• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2 ದಶಕಗಳಲ್ಲೇ ಮೊದಲ ಬಾರಿಗೆ 'ನೇರ ತೆರಿಗೆ ಸಂಗ್ರಹ' ಇಳಿಕೆ ಸಾಧ್ಯತೆ

|

ನವದೆಹಲಿ, ಜನವರಿ 25: ಕೇಂದ್ರ ಸರ್ಕಾರಕ್ಕೆ ಈ ಬಾರಿ ನೇರ ತೆರಿಗೆ ಶಾಕ್ ನೀಡಲಿದೆ. 2020 ಮಾರ್ಚ್ 31 ಮುಕ್ತಾಯಗೊಳ್ಳಲಿರುವ ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆ (ಕಾರ್ಪೊರೇಟ್ ಮತ್ತು ಆದಾಯ ತೆರಿಗೆ) ಸಂಗ್ರಹದಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆ ಇದೆ.

ದುಪ್ಪಟ್ಟು ತೆರಿಗೆಯಿಂದ ಮೂಲ ಆದಾಯ ವೃದ್ಧಿಗೆ ಬಿಬಿಎಂಪಿ ತಂತ್ರಗಾರಿಕೆ

ಸಹಜವಾಗಿಯೇ ಈ ಬೆಳವಣಿಗೆ ವಿವಿಧ ಯೋಜನೆಗಳ ಜಾರಿಗೆ ತೆರಿಗೆ ಸಂಗ್ರಹವನ್ನೇ ನಂಬಿಕೊಂಡಿರುವ ಕೇಂದ್ರ ಸರ್ಕಾರಕ್ಕೆ ಭಾರಿ ಹೊಡೆತ ನೀಡುವ ಸಾಧ್ಯತೆ ಇದೆ.

ಸರ್ಕಾರದ ಆದಾಯದಲ್ಲಿ ಶೇ.80ರಷ್ಟು ಪಾಲು ನೇರ ತೆರಿಗೆಯದ್ದು

ಸರ್ಕಾರದ ಆದಾಯದಲ್ಲಿ ಶೇ.80ರಷ್ಟು ಪಾಲು ನೇರ ತೆರಿಗೆಯದ್ದು

ಕೇಂದ್ರ ಸರ್ಕಾರದ ವಾರ್ಷಿಕ ಆದಾಯ ನಿರೀಕ್ಷೆಯಲ್ಲಿ ಶೇ.80ರಷ್ಟು ಪಾಲು ನೇರ ತೆರಿಗೆಯದ್ದೇ ಆಗಿರುವ ಕಾರಣ, ಸಹಜವಾಗಿಯೇ ಈ ಬೆಳವಣಿಗೆ ವಿವಿಧ ಯೋಜನೆಗಳ ಜಾರಿಗೆ ತೆರಿಗೆ ಸಂಗ್ರವನ್ನೇ ನಂಬಿಕೊಂಡಿರುವ ಸರ್ಕಾರಕ್ಕೆ ಭಾರಿ ಹಿನ್ನಡೆಯುಂಟಾಗಲಿದೆ.

ತೆರಿಗೆ ಸಂಗ್ರಹ ಎಷ್ಟು ಕುಸಿತ?

ತೆರಿಗೆ ಸಂಗ್ರಹ ಎಷ್ಟು ಕುಸಿತ?

ತೆರಿಗೆ ಇಲಾಖೆಯ 10ಕ್ಕೂ ಹೆಚ್ಚು ಅಧಿಕಾರಿಗಳನ್ನು ಸಂದರ್ಶಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ಸಿದ್ಧಪಡಿಸಿರುವ ಈ ವರದಿಯಲ್ಲಿಈ ಅಂಶಗಳಿವೆ. 2018-19ರ ಹಣಕಾಸು ವರ್ಷದಲ್ಲಿ 11.5 ಲಕ್ಷ ಕೋಟಿ ಸಂಗ್ರಹವಾಗಿದೆ. 2019-20ರಲ್ಲಿ ಕೇಂದ್ರ ಸರ್ಕಾರ 13 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹದ ಗುರಿ ಹೊಂದಿತ್ತು. ಕಳೆದ ವರ್ಷ ಸಂಗ್ರಹವಾದ 11.5 ಲಕ್ಷ ಕೋಟಿಗಿಂತ ಶೇ.10ರಷ್ಟು ಕುಸಿತ ಸಾಧ್ಯತೆ ಇದೆ.

ಪ್ರಸಕ್ತ ವರ್ಷದಲ್ಲಿ 13.5 ಲಕ್ಷ ಕೋಟಿ ಗುರಿ ಹಾಕಿಕೊಂಡಿತ್ತು

ಪ್ರಸಕ್ತ ವರ್ಷದಲ್ಲಿ 13.5 ಲಕ್ಷ ಕೋಟಿ ಗುರಿ ಹಾಕಿಕೊಂಡಿತ್ತು

ವಾಸ್ತವವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ 13.5 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹದ ಗುರಿ ಹೊಂದಿತ್ತು. ಇದು ಹಿಂದಿನ ಹಣಕಾಸು ವರ್ಷದಲ್ಲಿನ ನೇರ ತೆರಿಗೆ ಸಂಗ್ರಹಕ್ಕಿಂತ ಶೇ.17ರಷ್ಟು ಹೆಚ್ಚಾಗಿತ್ತು. ಆದರೆ ಆರ್ಥಿಕ ಹಿಂಜರಿಕೆಯ ಪರಿಣಾಮ ಬೇಡಿಕೆ ಕಡಿಮೆಯಾಗಿರುವುದು ಉದ್ಯಮ ವಲಯದ ಮೇಲೆ ಪರಿಣಾಮ ಬೀರಿದೆ.

11 ವರ್ಷಗಳಲ್ಲೇ ಅತಿ ಕಡಿಮೆ ಪ್ರಗತಿ

11 ವರ್ಷಗಳಲ್ಲೇ ಅತಿ ಕಡಿಮೆ ಪ್ರಗತಿ

ಇದು ಕಡಿಮೆ 11 ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಗತಿ ದರ ಎಂದು ಇತ್ತೀಚೆಗಷ್ಟೇ ಸರ್ಕಾರದ ವರದಿ ಹೇಳಿತ್ತು. ಈ ಎಲ್ಲಾ ಬೆಳವಣಿಗೆ ಸಹಜವಾಗಿಯೇ ಇದು ನೇರ ತೆರಿಗೆ ಸಂಗ್ರಹದ ಮೇಲೂ ಪರಿಣಾಮ ಬೀರಲಿದೆ. 2020ರ ಜ.23ರವರೆಗೆ ಕೇವಲ 7.3 ಲಕ್ಷ ಕೋಟಿ ರೂ.ನಷ್ಟು ಮಾತ್ರವೇ ನೇರ ತೆರಿಗೆ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಗ್ರಹವಾಗಿದ್ದ ತೆರಿಗೆಗಿಂತ ಶೇ.5.5ರಷ್ಟು ಕಡಿಮೆ ಎಂದು ವರದಿ ಹೇಳಿದೆ.

English summary
India's corporate and income tax collection for the current year is likely to fall for the first time in at least two decades, over half a dozen senior tax officials told Reuters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X