ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿವಾಸಿ ಭಾರತೀಯರಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸಿಹಿಸುದ್ದಿ

|
Google Oneindia Kannada News

Recommended Video

NRIs and the tax they have to pay in India , explained | Nirmala Sithram | Oneindia kannada |

ನವದೆಹಲಿ, ಫೆಬ್ರವರಿ.02: ಭಾರತವನ್ನು ಬಿಟ್ಟು ಹೊರ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರಿಗೆ(NRI) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಿಹಿ ಸುದ್ದಿ ಕೊಟ್ಟಿದ್ದಾರೆ. ಎನ್ಆರ್ಐಗಳು ವಿದೇಶದಲ್ಲಿ ಗಳಿಸುವ ಆದಾಯಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅನಿವಾಸಿ ಭಾರತೀಯರ ವಿದೇಶಿ ಆದಾಯದ ಮೇಲೆ ತೆರಿಗೆ ವಿಧಿಸುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇಲ್ಲ. ಆದರೆ, ಎನ್ಆರ್ಐಗಳು ಭಾರತದಲ್ಲಿ ಹೊಂದಿರುವ ಆಸ್ತಿಗೆ ಕಡ್ಡಾಯವಾಗಿ ತೆರಿಗೆ ಪಾವತಿಸಲೇಬೇಕು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ನಿರಾಸೆ'
ವಿದೇಶದಲ್ಲಿ ಸಂಪಾದಿಸುವ ನಿಮ್ಮ ಹಣದ ಮೇಲೆ ತೆರಿಗೆ ವಿಧಿಸಲಾಗುವುದಿಲ್ಲ. ಭಾರತದಲ್ಲಿ ಹೊಂದಿರುವ ಆಸ್ತಿಯಿಂದ ನೀವು ಆದಾಯ ಗಳಿಸುತ್ತಿದ್ದೀರಾ ಎಂದಾದರೆ, ಆ ಆದಾಯಕ್ಕೆ ಮತ್ತು ಆಸ್ತಿಗೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಉದಾಹರಣೆ ಸಮೇತ ವಿವರಣೆ ನೀಡಿದ ಸಚಿವೆ:
ಫೆಬ್ರವರಿ.01ರಂದು 2020-21ನೇ ಸಾಲಿನ ಕೇಂದ್ರ ಬಜೆಟ್ ನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು. ಈ ವೇಳೆ ಅನಿವಾಸಿ ಭಾರತೀಯರಿಗೆ ತೆರಿಗೆ ವಿಧಿಸಿರುವ ಕ್ರಮದಲ್ಲಿ ಸಾಕಷ್ಟ ಗೊಂದಲಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ಭಾನುವಾರ ಪ್ರತಿಕ್ರಿಯೆ ನೀಡಿದ ನಿರ್ಮಲಾ ಸೀತಾರಾಮನ್, ಉದಾಹರಣೆ ಸಮೇತವಾಗಿ ಸ್ಪಷ್ಟನೆ ನೀಡಿದರು.

Central Government No Intention To Tax For NRIs Global Income

ವಿದೇಶದಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರ ಮೇಲೆ ತೆರಿಗೆ ವಿಧಿಸುವುದಿಲ್ಲ. ಬದಲಿಗೆ ಭಾರತದಲ್ಲಿ ಎನ್ಆರ್ಐಗಳು ಆಸ್ತಿಯನ್ನು ಹೊಂದಿರುತ್ತಾರೆ ಎಂದುಕೊಳ್ಳಿ. ಅದರಿಂದ ಬಾಡಿಗೆಯನ್ನು ಪಡೆಯುತ್ತಾರೆ ಎಂದಾದರೆ, ಅವರಿಗೆ ಇಲ್ಲಿ ಆದಾಯ ಬರುತ್ತದೆ. ಈ ಆದಾಯದ ಮೇಲೆ ಸರ್ಕಾರವು ತೆರಿಗೆ ವಿಧಿಸುತ್ತದೆ. ಇಲ್ಲಿರುವ ಆಸ್ತಿ ಮತ್ತು ಅದರಿಂದ ಪಡೆಯುವ ಆದಾಯಕ್ಕಷ್ಟೇ ಎನ್ಆರ್ಐಗಳು ತೆರಿಗೆಯನ್ನು ಪಾವತಿಸಬೇಕು ಎಂದು ತಿಳಿಸಿದರು.

English summary
Central Government No Intention To Tax For NRI's Global Income. Finance Minister Nirmala Sitharaman Clarification For All Doubts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X