ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಸಿದ ವಾಹನ ಉದ್ಯಮ ಚೇತರಿಕೆಗೆ ನಿರ್ಮಲಾ ಸೀತಾರಾಮನ್ ಮದ್ದು

|
Google Oneindia Kannada News

Recommended Video

ಕುಸಿದ ವಾಹನ ಉದ್ಯಮ ಚೇತರಿಕೆಗೆ ನಿರ್ಮಲಾ ಸೀತಾರಾಮನ್ ಮದ್ದು

ನವದೆಹಲಿ, ಆಗಸ್ಟ್ 23: ಕುಸಿದ ಆಟೋ ಉದ್ಯಮದ ಚೇತರಿಕೆಗೆ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಹಲವು ಆಕರ್ಷಕ ಘೊಷಣೆಗಳನ್ನು ಇಂದು ಮಾಡಿದ್ದಾರೆ.

ಬಿಎಸ್‌4 ವಾಹನಗಳನ್ನು ಕೊಳ್ಳುವ ಅವಧಿಯನ್ನು ಮಾರ್ಚ್‌ 31, 2020 ರ ವರೆಗೆ ಮುಂದುವರೆಸಲಾಗಿದ್ದು, ಈ ಅವಧಿಯಲ್ಲಿ ನೊಂದಣಿ ಆಗುವ ಬಿಎಸ್‌4 ವಾಹನಗಳನ್ನು ನೊಂದಾವಣಿಯ ಪೂರ್ಣ ಅವಧಿಯವರೆಗೆ ಬಳಸಬಹುದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು.

ಆರ್ಥಿಕತೆಗೆ ಜೀವ ತುಂಬಲು ಹಲವು ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್ಆರ್ಥಿಕತೆಗೆ ಜೀವ ತುಂಬಲು ಹಲವು ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್

ಬಿಎಸ್‌4 ವಾಹನಗಳನ್ನು 2020ರ ನಂತರ ಬಳಸುವಂತಿಲ್ಲವೆಂದು ಈ ಹಿಂದೆ ಕೇಂದ್ರವೇ ಹೇಳಿತ್ತು. ಆಟೋ ಉದ್ಯಮ ಕುಸಿತ ಕಂಡ ಕಾರಣ ಈ ನಿಯಮವನ್ನು ಸಡಿಲಿಸಲಾಗಿದೆ.

Central government announce measures to boost Auto mobile sector

ಸರ್ಕಾರಿ ವಾಹನಗಳನ್ನು ಬದಲಾಯಿಸಿಕೊಳ್ಳಲು ಹೇರಲಾಗಿದ್ದ ನಿರ್ಬಂಧವನ್ನು ಕೇಂದ್ರವು ತೆಗೆದು ಹಾಕಗಿದ್ದು, 'ನಿಮ್ಮ ಹಳೆಯ ವಾಹನಗಳನ್ನು ಬದಲಾಯಿಸಿಕೊಳ್ಳಿ' ಎಂದು ನಿರ್ಮಲಾ ಸೀತಾರಾಮನ್ ಅವರು ಸರ್ಕಾರಿ ಸಂಸ್ಥೆಗಳಿಗೆ ಹೇಳಿದ್ದಾರೆ.

ಒಂದು ಬಾರಿ ನೊಂದಾವಣಿ ಶುಲ್ಕವನ್ನು ಹೆಚ್ಚಿಸಲು ತೆಗೆದುಕೊಳ್ಳಲಾಗಿದ್ದ ನಿರ್ಣಯವನ್ನು ಜೂನ್ 2020ರ ವರೆಗೆ ಮುಂದೂಡಲಾಗಿದೆ.

ಭಾರತಕ್ಕೆ ಹೊಸ ವಿತ್ತ ಸಚಿವರ ಅಗತ್ಯವಿದೆ, ಕಾಂಗ್ರೆಸ್ ಕುಟುಕುಭಾರತಕ್ಕೆ ಹೊಸ ವಿತ್ತ ಸಚಿವರ ಅಗತ್ಯವಿದೆ, ಕಾಂಗ್ರೆಸ್ ಕುಟುಕು

ವಾಹನ ಸವಕಳಿ (ಚಾಸಿಸ್‌) ಅವಧಿಯನ್ನು 15% ಹೆಚ್ಚಿಸಿದ್ದು, ಒಟ್ಟು 30% ಹೆಚ್ಚಳ ಮಾಡಲಾಗಿದೆ. ಇದು ಎಲ್ಲ ಮಾದರಿಯ ವಾಹನಗಳಿಗೂ ಅನ್ವಯ ಆಗಲಿದೆ.

ಎಲೆಕ್ಟ್ರಿಕಲ್ ವಾಹನ ಮತ್ತು ನೈಸರ್ಗಿಕ ಇಂಧನಗಳನ್ನು ಬಳಸುವ ವಾಹನಗಳ ನೊಂದಾವಣಿ ಮುಂದುವರೆಯಲಿದ್ದು, ಸರ್ಕಾರವು ಎಲೆಕ್ರಿಕಲ್ ವಾಹನಗಳ ತಯಾರಿಕೆಗೆ ಸೂಕ್ತ ಮೂಲಸೌಲಭ್ಯ ಒದಗಿಸಿಕೊಡಲು ಬದ್ಧವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

2 ದಶಕದಲ್ಲಿಯೇ ವಾಹನ ಉದ್ಯಮಕ್ಕೆ ಭಾರಿ ಸಂಕಷ್ಟ: ಕೆಲಸ ಕಳೆದುಕೊಂಡ 2.30 ಲಕ್ಷ ಮಂದಿ2 ದಶಕದಲ್ಲಿಯೇ ವಾಹನ ಉದ್ಯಮಕ್ಕೆ ಭಾರಿ ಸಂಕಷ್ಟ: ಕೆಲಸ ಕಳೆದುಕೊಂಡ 2.30 ಲಕ್ಷ ಮಂದಿ

ಆಟೋ ಮೊಬೈಲ್ ಉದ್ಯಮವು ತೀವ್ರ ಕುಸಿದ ಕಂಡಿತ್ತು, ಕಳೆದ ತಿಂಗಳಿನಲ್ಲಿ ಭಾರತ ಆಟೋ ಉದ್ಯಮದ ದೈತ್ಯ ಮಾರುತಿಯು ಮೂರು ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು. ಮತ್ತೊಂದು ಪ್ರಮುಖ ಸಂಸ್ಥೆ ಟಿವಿಎಸ್ ಕೆಲವು ದಿನಗಳ ಅವಧಿಗೆ ಉತ್ಪಾದನೆ ಸ್ಥಗಿತಗೊಳಿಸಿತ್ತು. ಇನ್ನೂ ಹಲವು ಆಟೋ ಉದ್ಯಮಗಳು ತೀವ್ರ ಕುಸಿತ ಕಂಡಿದ್ದವು. ಉದ್ಯಮಕ್ಕೆ ಚೇತರಿಕೆ ನೀಡಲು ಈ ಕ್ರಮಗಳನ್ನು ಕೇಂದ್ರ ಕೈಗೊಂಡಿದೆ.

English summary
Finance minister Nirmala Sitaraman announce several measures to boost Auto mobile sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X