ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ದಾಖಲೆಗಳನ್ನು ಕೇಂದ್ರ ಸರ್ಕಾರ ಕದ್ದಿದೆ: ರಾಹುಲ್ ಗಾಂಧಿ

|
Google Oneindia Kannada News

Recommended Video

ರಫೇಲ್ ದಾಖಲೆಗಳನ್ನು ಕೇಂದ್ರ ಸರ್ಕಾರ ಕದ್ದಿದೆ..! | Oneindia Kannada

ನವದೆಹಲಿ, ಮಾರ್ಚ್‌ 06: ರಫೇಲ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಫ್‌ಐಆರ್ ದಾಖಲಾಗಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ.

ರಫೇಲ್ ಹಗರಣದ ಬಗ್ಗೆ ಸಾಕಾಗುವಷ್ಟು ಸಾಕ್ಷ್ಯ ಇದೀಗ ದೊರೆತಿದ್ದು ಮೋದಿ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯ ಮಾಡಿದ್ದಾರೆ. ಈ ಕುರಿತು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ರಫೇಲ್ ದಾಖಲೆಗಳು ಕಳುವಾಗಿವೆ: ಸುಪ್ರೀಂಗೆ ಕೇಂದ್ರದ ಹೇಳಿಕೆರಫೇಲ್ ದಾಖಲೆಗಳು ಕಳುವಾಗಿವೆ: ಸುಪ್ರೀಂಗೆ ಕೇಂದ್ರದ ಹೇಳಿಕೆ

ರಫೇಲ್‌ಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಕಾಣೆ ಆಗಿವೆ ಎಂದು ಕೇಂದ್ರವು ಇಂದು ಸುಪ್ರಿಂಗೆ ಹೇಳಿದೆ ಇದನ್ನೇ ಮುಂದು ಮಾಡಿರುವ ರಾಹುಲ್ ಅವರು ಮೋದಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

central government stolen rafale deal documents: Rahul Gandhi

ರಫೇಲ್‌ಗೆ ಸಂಬಂಧಿಸಿದ ದಾಖಲೆಗಳನ್ನು ಸರ್ಕಾರ ಕದ್ದಿದೆ ಎಂದು ಹೇಳಿರುವ ರಾಹುಲ್ ಅವರು, ಇದು ದಾಖಲೆಗಳ ನಾಶದ ಯತ್ನ ಮತ್ತು ಕಳ್ಳತನದಿಂದ ತಪ್ಪಿಸಿಕೊಳ್ಳುವ ಯತ್ನ ಎಂದು ಜರಿದಿದ್ದಾರೆ.

ರಫೇಲ್ ಖರೀದಿ: ಮಾಧ್ಯಮಗಳು ಬೆದರಿಕೆಗೆ ಜಗ್ಗಬಾರದು ಎಂದ ಎನ್ ರಾಮ್ ರಫೇಲ್ ಖರೀದಿ: ಮಾಧ್ಯಮಗಳು ಬೆದರಿಕೆಗೆ ಜಗ್ಗಬಾರದು ಎಂದ ಎನ್ ರಾಮ್

ರಫೇಲ್ ಹಗರಣ ಪ್ರಾರಂಭವಾಗಿದ್ದು ಮೋದಿಯಿಂದ ಮುಗಿಯುವುದು ಸಹ ಅವರ ಬಳಿಯೇ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಯುಪಿಎ ಡೀಲ್ ಪ್ರಕಾರ ನಡೆದಿದ್ರೆ ಕಡಿಮೆ ಬೆಲೆಗೆ ರಫೇಲ್: ರಮ್ಯಾ ಟ್ವೀಟ್ಯುಪಿಎ ಡೀಲ್ ಪ್ರಕಾರ ನಡೆದಿದ್ರೆ ಕಡಿಮೆ ಬೆಲೆಗೆ ರಫೇಲ್: ರಮ್ಯಾ ಟ್ವೀಟ್

ರಕ್ಷಣಾ ಸಚಿವಾಲಯದಿಂದ ಕೆಲವು ಮಹತ್ವದ ದಾಖಲೆಗಳು ಕಳುವಾಗಿದೆ. ಇದು ಬಹಳ ಸೂಕ್ಷ್ಮ ವಿಚಾರವಾಗಿದ್ದು, ಈ ಕುರಿತು ತನಿಖೆ ಮಾಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಸುಪ್ರಿಂಗೆ ಇಂದು ಹೇಳಿದ್ದಾರೆ.

English summary
There is now enough evidence to prosecute the PM in the Rafale scam says AICC president Rahul Gandhi. He also said central government stolen rafale documents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X