ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಮಂತ್ರಿ ಆವಾಸ್ ಯೋಜನೆ: ಹೆಚ್ಚುವರಿ 1.4 ಲಕ್ಷ ಮನೆ ಸೇರ್ಪಡೆ

|
Google Oneindia Kannada News

ನವದೆಹಲಿ, ಜುಲೈ 26: ನಗರಪ್ರದೇಶದಲ್ಲಿ ಬಡವರಿಗೆ ಸೂರು ಕಲ್ಪಿಸುವ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಹೆಚ್ಚುವರಿಯಾಗಿ 1.4 ಲಕ್ಷ ಮನೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

2022ರೊಳಗೆ ದೇಶದ ಪ್ರತಿಯೊಂದು ಕುಟುಂಬಕ್ಕೆ ಸ್ವಂತ ಮನೆ ಇರಬೇಕೆಂಬ ಕೇಂದ್ರ ಸರ್ಕಾರದ ಗುರಿ ಹಿನ್ನೆಲೆಯಲ್ಲಿ ಹೆಚ್ಚುವರಿ ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ.

ಒಟ್ಟು 492 ಕೋಟಿ ಯೋಜನೆಗೆ 6642 ಕೋಟಿ ರೂ ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರದ ಪಾಲು 2102 ಕೋಟಿ ಅನುದಾನ ನೀಡಲಿದೆ.

 pm Awas Yojana

ಗುರುವಾರ ಅನುಮತಿ ನೀಡಿರುವ ಯೋಜನೆಯಲ್ಲಿ ಗುಜರಾತ್ 26,585 ಉತ್ತರಪ್ರದೇಶ 54577, ಪಶ್ಚಿಮ ಬಂಗಾಲಳ 26585, ಅಸ್ಸಾಂ 9328, ಮಹಾರಾಷ್ಟ್ರ 8499, ಛತ್ತೀಸ್‌ಗಢ 6507, ರಾಜಸ್ತಾನ 4927, ಹರಿಯಾಣ 3807 ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ.

ಬಜೆಟ್ 2019: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ತೀವ್ರಗತಿಬಜೆಟ್ 2019: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ತೀವ್ರಗತಿ

ಇದರಲ್ಲಿ ಕರ್ನಾಟಕದ ಪಾಲೆಷ್ಟು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ, ಜುಲೈ 5 ರಂದು ಘೋಷಣೆ ಮಾಡಿರುವ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿತ್ತು.

ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು, 2020-22 ರ ಒಳಗಾಗಿ ಬರೋಬ್ಬರಿ 1.95 ಕೋಟಿ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಘೋಷಿಸಿದ್ದರು.

ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಅಷ್ಟೆ ಅಲ್ಲದೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆಗಳ ನಿರ್ಮಾಣ ಅವಧಿ 2015 ರಲ್ಲಿ 315 ದಿನಗಳಿತ್ತು, ಅದನ್ನು 2018-19 ರ ವೇಳೆಗೆ ಕೇವಲ 119 ದಿನಗಳಿಗೆ ಇಳಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು.

English summary
Central government decided to built 1.4 addition houses under PM Awas Yojana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X