• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇಶದಲ್ಲಿ 130 ಜಿಲ್ಲೆ ರೆಡ್ ಜೋನ್: ದೆಹಲಿ, ಮುಂಬೈ, ಬೆಂಗಳೂರು ಡೇಂಜರ್

|

ದೆಹಲಿ, ಮೇ 1: ಎರಡನೇ ಹಂತದ ಲಾಕ್‌ಡೌನ್‌ ಮುಗಿಯುತ್ತಿದ್ದು, ಮೇ 3ರ ಬಳಿಕ ಲಾಕ್‌ಡೌನ್‌ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ. ಈ ಹಿನ್ನಲೆಯಲ್ಲಿ ದೇಶವನ್ನು ಜಿಲ್ಲಾವಾರು ರೆಡ್ ಜೋನ್, ಆರೆಂಜ್ ಜೋನ್ ಮತ್ತು ಗ್ರೀನ್ ಜೋನ್‌ಗಳಾಗಿ ವಿಂಗಡಿಸಿ ಲಾಕ್‌ಡೌನ್‌ ಸಡಿಲಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ.

   ಲಾಕ್ ಡೌನ್ ಸಡಿಲ ಪಡಿಸಲು ಸಿದ್ದರಾಮಯ್ಯ ಕೊಟ್ಟ ಮಾಸ್ಟರ್ ಪ್ಲಾನ್ ಇದು | Siddaramaiah | Oneindia Kannada

   ಈ ಪಟ್ಟಿಯಲ್ಲಿ ದೇಶದ ಮೆಟ್ರೊ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು ರೆಡ್‌ ಜೋನ್‌ನಲ್ಲಿದೆ. ಇದರ ಜೊತೆಗೆ ಹೈದರಾಬಾದ್, ಅಹಮದಬಾದ್, ಚೆನ್ನೈ ಕೂಡ ಡೇಂಜರ್ ಜೋನ್‌ನಲ್ಲಿದೆ.

   ಕೇಂದ್ರ ಸರ್ಕಾರವು ಕೊರೊನಾ ವೈರಸ್ ವಲಯಗಳನ್ನು ವಿಂಗಡಿಸಿದ್ದು ಹೇಗೆ?

   130 ಜಿಲ್ಲೆಗಳನ್ನು ರೆಡ್ ಜೋನ್ ಎಂದು ಪ್ರಕಟಿಸಿರುವ ಕೇಂದ್ರ ಸರ್ಕಾರ, ಮೇ 3ರ ಬಳಿಕ ಈ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಯಥಾವತ್ತು ಮುಂದುವರಿಯಲಿದೆ. ರೆಡ್ ಜೋನ್ ಬಿಟ್ಟು ಉಳಿದ ಜಿಲ್ಲೆಗಳಲ್ಲಿ ವಿನಾಯಿತಿ ನೀಡುವ ಸಾಧ್ಯತೆ ಹೆಚ್ಚಿದೆ. ಮುಂದೆ ಓದಿ....

   130 ಜಿಲ್ಲೆಗಳು ರೆಡ್‌ಜೋನ್

   130 ಜಿಲ್ಲೆಗಳು ರೆಡ್‌ಜೋನ್

   ಕೇಂದ್ರ ಆರೋಗ್ಯ ಇಲಾಖೆ ಪ್ರಕಟ ಮಾಡಿರುವ ಪಟ್ಟಿಯಲ್ಲಿ ದೇಶದ ಒಟ್ಟು 733 ಜಿಲ್ಲೆಗಳ ಪೈಕಿ 130 ಜಿಲ್ಲೆಗಳು ರೆಡ್‌ ಜೋನ್ ಎಂದು ಘೋಷಿಸಲಾಗಿದೆ. 284 ಜಿಲ್ಲೆಗಳನ್ನು ಆರೆಂಜ್‌ ಜೋನ್ ಎಂದು ಆದೇಶಿಸಿದ್ದು, 319 ಜಿಲ್ಲೆಗಳನ್ನು ಗ್ರೀನ್ ಜೋನ್ ಎಂದು ನಿರ್ಧರಿಸಲಾಗಿದೆ.

   ಅಪಾಯದಲ್ಲಿ ಮಹಾನಗರಗಳು

   ಅಪಾಯದಲ್ಲಿ ಮಹಾನಗರಗಳು

   ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಅಹಮದಬಾದ್, ಚೆನ್ನೈ ಸೇರಿದಂತೆ ಇನ್ನಿತರ ಮಹಾನಗರಗಳು ಡೇಂಜರ್ ಜೋನ್‌ನಲ್ಲಿದೆ. ಮಹಾರಾಷ್ಟ್ರದಲ್ಲಿ 14 ಜಿಲ್ಲೆಗಳು, ದೆಹಲಿಯ 11 ಜಿಲ್ಲೆಗಳು, ತಮಿಳುನಾಡಿನ 12, ಉತ್ತರ ಪ್ರದೇಶದ 19, ಪಶ್ಚಿಮ ಬಂಗಾಳದ 10, ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ತಲಾ 9, ರಾಜಸ್ಥಾನದಲ್ಲಿ 8 ಜಿಲ್ಲೆಗಳು ರೆಡ್‌ನಲ್ಲಿದೆ.

   ಏಕಾಂಗಿಯಾಗಿ 100 ಕಿ.ಮೀ ಸೈಕಲ್‌ನಲ್ಲಿ ಹೋಗಿ ಮದುವೆಯಾದ ಯುವಕ

   ಆರೆಂಜ್ ಜೋನ್ ಜಿಲ್ಲೆಗಳು

   ಆರೆಂಜ್ ಜೋನ್ ಜಿಲ್ಲೆಗಳು

   ಬಿಹಾರದಲ್ಲಿ 20 ಜಿಲ್ಲೆಗಳು, ಉತ್ತರ ಪ್ರದೇಶದಲ್ಲಿ 36 ಜಿಲ್ಲೆಗಳು, ತಮಿಳುನಾಡಿನಲ್ಲಿ 24 ಜಿಲ್ಲೆಗಳು, ರಾಜಸ್ಥಾನದಲ್ಲಿ 19 ಜಿಲ್ಲೆಗಳು, ಪಂಜಾಬ್‌ನಲ್ಲಿ 15 ಜಿಲ್ಲೆಗಳು, ಮಧ್ಯ ಪ್ರದೇಶದಲ್ಲಿ 19 ಜಿಲ್ಲೆಗಳು ಹಾಗೂ ಮಹಾರಾಷ್ಟ್ರದಲ್ಲಿ 16 ಜಿಲ್ಲೆಗಳು ಆರೆಂಜ್‌ ಜೋನ್‌ನಲ್ಲಿದೆ.

   ಗ್ರೀನ್ ಜೋನ್‌ ಜಿಲ್ಲೆಗಳು

   ಗ್ರೀನ್ ಜೋನ್‌ ಜಿಲ್ಲೆಗಳು

   ಚತ್ತೀಸ್‌ಘಡದ 25 ಜಿಲ್ಲೆಗಳು, ಅರುಣಾಚಲ ಪ್ರದೇಶದ 25 ಜಿಲ್ಲೆಗಳು, ಮಧ್ಯ ಪ್ರದೇಶದ 24 ಜಿಲ್ಲೆಗಳು, ಒಡಿಶಾದ 21 ಜಿಲ್ಲೆಗಳು, ಉತ್ತರ ಪ್ರದೇಶದ 20 ಜಿಲ್ಲೆಗಳು, ಉತ್ತರಾಖಂಡದ 10 ಜಿಲ್ಲೆಗಳು ಗ್ರೀನ್‌ ಜೋನ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಅಸ್ಸಾಂನಲ್ಲಿ 30 ಜಿಲ್ಲೆಗಳು ಗ್ರೀನ್‌ ಜೋನ್‌ನಲ್ಲಿರುವುದು ವಿಶೇಷ.

   ರಾಜ್ಯದಲ್ಲಿ ಮೂರು ರೆಡ್ ಜೋನ್ ಜಿಲ್ಲೆ

   ರಾಜ್ಯದಲ್ಲಿ ಮೂರು ರೆಡ್ ಜೋನ್ ಜಿಲ್ಲೆ

   ಕೇಂದ್ರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕರ್ನಾಟಕಕ್ಕೆ ಬಿಗ್ ರಿಲೀಫ್ ನೀಡಿದೆ. ಬೆಂಗಳೂರು, ಮೈಸೂರು ಹಾಗು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ರೆಡ್‌ ಜೋನ್ ಎಂದು ಘೋಷಿಸಿದ್ದು, ಬೆಳಗಾವಿ, ವಿಜಯಪುರ, ಕಲಬುರ್ಗಿ, ಬಾಗಲಕೋಟೆ, ಮಂಡ್ಯ, ಬಳ್ಳಾರಿ, ಧಾರವಾಡ, ದಕ್ಷಿಣ ಕನ್ನಡ, ಬೀದರ್, ಚಿಕ್ಕಬಳ್ಳಾಪುರ, ಗದಗ, ಉತ್ತರ ಕನ್ನಡ, ತುಮಕೂರು ಸೇರಿ 13 ಜಿಲ್ಲೆಗಳನ್ನು ಆರೆಂಜ್ ಜೋನ್ ಎಂದು ಹೇಳಿದೆ. ಇನ್ನುಳಿದ 14 ಜಿಲ್ಲೆಗಳನ್ನು ಗ್ರೀನ್ ಜೋನ್ ಎಂದು ಆದೇಶಿಸಿದೆ.

   English summary
   Central Govt declares the list of districts identified as RED, ORANGE and GREEN zones for the next week.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X