ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಕಚೇರಿಗಳಲ್ಲಿ ಜಿಮೇಲ್, ಯಾಹೂಗೆ ನಿಷೇಧ

|
Google Oneindia Kannada News

Gmail
ನವದೆಹಲಿ, ಅ, 29 : ಸರ್ಕಾರಿ ಮಾಹಿತಿಗಳು ಇಮೇಲ್ ಮೂಲಕ ಸೋರಿಕೆಯಾಗುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮಹತ್ವದ ಯೋಜನೆ ರೂಪಿಸುತ್ತಿದೆ. ಅದರಂತೆ ಸರ್ಕಾರ ಕಚೇರಿಗಳಲ್ಲಿ ಜಿಮೇಲ್, ಯಾಹೂ ಸೇರಿದಂತೆ ವಿವಿಧ ಇಮೇಲ್ ಬಳಕೆಗೆ ಸರ್ಕಾರ ನಿಷೇಧ ಹೇರಲು ಚಿಂತನೆ ನಡೆಸಿದೆ, ವರ್ಷಾಂತ್ಯದಲ್ಲಿ ಈ ಯೋಜನೆ ಜಾರಿಗೆ ಬರಲಿದೆ.

ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸರ್ಕಾರಿ ಕಚೇರಿಗಳಲ್ಲಿ ಈ ಮೇಲ್ ಬಳಕೆ ನಿಷೇಧಿಸುವ ಕುರಿತು ಕರಡು ಪ್ರತಿ ಸಿದ್ಧಗೊಳಿಸಿದೆ. ಅದರಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಜಿ ಮೇಲ್, ಯಾಹೂ ಸೇರಿದಂತೆ ವಿವಿಧ ಇಮೇಲ್ ಬಳಕೆ ನಿಷೇಧಿಸಲಾಗುತ್ತದೆ. ಸರ್ಕಾರಿ ಇಲಾಖೆಗಳು ರಾಷ್ಟ್ರೀಯ ಸೂಚನಾ ಕೇಂದ್ರದ (ಎನ್ ಐಸಿ) ಮೂಲಕ ತಮ್ಮ ಇ ಮೇಲ್ ಕಳಿಸಬೇಕಾಗಿದೆ.

ಈ ಪ್ರಸ್ತಾವನೆ ಸದ್ಯ ಪ್ರಾಯೋಗಿಕ ಹಂತದಲ್ಲಿದ್ದು, ವರ್ಷಾಂತ್ಯದಲ್ಲಿ ಜಾರಿಗೆ ಬರಬಹುದು ಎಂದು ಅಂದಾಜಿಸಲಾಗಿದೆ. ಈ ನೀತಿ ಜಾರಿಗೆ ಬಂದರೆ ಕಡ್ಡಾಯವಾಗಿ ಸರ್ಕಾರಿ ನೌಕರರು ಎನ್ ಐಸಿ ಮೂಲಕವೇ ಇಮೇಲ್ ವ್ಯವಹಾರ ನಡೆಸಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕರದ ಸುಮಾರು 5-6 ಲಕ್ಷ ಜನರು ಈ ಯೋಜನೆ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಮಾಹಿತಿ ಸಂಗ್ರಹಿಸಲಾಗಿದೆ.

ಕೇಂದ್ರ ಸರ್ಕಾರ ಎನ್ ಐಸಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು 4 ಅಥವ 5 ಕೋಟಿ ಅನುದಾನ ಒದಗಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, ನೀತಿ ಜಾರಿಗೆ ಬಂದ ನಂತರ ಸರ್ಕಾರಿ ಮಾಹಿತಿಗಳನ್ನು ಸಂಗ್ರಹಿಸಲು, ಇ ಮೇಲ್ ಸೇವೆ ಒದಗಿಸಲು ಉಪಕರಣಗಳ ಖರೀದಿಗಾಗಿ ಸುಮಾರು 50 ಕೋಟಿ ಅನುದಾನಬೇಕಾಗಬಹುದು ಎಂದು ಪ್ರಸ್ತಾವನೆ ರಚಿಸಲಾಗಿದೆ.

ಜಿಮೇಲ್, ಯಾಹೂ, ಹಾಟ್ ಮೇಲ್ ಮುಂತಾದವುಗಳ ಮೂಲಕ ಸರ್ಕಾರಿ ಮಾಹಿತಿಗಳನ್ನು ಇಮೇಲ್ ಕಳಿಸಲಾಗುತ್ತಿದೆ. ವಿವಿಧ ಇಲಾಖೆಗಳು ಇದನ್ನು ಬಳಸುತ್ತಿವೆ. ಆದರೆ, ಇದು ಹ್ಯಾಕರ್ ಗಳ ಕೈ ಸೇರುತ್ತಿರುವುದರಿಂದ ಸರ್ಕಾರ ಎನ್ ಐಸಿ ಮೂಲಕ ಸರ್ಕಾರಿ ಮಾಹಿತಿಗಳನ್ನು ಇಮೇಲ್ ಕಳುಹಿಸುವುದನ್ನು ಕಡ್ಡಾಯಗೊಳಿಸಲು ಚಿಂತನೆ ಯೋಜನೆ ರೂಪಿಸಿದೆ.

English summary
Wary of cyber snooping, the government could ban e-mail services such as Gmail and Yahoo for official communications by December this year in a move to safeguard its critical and sensitive data. The government is expected to route all its official communication through the official website NIC's email service. The Department of Electronics and Information Technology (DEITY) is drafting a policy on e-mail usage for government offices and departments and the policy is almost ready. The policy is expected to cover about 5-6 lakh Central and State government employees for using the email service provided by National Informatics Center (NIC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X