ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ ಇಳಿಕೆ ನಂತರವೂ ತಿಂಡಿ-ತಿನಿಸುಗಳ ದರ ಏರಿಕೆಗೆ ಕೇಂದ್ರ ಗರಂ

|
Google Oneindia Kannada News

ನವದೆಹಲಿ, ನವೆಂಬರ್ 18 : ಜಿಎಸ್ ಟಿ ತೀವ್ರ ಇಳಿಕೆ ನಂತರವೂ ಹೋಟೆಲ್ ಗಳು ಆಹಾರಗಳ ದರ ಏರಿಸಿರುವುದು ಕೇಂದ್ರ ಸರ್ಕಾರಕ್ಕೆ ಅಸಮಾಧಾನ ತಂದಿದ್ದು, ಕಾನೂನು ಕ್ರಮದ ಕುರಿತು ಯೋಚಿಸುತ್ತಿದೆ.

ರೆಸ್ಟೋರೆಂಟ್ ಗಳಲ್ಲಿ ಬೆಲೆ ಇಳಿಕೆ, ಇಡ್ಲಿ, ಕಾಫಿ ಬೆಲೆ ಎಷ್ಟು?ರೆಸ್ಟೋರೆಂಟ್ ಗಳಲ್ಲಿ ಬೆಲೆ ಇಳಿಕೆ, ಇಡ್ಲಿ, ಕಾಫಿ ಬೆಲೆ ಎಷ್ಟು?

. ಆಹಾರ ಪದಾರ್ಥಗಳ ಮೇಲೆ ಶೇ.18ರಷ್ಟಿದ್ದ ಜಿಎಸ್ ಟಿ ದರವನ್ನು ಶೇ.೫ಕ್ಕೆ ಇಳಿಕೆ ನಂತರವೂ ಹೋಟೆಲ್ ಮಾಲೀಕರು ದರ ಏರಿಸಿರುವುದು ಮಾತ್ರವಲ್ಲ, ಶೇ. 7ರಿಂದ ಶೇ. 8ಕ್ಕೆ ಏರಿಕೆ ಮಾಡಿದೆ. ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ, ಹೋಟೆಲ್ ಉದ್ಯಮಕ್ಕೆಉಂಡಾಗಿದ್ದ ಕುಸಿತ ಇದೀಗ ಶೇ.1ರಷ್ಟು ಸುಧಾರಿಸಿದೆ ಎಂದಿದೆ.

Central Government is unhappy with the food price hike after GST cut

ಹಾರ ದರ ಏರಿಸಿರುವ ಅಥವಾ ಕಡಿಮೆ ಮಾಡದಿರುವ ವಿಚಾರ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ..ದೂರುಗಳನ್ನು ಪರಿಗಣಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯೊಸುತ್ತಿದ್ದಾರೆ. ಹೋಟೆಲ್ ಗಳಿಂದ ದಂಡ ವಸೂಲಿ ಮಾಡಬೇಕು. ಮ್ಯಾಕ್ ಡೊನಾಲ್ಡ್ಸ್, ಡೊಮಿನೋಸ್ ಪಿಜ್ಜಾ ಈಗಾಗಲೇ ಮೂಲ ದರವನ್ನು ಏರಿಕೆ ಮಾಡಿದ್ದಾರೆ.

ಮಧ್ಯರಾತ್ರಿಯಿಂದ 1,800 ಸಾಮಗ್ರಿಗಳ ಬೆಲೆಯಲ್ಲಿ ವ್ಯತ್ಯಾಸಮಧ್ಯರಾತ್ರಿಯಿಂದ 1,800 ಸಾಮಗ್ರಿಗಳ ಬೆಲೆಯಲ್ಲಿ ವ್ಯತ್ಯಾಸ

ಆದರೆ ತಿಂಡಿ-ತಿನಿಸುಗಳ ದರವನ್ನು ಹೆಚ್ಚಳ ಮಮಾಡಿರುವ ರೆಸ್ಟೋರೆಂಟ್ ಗಳ ಮಾಲೀಕರ ವರ್ತನೆಯಿಂದ ಅಸಾಮಾಧಾನಗೊಂಡಿರುವ ಕೇಂದ್ರ ಸರ್ಕಾರ ದರ ನಿಗದಿ ಮೇಲೆ ನಿರ್ಬಂಧ ಹೇರಬಹುದಾದ ಕ್ರಮಗಳ ಬಗ್ಗೆ ಚಿಂತಿಸುತ್ತಿದೆ. ಈಗಾಗಲೇ ದರ ಏರಿಕೆ ಮಾಡಿರುವ ಹೋಟೆಲ್ ಗಳನ್ನು ನೋಡಿ ಕೆಎಫ್ ಸಿಯು ಕೂಡ ಮುಂದಿನವಾರದಿಂದ ದರ ಏರಿಕೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ.ಹಣಕಾಸು ಆಯೋಗವು ಟ್ಯಾಕ್ಸ್ ಕ್ರೆಡಿಟ್ ಬೆನಿಫಿಟ್ ನ್ನು ಹಿಂಪಡೆಯಲು ಆಲೋಚಿಸಿದೆ.

ಒಂದು ವೇಳೆ ಜಿಎಸ್ಟಿ ದರ ಶೇ.18ರಷ್ಟು ಹೇರಿದ ಕಾರಣಕ್ಕೆ ಹೋಟೆಲ್ ತಿಂಡಿದರ ಹೆಚ್ಚಳವಾಗಿದ್ದರೆ ಈಗ ಜಿಎಸ್ಟಿ ಇಳಿಕೆ ಬಳಿಕ ಕಡಿತದ ಬಳಿಕವೂ ಕಡಿಮೆಯಾಗಿಲ್ಲವೆಂದರೆ "ಆಂಟಿ ಪ್ರಾಫಿಟಿಂಗ್ ಕೇಸ್'(ಲಾಭಕೋರತನ ಪ್ರಕರಣ) ಎಂದು ಪರಿಗಣಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಕೇಂದ್ರ ಸರ್ಕಾರ ಸ್ವಯಂಪ್ರೇರಿತ ದೂರು ದಾಖಲಿಸಿ ಹೋಟೆಲ್ ಗಳ ಮೇಲೆ ಲಾಭಕೋರತನ ಪ್ರಕರಣದಡಿ ತನಿಖೆ ನಡೆಸಲಿದೆ ಎಂದು ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

English summary
Unhappy with the price hike introduced by restaurants after a steep reduction in the GST
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X