ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಶೌರಿ, ಭೂಷಣ್ ಸಿಬಿಐ ಭೇಟಿ!

|
Google Oneindia Kannada News

ನವದೆಹಲಿ, ಅಕ್ಟೋಬರ್ 10: ಇತ್ತೀಚೆಗಷ್ಟೇ ಕೇಂದ್ರ ತನಿಖಾ ದಳ (ಸಿಬಿಐ)ದ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಮತ್ತು ವಕೀಲ ಪ್ರಶಾಂತ್ ಭೂಷಣ್ ಭೇಟಿಯಾಗಿದ್ದು ಕೇಮದ್ರ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ.

ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಕೋರಿ ಈ ಇಬ್ಬರೂ ನಾಯಕರು ಅಲೋಕ್ ವರ್ಮಾ ಅವರನ್ನು ಭೇಟಿಯಾಗಿದ್ದರು ಎನ್ನಲಾಗಿದೆ. ಅಕ್ಟೋಬರ್ 4 ರಂದೇ ಅಲೋಕ್ ಅವರನ್ನು ಶೌರಿ ಮತ್ತು ಭೂಷಣ್ ಭೇಟಿಯಾಗಿದ್ದರು. ಆದರೆ ಈ ಕುರಿತು ಕೇಂದ್ರ ಸರ್ಕಾರ ಈಗ ಪ್ರತಿಕ್ರಿಯಿಸಿದೆ.

ರಫೇಲ್ ಒಪ್ಪಂದ ಪ್ರಕ್ರಿಯೆಯ ವಿವರ ಕೊಡಿ: ಕೇಂದ್ರವನ್ನು ಕೇಳಿದ ಸುಪ್ರೀಂಕೋರ್ಟ್ರಫೇಲ್ ಒಪ್ಪಂದ ಪ್ರಕ್ರಿಯೆಯ ವಿವರ ಕೊಡಿ: ಕೇಂದ್ರವನ್ನು ಕೇಳಿದ ಸುಪ್ರೀಂಕೋರ್ಟ್

ಆದರೆ ಶೌರಿ ಮತ್ತು ಪ್ರಶಾಂತ್ ಭೂಷಣ್ ತಮ್ಮನ್ನು ಭೇಟಿಯಾಗಲು ಅಲೋಕ್ ವರ್ಮಾ ಅನುಮತಿ ನೀಡಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಸಿಬಿಐ ನಿರ್ದೇಶಕರು ತಮ್ಮ ಕಚೇರಿಯಲ್ಲಿಯೇ ರಾಜಕಾರಣಿಗಳನ್ನು ಬೇಟಿ ಮಾಡಿದ್ದು ಸರಿಯೇ ಎಂದು ಸರ್ಕಾರ ಪ್ರಶ್ನಿಸುತ್ತಿದೆ.

ವಿರಳಾತಿವಿರಳ ಪ್ರಕರಣ

ವಿರಳಾತಿವಿರಳ ಪ್ರಕರಣ

ರಾಜಕಾರಣಿಗಳನ್ನು ಭೇಟಿ ಮಾಡಲು ಸಿಬಿಐ ನಿರ್ದೇಶಕರು ಒಪ್ಪಿಗೆ ಸೂಚಿಸಿದ್ದೇ ಸರಿಯಲ್ಲ, ಇಂಥ ಪ್ರಕರಣಗಳು ತೀರಾ ಅಪರೂಪ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಅಲೋಕ್ ವರ್ಮಾ ಅವರು ತಮ್ಮ ಕಚೇರಿಯಲ್ಲಿಯೇ ಈ ಇಬ್ಬರು ನಾಯಕರನ್ನು ಭೇಟಿ ಮಾಡಿದ್ದು ಸರ್ಕಾರಕ್ಕೆ ಮತ್ತಷ್ಟು ಅಚ್ಚರಿ ಮೂಡಿಸಿದೆ.

ಭೇಟಿಯಾಗಿದ್ದಕ್ಕೆ ಕಾರಣವೇನು?

ಭೇಟಿಯಾಗಿದ್ದಕ್ಕೆ ಕಾರಣವೇನು?

ಕಳೆದ ವಾರ ಶೌರಿ ಮತ್ತು ಪ್ರಶಾಂತ್ ಭೂಷಣ್ ಇಬ್ಬರೂ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಭೇಟಿಯಗಿದ್ದರು. ರಫೇಲ್ ಡೀಲ್ ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ತನಿಖೆ ನಡೆಸುವಂತೆ ಸಿಬಿಐ ನಿರ್ದೇಶಕರನ್ನು ಇಬ್ಬರು ನಾಯಕರೂ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಮೋದಿ ವಿರುದ್ದ ಸಿಬಿಐಗೆ ದೂರು: ಯಶವಂತ್ ಸಿನ್ಹಾ ಹಿಂದಿನ ಮಾಸ್ಟರ್ ಮೈಂಡ್ ಯಾರು?ಮೋದಿ ವಿರುದ್ದ ಸಿಬಿಐಗೆ ದೂರು: ಯಶವಂತ್ ಸಿನ್ಹಾ ಹಿಂದಿನ ಮಾಸ್ಟರ್ ಮೈಂಡ್ ಯಾರು?

ಗಂಭೀರವಾಗಿ ಪರಿಗಣಿಸಿದ ಸರ್ಕಾರ

ಗಂಭೀರವಾಗಿ ಪರಿಗಣಿಸಿದ ಸರ್ಕಾರ

ಆದರೆ ಈ ಕುರಿತು ಸಿಬಿಐ ನಿರ್ದೇಶಕರನ್ನು ಶೌರಿ ಮತ್ತು ಭೂಷಣ್ ಭೇಟಿಯಾಗಲು, ಅಲೋಕ್ ವರ್ಮಾ ಒಪ್ಪಿಗೆ ನೀಡಿದ್ದೇ ಸರ್ಕಾರದ ಮುನಿಸಿಗೆ ಕಾರಣವಾಗಿದೆ. ಈ ಘಟನೆಯನ್ನು ತೀರಾ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, 'ರಾಜಕಾರಣಿಗಳನ್ನು ಸಿಬಿಐ ನಿರ್ದೇಶಕರು ತಮ್ಮ ಆಫೀಸಿನಲ್ಲಿಯೇ ಭೇಟಿಯಾಗಿದ್ದು ಅಚ್ಚರಿ ತಂದಿದೆ. ಇದು ವಿರಳಾತಿವಿರಳ ಪ್ರಕರಣ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ' ಎಂದಿದೆ.

ಮೋದಿ ವಿರುದ್ದ ಸಿಬಿಐಗೆ ದೂರು: ಯಶವಂತ್ ಸಿನ್ಹಾ ಹಿಂದಿನ ಮಾಸ್ಟರ್ ಮೈಂಡ್ ಯಾರು?ಮೋದಿ ವಿರುದ್ದ ಸಿಬಿಐಗೆ ದೂರು: ಯಶವಂತ್ ಸಿನ್ಹಾ ಹಿಂದಿನ ಮಾಸ್ಟರ್ ಮೈಂಡ್ ಯಾರು?

ಮೋದಿ ವಿರುದ್ಧ ಯಶವಂತ ಸಿನ್ಹಾ ದೂರು

ಮೋದಿ ವಿರುದ್ಧ ಯಶವಂತ ಸಿನ್ಹಾ ದೂರು

ಫ್ರಾನ್ಸ್ ನೊಂದಿಗೆ ರಫೇಲ್ ಯುದ್ಧ ವಿಮಾನ ಖರೀದಿಗಾಗಿ ನಡೆದ ಒಪ್ಪಂದದ ನಂತರ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ದೂರಲಾಗಿದೆ. ಈ ಕುರಿತು ಬಿಜೆಪಿಯ ಮಾಜಿ ಮುಖಂಡ ಯಶವಂತ ಸಿನ್ಹಾ ಅವರು ಇತ್ತೀಚೆಗಷ್ಟೇ ಸಿಬಿಐ ಗೆ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ರಫೇಲ್ ಖರೀದಿ ಬಗ್ಗೆ ಮೋದಿಗೆ 6 ಪ್ರಶ್ನೆ ಮುಂದಿಟ್ಟ ಯಶವಂತ್ ಸಿನ್ಹಾರಫೇಲ್ ಖರೀದಿ ಬಗ್ಗೆ ಮೋದಿಗೆ 6 ಪ್ರಶ್ನೆ ಮುಂದಿಟ್ಟ ಯಶವಂತ್ ಸಿನ್ಹಾ

English summary
Central Government expresses it's unhappy over meeting of CBI director Alok verma and Prashant Bhushan and Arun Shourie.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X