಲ್ಲಿ ದೇಶದ ಆಸ್ತಿಗಳ ಮಾರಾಟ

|
Google Oneindia Kannada News

ನವದೆಹಲಿ, ಆಗಸ್ಟ್ 24: ಭಾರತದಲ್ಲಿ ಕಳೆದ 70 ವರ್ಷಗಳಲ್ಲಿ ನಿರ್ಮಿಸಿದ ಎಲ್ಲ ಆಸ್ತಿಗಳನ್ನು ಮತ್ತು ಪ್ರಮುಖ ವಲಯಗಳನ್ನು ಹಣ ಸಂಪಾದನೆಗೆ ಬಳಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಕೇಂದ್ರದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಜೊತೆ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಭಾರತದಲ್ಲಿ 70 ವರ್ಷಗಳಿಂದ ಏನೂ ಆಗಿಲ್ಲ ಎಂದು ಬಿಜೆಪಿ ಹೇಳಿಕೊಳ್ಳುತ್ತದೆ. ಆದರೆ ಈಗ ಇಷ್ಟು ವರ್ಷಗಳಲ್ಲಿ ಸೃಷ್ಟಿಸಿದ ಎಲ್ಲಾ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಖಾಸಗೀಕರಣ ಯೋಜನೆಯು ಏಕಸ್ವಾಮ್ಯವನ್ನು ಸೃಷ್ಟಿಸುವ ಮತ್ತು ಉದ್ಯೋಗ ಪ್ರಮಾಣವನ್ನು ತಗ್ಗಿಸುವ ಗುರಿಯನ್ನು ಹೊಂದಿದೆ ಎಂದು ದೂಷಿಸಿದ್ದಾರೆ.

ಸ್ವತ್ತು ನಗದೀಕರಣ: 6 ಲಕ್ಷ ಕೋಟಿ ರು ಅಂದಾಜು ಹಾಕಿದ ಎನ್‌ಎಂಪಿ ಸ್ವತ್ತು ನಗದೀಕರಣ: 6 ಲಕ್ಷ ಕೋಟಿ ರು ಅಂದಾಜು ಹಾಕಿದ ಎನ್‌ಎಂಪಿ

ಸೋಮವಾರವಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವಾಕಾಂಕ್ಷೆಯ ರೂ. 6 ಲಕ್ಷ ಕೋಟಿ ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ (NMP) ಅನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ರೈಲ್ವೆ ನಿಲ್ದಾಣಗಳು, ಪ್ರಯಾಣಿಕರ ರೈಲುಗಳು, ವಿಮಾನ ನಿಲ್ದಾಣಗಳು, ರಸ್ತೆಗಳು ಮತ್ತು ಕ್ರೀಡಾಂಗಣಗಳವರೆಗೆ ಮೂಲಸೌಕರ್ಯ ವಲಯಗಳಲ್ಲಿ ಖಾಸಗಿ ಕಂಪನಿಗಳನ್ನು ಒಳಗೊಂಡಿರುತ್ತದೆ. ಚೆನ್ನೈ, ಭೋಪಾಲ್, ವಾರಣಾಸಿ ಮತ್ತು ವಡೋದರಾ ಸೇರಿದಂತೆ 25 ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ವಿಮಾನ ನಿಲ್ದಾಣಗಳು ಹಾಗೂ 40 ರೈಲ್ವೆ ನಿಲ್ದಾಣಗಳು, 15 ರೈಲ್ವೆಗಳು, ಕ್ರೀಡಾಂಗಣಗಳು ಮತ್ತು ಗುರುತಿಸಲಾಗದ ಸಂಖ್ಯೆಯ ರೈಲ್ವೆ ಕಾಲೋನಿಗಳಲ್ಲಿ ಖಾಸಗಿ ಹೂಡಿಕೆ ಪಡೆಯಲು ಗುರುತಿಸಲಾಗಿದೆ.

Central Govt is Selling Assets Created in Last 70 Years; Congress Leader Rahul Gandhi

ರಾಷ್ಟ್ರೀಯ ಮಾನಿಟೈಸೇಷನ್ ಪೈಪ್ ಲೈನ್ ಎಂದರೇನು?:

ಕೇಂದ್ರ ಬಜೆಟ್ 2021-22 ಸಾರ್ವಜನಿಕ ಮೂಲಸೌಕರ್ಯ ಸ್ವತ್ತುಗಳನ್ನು ನಿರ್ವಹಿಸುವ ನಗದೀಕರಣವನ್ನು ಸುಸ್ಥಿರ ಮೂಲಸೌಕರ್ಯ ಹಣಕಾಸು ಪ್ರಮುಖ ಸಾಧನವೆಂದು ಗುರುತಿಸಿದೆ. ಈ ನಿಟ್ಟಿನಲ್ಲಿ, ಬಜೆಟ್ ಸಂಭಾವ್ಯ ಬ್ರೌನ್ ಫೀಲ್ಡ್ ಮೂಲಸೌಕರ್ಯ ಸ್ವತ್ತುಗಳ 'ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ (ಎನ್.ಎಂ.ಪಿ) ' ತಯಾರಿಸಲು ಅವಕಾಶ ನೀಡಿತು. ನೀತಿ ಆಯೋಗವು ಮೂಲಸೌಕರ್ಯ ಸಂಬಂಧಿತ ಸಚಿವಾಲಯಗಳೊಂದಿಗೆ ಸಮಾಲೋಚಿಸಿ ಎನ್.ಎಂ.ಪಿ.ಕುರಿತ ವರದಿಯನ್ನು ಸಿದ್ಧಪಡಿಸಿದೆ.

ಖಾಸಗಿ ವಲಯಕ್ಕೆ ಸಂಭಾವ್ಯ ಸ್ವತ್ತುಗಳ ಮೇಲಿನ ನೋಟದೊಂದೆ, ಸಾರ್ವಜನಿಕ ಆಸ್ತಿ ಮಾಲೀಕರಿಗೆ ಕಾರ್ಯಕ್ರಮದ ಮಧ್ಯಮಾವಧಿ ಮಾರ್ಗಸೂಚಿಯನ್ನು ಒದಗಿಸುವ ಗುರಿಯನ್ನು ಎನ್.ಎಂ.ಪಿ.ಹೊಂದಿದೆ; ಎನ್.ಎಂ.ಪಿ.ಕುರಿತ ವರದಿಯನ್ನು ಎರಡು ಸಂಪುಟಗಳಾಗಿ ಸಂಯೋಜಿಸಲಾಗಿದೆ. ಸಂಪುಟ 1 ಅನ್ನು ಮಾರ್ಗದರ್ಶನ ಪುಸ್ತಕವಾಗಿ ರೂಪಿಸಲಾಗಿದೆ, ಇದು ಆಸ್ತಿ ನಗದೀಕರಣದ ಪರಿಕಲ್ಪನೆಯ ವಿಧಾನಗಳು ಮತ್ತು ಸಂಭಾವ್ಯ ಮಾದರಿಗಳನ್ನು ವಿವರಿಸುತ್ತದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಪ್ರಮುಖ ಮೂಲಸೌಕರ್ಯ ಸ್ವತ್ತುಗಳ ಪೈಪ್ ಲೈನ್ ಸೇರಿದಂತೆ ನಗದೀಕರಣದ ನಿಜವಾದ ಮಾರ್ಗಸೂಚಿಯೇ ಸಂಪುಟ 2 ಆಗಿದೆ.

English summary
Central Govt is Selling Assets Created in Last 70 Years; Congress Leader Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X