ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್ ಹೊಡೆತ: ಸಣ್ಣ ಕೈಗಾರಿಕೆಗಳ ನೆರವಿಗೆ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಏಪ್ರಿಲ್ 22: ಕೊರೊನಾ ಹಾವಳಿಯಿಂದ ದೇಶದ ಅರ್ಥವ್ಯವಸ್ಥೆ ತತ್ತರಿಸಿ ಹೋಗಿದೆ. ಹಳಿ ತಪ್ಪಿರುವ ಅರ್ಥ ವ್ಯವಸ್ಥೆಯನ್ನು ಸರಿ ದಾರಿಗೆ ತರುವ ದೊಡ್ಡ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ.

Recommended Video

ನಿಯಮ ಪಾಲಿಸಲು ಇವರಿಗೇನು ಕಷ್ಟ | police | Lockdown | Oneindia Kannada

ಅದರಲ್ಲೂ ಗ್ರಾಮೀಣ ಮಟ್ಟದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳನ್ನು ನೀಡುವ ಅತಿ ಸಣ್ಣ, ಸಣ್ಣ, ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕೊರೊನಾ ಲಾಕ್‌ಡೌನ್ ನಿಂದ ಭಾರೀ ದುಷ್ಪರಿಣಾಮ ಆಗಿದೆ. ಇದನ್ನು ಸರಿದೂಗಿಸಲು ಕೇಂದ್ರ ಹಣಕಾಸು ಇಲಾಖೆ ಎರಡು ಭಾಗಗಳಾಗಿ ಸುಮಾರು 20,000 ಕೋಟಿ ರುಪಾಯಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲು ಮುಂದಾಗಿದೆ.

ವಾವ್! ಕ್ವಾರಂಟೈನ್ ಕೇಂದ್ರದಲ್ಲಿ ಸುಮ್ಮನೆ ಕೂರಲಿಲ್ಲ ಈ ಕಾರ್ಮಿಕರುವಾವ್! ಕ್ವಾರಂಟೈನ್ ಕೇಂದ್ರದಲ್ಲಿ ಸುಮ್ಮನೆ ಕೂರಲಿಲ್ಲ ಈ ಕಾರ್ಮಿಕರು

ಅತಿ ಸಣ್ಣ, ಸಣ್ಣ, ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSMEs) ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಸಹಾಯ ಮಾಡಲು ಕೇಂದ್ರ ಹಣಕಾಸು ಇಲಾಖೆ 20,000 ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಅನ್ನು ಎರಡು ಪ್ರತ್ಯೇಕ ನಿಧಿಗಳಾಗಿ ವಿಂಗಡಿಸಿ ಬಿಡುಗಡೆ ಮಾಡಲು ಸಿದ್ದವಾಗಿದೆ.

20,000 ಕೋಟಿ ರೂ.ಗಳನ್ನು ಮೀಸಲಿಡಬೇಕು

20,000 ಕೋಟಿ ರೂ.ಗಳನ್ನು ಮೀಸಲಿಡಬೇಕು

ಕೋವಿಡ್ -19 ಲಾಕ್‌ಡೌನ್‌ನಿಂದಾಗಿ ಬಿಕ್ಕಟ್ಟನ್ನು ಎದುರಿಸುತ್ತಿರುವ ಎಂಎಸ್‌ಎಂಇಗಳಿಗೆ ಸಹಾಯ ಮಾಡಲು, MSMEs ಇಲಾಖೆ, ಸುಮಾರು 20,000 ಕೋಟಿ ರೂ.ಗಳನ್ನು ಮೀಸಲಿಡಬೇಕು ಎಂದು ಎರಡು ಪ್ರಸ್ತಾಪಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಹಣಕಾಸು ಸಮಿತಿಗೆ (EFC) ಸಲ್ಲಿಸಿತ್ತು. ಈಗ ಸಮಿತಿ ಪ್ರಸ್ತಾವನೆಯನ್ನು ಪರಿಗಣೆನಗೆ ತೆಗೆದುಕೊಂಡು ಹಣ ಬಿಡುಗಡೆಗೆ ಹಣಕಾಸು ಇಲಾಖೆ ಮುಂದಾಗಿದೆ.

ನಿತಿನ್ ಗಡ್ಕರಿ ಪ್ರಸ್ತಾವನೆ ಸಲ್ಲಿಸಿದ್ದರು

ನಿತಿನ್ ಗಡ್ಕರಿ ಪ್ರಸ್ತಾವನೆ ಸಲ್ಲಿಸಿದ್ದರು

ಅತಿ ಸಣ್ಣ, ಸಣ್ಣ, ಮತ್ತು ಮಧ್ಯಮ ಕೈಗಾರಿಕೆ ಸಚಿವ ನಿತಿನ್ ಗಡ್ಕರಿ ಅವರು ಪ್ಯಾಕೇಜ್‌ನ್ನು ಎರಡು ನಿಧಿಗಳಾಗಿ 'ಡಿಸ್ಟ್ರೆಸ್ಡ್ ಅಸೆಟ್ ಫಂಡ್' ಮತ್ತು 'ಫಂಡ್ ಆಫ್ ಫಂಡ್' ಅಡಿಯಲ್ಲಿ ವಿಭಾಗಿಸಿ ಪ್ರಸ್ತಾವನೆ ಸಲ್ಲಿಸಿತ್ತು. ಎರಡಕ್ಕೂ ತಲಾ 10,000 ಕೋಟಿ ರೂ ಬಿಡುಗಡೆಯಾಗುತ್ತದೆ ಎನ್ನಲಾಗಿದೆ.

ಟರ್ನ್‌ರೌಂಡ್ ಕ್ಯಾಪಿಟಲ್

ಟರ್ನ್‌ರೌಂಡ್ ಕ್ಯಾಪಿಟಲ್

ಮುಂದಿನ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಣಕಾಸು ಇಲಾಖೆಯ ಈ ನಿರ್ಧಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಲಾಕ್‌ಡೌನ್ ಮುಗಿದ ನಂತರ ವ್ಯವಹಾರಗಳನ್ನು ಪರಿಣಾಮಕಾರಿಯಾಗಿ ಪುನರಾರಂಭಿಸಲು ಎಂಎಸ್‌ಎಂಇಗಳಿಗೆ "ಟರ್ನ್‌ರೌಂಡ್ ಕ್ಯಾಪಿಟಲ್" ಒದಗಿಸುವುದು ಈ ನಿಧಿಯ ಹಿಂದಿನ ಆಲೋಚನೆಯಾಗಿದೆ.

ಚೀನಾದಲ್ಲಿ ಉತ್ಪಾದನೆ ಕುಂಠಿತ

ಚೀನಾದಲ್ಲಿ ಉತ್ಪಾದನೆ ಕುಂಠಿತ

ಸರಕುಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿರುವ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರುವ ರಫ್ತು-ಆಧಾರಿತ ಕಾರ್ಯಸಾಧ್ಯವಾಗಿರುವ MSMEs ಘಟಕಗಳಿಗೆ ಈ ಪ್ಯಾಕೇಜ್ ಹಣ ಸಹಾಯ ಮಾಡಬಹುದು. ಕೊರೊನಾದಿಂದ ಚೀನಾದಲ್ಲಿ ಉತ್ಪಾದನೆಯ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳು ಇರುವುದರಿಂದ ಮುಂದಿನ ಹಂತಕ್ಕೆ ಹೋಗಲು MSMEsಗಳಿಗೆ ಇದೀಗ ಒಂದು ಅನನ್ಯ ಅವಕಾಶವಿದೆ. ಎಂದು ಸಚಿವಾಲಯ ಭಾವಿಸಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

English summary
Central Financial Ministery Alocation For 20000 Crore Rupees Special Pakage For MSMEs. MSMEs suffring from economic crisis due to corona lockdown in india,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X