ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವ್ಯಾಕ್ಸಿನ್ ಲಸಿಕೆ ರಫ್ತು ಮಾಡಲು ಅನುಮತಿ ನೀಡಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ನವೆಂಬರ್ 26: ಭಾರತದಲ್ಲಿ ಸದ್ಯ ಕೊರೊನಾ ಲಸಿಕೆ ಕೊರತೆ ನೀಗಿದೆ. ದೇಶದಲ್ಲಿ ಈಗ ಉತ್ಪಾದನೆಯಾಗಿರುವ 27 ಕೋಟಿ ಡೋಸ್ ಲಸಿಕೆ ಬಳಕೆಯಾಗದೇ ಬಾಕಿ ಉಳಿದಿದ್ದು, ಇದರಿಂದಾಗಿ ಈಗ ಕೇಂದ್ರ ಸರ್ಕಾರವು ಕೊರೊನಾ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡಲು ಸೆರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ್ ಬಯೋಟೆಕ್ ಕಂಪನಿಗಳಿಗೆ ಅನುಮತಿ ನೀಡಿದೆ.

ಭಾರತವು ಈಗ ಕೊರೊನಾ ಲಸಿಕೆಗಳ ಕೊರತೆ ಅನುಭವಿಸುತ್ತಿದ್ದ ಹಂತದಿಂದ ಲಸಿಕೆಯನ್ನು ರಫ್ತು ಮಾಡುವ ದೇಶವಾಗಿದೆ. ಭಾರತದಿಂದ ಮತ್ತೆ ಕೊರೊನಾ ಲಸಿಕೆ ರಫ್ತು ಮಾಡುವುದು ಬಹುತೇಕ ಖಚಿತವಾಗಿದೆ. ಭಾರತದಲ್ಲಿ ಈವರೆಗೂ (ನ.25) 119.38 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ಇನ್ನು ಕೇಂದ್ರ ಸರ್ಕಾರವು ಪೂರೈಸಿರುವ ಕೊರೊನಾ ಲಸಿಕೆಯು ರಾಜ್ಯ ಸರ್ಕಾರಗಳ ಬಳಿ ಬಳಕೆಯಾಗದೇ ಬಾಕಿ ಉಳಿದಿದೆ.

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿ 22.72 ಕೋಟಿ ಡೋಸ್ ಲಸಿಕೆ ಬಳಕೆಯಾಗದೆ ಬಾಕಿ ಉಳಿದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಇನ್ನು ಖಾಸಗಿ ಆಸ್ಪತ್ರೆಗಳ ಬಳಿಯೂ 4ರಿಂದ 5 ಕೋಟಿ ಡೋಸ್ ಲಸಿಕೆ ಬಳಕೆಯಾಗದೆ ಬಾಕಿ ಉಳಿದಿದೆ. ದೇಶದಲ್ಲಿ ಒಟ್ಟಾರೆ 26ರಿಂದ 27 ಕೋಟಿ ಕೊರೊನಾ ಡೋಸ್ ಲಸಿಕೆ ಬಳಕೆಯಾಗದೇ ಬಾಕಿ ಉಳಿದಿದೆ.

Central Government Permitted Export of Covaxin Corona Vaccine

ಈಗ ಕೇಂದ್ರ ಸರ್ಕಾರವು ಕಳೆದ ಏಪ್ರಿಲ್ ತಿಂಗಳಿನಲ್ಲಿ ವಿಧಿಸಿದ್ದ ಕೊರೊನಾ ಲಸಿಕೆಯ ರಫ್ತು ನಿಷೇಧ ನಿಯಮವನ್ನು ಸಡಿಲಿಸಿದೆ. ಕೊರೊನಾ ಲಸಿಕೆ ಉತ್ಪಾದಿಸುವ ಕಂಪನಿಗಳಿಗೆ ಕೊರೊನಾ ಲಸಿಕೆಯನ್ನು ವಿದೇಶಗಳಿಗೆ ಹಾಗೂ ಕೊವ್ಯಾಕ್ಸ್ ಒಕ್ಕೂಟಕ್ಕೆ ರಫ್ತು ಮಾಡಲು ಅನುಮತಿ ನೀಡಿದ್ದು, ಭಾರತ್ ಬಯೋಟೆಕ್ ಈ ವಿಷಯದ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಕೋವಿಡ್-19 ಲಸಿಕೆಗಳ ವಾಣಿಜ್ಯ ರಫ್ತಿಗೆ ಕೇಂದ್ರ ಸರ್ಕಾರವು ಹೈದರಾಬಾದ್ ಮೂಲದ ಲಸಿಕೆ ತಯಾರಿಕಾ ಕಂಪನಿಯಾದ ಭಾರತ್ ಬಯೋಟೆಕ್‌ಗೆ ಅನುಮತಿ ನೀಡಿದೆ. ಕೊವಾಕ್ಸಿನ್ ಲಸಿಕೆಯ ವಾಣಿಜ್ಯ ರಫ್ತು ಪ್ರಾರಂಭಿಸಲು ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ಕೆಲವು ದಿನಗಳ ಹಿಂದೆ ಮತ್ತೊಂದು ಪ್ರಮುಖ ಲಸಿಕೆ ಉತ್ಪಾದಕ ಕಂಪನಿಯಾದ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದ ಲಸಿಕೆ ಉಪಕ್ರಮ COVAXಗೆ ರಫ್ತು ಮಾಡಲು ಅನುಮತಿ ನೀಡಲಾಗಿತ್ತು.

ಸೆರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಕೂಡ ಭಾರತ ಸರ್ಕಾರದಿಂದ ವಾಣಿಜ್ಯ ದ್ವಿಪಕ್ಷೀಯ ರಫ್ತುಗಳನ್ನು ಪ್ರಾರಂಭಿಸಲು ಒಪ್ಪಿಗೆ ಪಡೆದಿರುವುದನ್ನು ಅಧಿಕೃತವಾಗಿ ಹೇಳಿಲ್ಲ. ಭಾರತ್ ಬಯೋಟೆಕ್ ಅಕ್ಟೋಬರ್‌ನಲ್ಲಿ 55 ಮಿಲಿಯನ್ (5.5 ಕೋಟಿ) ಡೋಸ್ ಕೋವಾಕ್ಸಿನ್ ಡೋಸ್​ಗಳನ್ನು ತಯಾರಿಸಿದೆ.

ಡಿಸೆಂಬರ್ ತಿಂಗಳಿನಲ್ಲಿ 8 ಕೋಟಿ ಡೋಸ್ ಲಸಿಕೆಯನ್ನು ಉತ್ಪಾದಿಸುವ ಗುರಿ ಹಾಕಿಕೊಂಡಿದೆ. ಸೆರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಈಗ ಪ್ರತಿ ತಿಂಗಳು 22 ಕೋಟಿ ಡೋಸ್ ಲಸಿಕೆ ಉತ್ಪಾದಿಸುತ್ತಿದೆ. ಕೊವ್ಯಾಕ್ಸ್​ಗೆ 50 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆ ರಫ್ತು ಮಾಡಲು ಅನುಮತಿ ನೀಡಿದೆ.

Central Government Permitted Export of Covaxin Corona Vaccine

ಆಕ್ಟೋಬರ್ ತಿಂಗಳಿನಲ್ಲಿ ಸೆರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ನೇಪಾಳ, ಮಯನ್ಮಾರ್, ಬಾಂಗ್ಲಾದೇಶಗಳಿಗೆ ಲಸಿಕೆ ಮೈತ್ರಿಯ ಭಾಗವಾಗಿ ಲಸಿಕೆಯನ್ನು ರಫ್ತು ಮಾಡಿದೆ. ಈ ಮೂರು ದೇಶಗಳಿಗೆ ಭಾರತ ಸರ್ಕಾರವು ಉಚಿತವಾಗಿ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆಯನ್ನು ಉಚಿತವಾಗಿ ನೀಡಿದೆ.

ಸೆರಮ್ ಕಂಪನಿಯು ಈ ವಾರ ನೋವಾವಾಕ್ಸ್ (ಕೋವಾವ್ಯಾಕ್ಸ್) ಲಸಿಕೆಯನ್ನು ಇಂಡೋನೇಷ್ಯಾಗೆ ರಫ್ತು ಮಾಡಲಿದೆ. ಭಾರತದ ಸ್ವದೇಶಿ ಕೊರೊನಾ ಲಸಿಕೆಯಾದ ಕೊವ್ಯಾಕ್ಸಿನ್ ಲಸಿಕೆಗೆ ನ.3ರಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಬಳಕೆಗೆ ಅನುಮೋದನೆ ಸಿಕ್ಕಿದೆ.

ಆದರೆ, ಇನ್ನೂ ಬಡ ಮತ್ತು ಮಧ್ಯಮ ಆದಾಯ ರಾಷ್ಟ್ರಗಳಿಗೆ ಲಸಿಕೆ ಪೂರೈಸುವ ಕೊವ್ಯಾಕ್ಸ್ ಒಕ್ಕೂಟದ ಪಟ್ಟಿಯಲ್ಲಿ ಕೊವ್ಯಾಕ್ಸಿನ್ ಇಲ್ಲ. ಆದರೆ, ಕೊವ್ಯಾಕ್ಸಿನ್ ಲಸಿಕೆಯೂ ಅಲ್ಪಾ, ಗಾಮಾ, ಜೀಟಾ, ಕಪಾ, ಬೀಟಾ ಮತ್ತು ಡೆಲ್ಟಾ ಪ್ರಭೇದದ ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

English summary
The central government has permitted the serum institute of India and Bharat biotech companies to export the corona vaccine abroad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X