ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಚಿಕಿತ್ಸೆಗೆ ಯೋಗ, ಆಯುರ್ವೇದ ಕ್ರಮ: ಕೇಂದ್ರದ ಮಾರ್ಗಸೂಚಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 06: ಕೊರೊನಾ ಸೋಂಕು ತಡೆಯಲು ಅಶ್ವಗಂಧ ಆಯುಷ್ 64ನ್ನು ಬಳಸಲು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.

ಕೊವಿಡ್-19 ಲಸಿಕೆಯ ಪ್ರಯೋಗದ ಹಂತಗಳು ಇನ್ನೂ ಮುಂದುವರೆದಿದ್ದು, ಲಘು ಮತ್ತು ಲಕ್ಷಣ ರಹಿತ ಕೊವಿಡ್-19 ರೋಗಿಗಳಿಗೆ ಈ ಸಲಹೆ ನೀಡಲಾಗಿದೆ.

ಆಯುರ್ವೇದ್ ಚಿಕಿತ್ಸೆಯಿಂದ 5 ದಿನಗಳಲ್ಲೇ ಕೊವಿಡ್-19 ನೆಗೆಟಿವ್!ಆಯುರ್ವೇದ್ ಚಿಕಿತ್ಸೆಯಿಂದ 5 ದಿನಗಳಲ್ಲೇ ಕೊವಿಡ್-19 ನೆಗೆಟಿವ್!

ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಮತ್ತು ಆಯುಷ್ ಸಚಿವ ಶ್ರೀಪಾದ್ ನಾಯಕ್ ,ಬಿಡುಗಡೆ ಮಾಡಿರುವ ಆಯುರ್ವೇದ ಮತ್ತು ಯೋಗ ಆಧಾರಿತ ಕೊವಿಡ್ -19 ರ ರಾಷ್ಟ್ರೀಯ ಕ್ಲಿನಿಕಲ್ ಕ್ಲಿನಿಕಲ್ ಮ್ಯಾನೇಜ್ ಮೆಂಟ್ ಪ್ರೋಟೊಕಾಲ್ ನಲ್ಲಿ ಹೆಚ್ಚಿನ ಅಪಾಯದಲ್ಲಿರುವ ಜನರು ಮತ್ತು ಸೋಂಕಿತ ಜನರ ಪ್ರಾಥಮಿಕ ಸಂಪರ್ಕಿತರಲ್ಲಿ ರೋಗವನ್ನು ತಡೆಗಟ್ಟಲು ನಿರ್ದಿಷ್ಟ ಕ್ರಮಗಳನ್ನು ಸಹ ಸೂಚಿಸಲಾಗಿದೆ.

ಆರೋಗ್ಯ ಸಚಿವಾಲಯದ ಇತರೆ ಶಿಫಾರಸುಗಳು

ಆರೋಗ್ಯ ಸಚಿವಾಲಯದ ಇತರೆ ಶಿಫಾರಸುಗಳು

-ಮನೆಯಿಂದ ಹೊರ ಹೋಗುವ ಮೊದಲು ತೈಲ ಅಥವಾ ಶದ್ಬಿಂದು ತೈಲ, ಹಸುವಿನ ತುಪ್ಪ ಅಥವಾ ಎಣ್ಣೆಯನ್ನು ಮೂಗಿಗೆ ಸವರಬೇಕು.
-ಪುದೀನಾ, ಓಮಕಾಳು ಅಥವಾ ಯುಕಲಿಪ್ಟಸ್ ತೈಲ ನೀರಿಗೆ ಹಾಕಿ ಸ್ಟೀಮ್ ತೆಗೆದುಕೊಳ್ಳಬೇಕು
-ದಿನಕ್ಕೆ ಒಮ್ಮೆ ಗಿಡಮೂಲಿಕೆಗಳಿಂದ ಸಿದ್ಧಪಡಿಸಲಾದ ಆಯುಷ್ ಕಾಧ ಅಥವಾ ಕ್ವಾತ್ ಬಳಸಬೇಕು
-ಗುಡುಚಿ, ಅಶ್ವಗಂಧ, ಆಯುಷ್ 64 ಬಳಕೆ
-ಬಿಸಿ ನೀರಿಗೆ ಸ್ವಲ್ಪ ಅರಿಶಿನ ಮತ್ತು ಉಪ್ಪು ಸೇರಿಸಿ ಬಾಯಿಮುಕ್ಕಳಿಸಬೇಕು

ಕೊವಿಡ್ ನಂತರದ ಸಮಸ್ಯೆಗೂ ಪರಿಹಾರ

ಕೊವಿಡ್ ನಂತರದ ಸಮಸ್ಯೆಗೂ ಪರಿಹಾರ

ಅಲ್ಲದೆ, ಕೊವಿಡ್ ನಂತರದ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಹೊರತುಪಡಿಸಿ ಲಕ್ಷಣರಹಿತ ಮತ್ತು ಸ್ವಲ್ಪ ರೋಗಲಕ್ಷಣದ ಜನರಿಗೆ ಕ್ರಮಗಳನ್ನು ಸಹ ಜಾರಿಗೊಳಿಸಿದೆ. ಆದಾಗ್ಯೂ, ಮಾರ್ಗಸೂಚಿಗಳು ಮಧ್ಯಮ ಅಥವಾ ತೀವ್ರವಾದ ಕಾಯಿಲೆಗೆ ಯಾವುದನ್ನೂ ಶಿಫಾರಸು ಮಾಡಿಲ್ಲ.

ರೋಗ ನಿರೋಧಕ ಶಕ್ತಿ ಹೆಚ್ಚಳ

ರೋಗ ನಿರೋಧಕ ಶಕ್ತಿ ಹೆಚ್ಚಳ

ಪ್ರಸ್ತುತ ಸಂದರ್ಭದಲ್ಲಿ ಉತ್ತಮ ರೋಗ ನಿರೋಧಕ ಶಕ್ತಿಯಿಂದ ರೋಗ ಬಾರದಂತೆ ತಡೆಗಟ್ಟಬಹುದು ಎಂಬುದು ಪ್ರಸ್ತುತ ಸಂದರ್ಭದಲ್ಲಿನ ಕೋವಿಡ್-19 ಕಾಯಿಲೆಯಿಂದ ತಿಳಿಯಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ. ಕೊರೊನಾ ಸೋಂಕು ತಡೆಗಟ್ಟಲು ಹಾಗೂ ರೋಗ ಹೆಚ್ಚುವುದನ್ನು ತಡೆಗಟ್ಟಲು ಉತ್ತಮ ರೋಗ ನಿರೋಧಕ ಶಕ್ತಿ ಹೊಂದುವುದು ಅತ್ಯಗತ್ಯವೆಂದು ಹೇಳಲಾಗಿದೆ ಕೊವಿಡ್ ರೋಗಿಗಳ ಪ್ರಾಥಮಿಕ ಸಂಪರ್ಕಿತರು ಹಾಗೂ ಅಪಾಯದ ಹಂತದಲ್ಲಿರುವ ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೆ ಅಶ್ವಗಂಧ, ಚ್ಯವನಪ್ರಾಶದಂತಹ ಔಷಧವನ್ನು ಬಳಸುವಂತೆ ತಿಳಿಸಿದೆ.

ಯೋಗದ ಪ್ರಮುಖ ಪಾತ್ರ

ಯೋಗದ ಪ್ರಮುಖ ಪಾತ್ರ

ಕೊವಿಡ್-19 ತಡೆಗಟ್ಟುವ ಕ್ರಮಗಳ ಕುರಿತು ಆರೋಗ್ಯ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಆಯುರ್ವೇದ ಮತ್ತು ಯೋಗವು ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

English summary
Union Health Minister Harsh Vardhan on Tuesday released a protocol for the clinical management of C-19, that lists dietary measures, yoga and Ayurvedic herbs and formulations such as Ashwagandha and AYUSH-64 for prevention of coronavirus infection and asymptomatic cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X