ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸಚಿವ ಸಂಪುಟ ಸಭೆಯ ಮಹತ್ವದ ನಿರ್ಧಾರಗಳು

|
Google Oneindia Kannada News

ನವದೆಹಲಿ, ಡಿಸೆಂಬರ್ 16: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇಂದು ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

60 ಲಕ್ಷ ಟನ್ ಸಕ್ಕರೆಗೆ ಸಚಿವ ಸಂಪುಟ ಸಬ್ಸಿಡಿ ನೀಡಲಿದೆ. ಇದರಿಂದ 5 ಕೋಟಿ ರೈತರು ಮತ್ತು 5 ಲಕ್ಷ ಕಾರ್ಮಿಕರಿಗೆ ಪ್ರಯೋಜನವಾಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

2020-21ರ ಮಾರುಕಟ್ಟೆ ವರ್ಷದಲ್ಲಿ(ಅಕ್ಟೋಬರ್-ಸೆಪ್ಟೆಂಬರ್ ) 60 ಲಕ್ಷ ಟನ್ ಸಕ್ಕರೆ ರಫ್ತು ಮಾಡಲು 3,600 ಕೋಟಿ ರೂ.ಗಳ ಸಬ್ಸಿಡಿ ನೀಡಲು ಆಹಾರ ಸಚಿವಾಲಯ ಉದ್ದೇಶಿಸಿದೆ.

Central Cabinet Approves Next Round Of Spectrum Auction, Announces Sugar Export Subsidy

ಕಳೆದ ಸಚಿವ ಸಂಪುಟ ಸಭೆ ಇದೆ 9ರಂದು ನಡೆದಿದ್ದು, ಔಪಚಾರಿಕ ವಲಯದಲ್ಲಿ ಉದ್ಯೋಗವನ್ನು ಹೆಚ್ಚಿಸಲು ಮತ್ತು ಆತ್ಮನಿರ್ಭರ್ ಭಾರತ್ ಪ್ಯಾಕೇಜ್ 3.0 ಅಡಿಯಲ್ಲಿ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದಕ್ಕೆ ಉತ್ತೇಜನ ನೀಡಲು ಸಚಿವ ಸಂಪುಟವು ಭಾರತ್ ರೋಜ್ಗಾರ್ ಯೋಜನೆಗೆ ಚಾಲನೆ ನೀಡುವುದಾಗಿ ಹೇಳಿತ್ತು.

ಸ್ಪೆಕ್ಟ್ರಂ ಹಂಚಿಕೆಯ ಮುಂದಿನ ಸುತ್ತಿನ ಹರಾಜು ಕೂಡ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಕೊನೆಯ ಹರಾಜು 2016ರಲ್ಲಿ ನಡೆದಿತ್ತು.

'700 MHz, 800 MHz, 900 MHz, 1800 MHz, 2100 MHz, 2300 MHz ಮತ್ತು 2500 MHz ಆವರ್ತನ ಬ್ಯಾಂಡ್ʼಗಳಲ್ಲಿ ಸ್ಪೆಕ್ಟ್ರಮ್ ಹರಾಜು 20 ವರ್ಷಗಳ ವ್ಯಾಲಿಡಿಟಿ ಅವಧಿಗೆ ಸಂಪುಟ ಅನುಮೋದನೆ ನೀಡಿದೆ.

ಒಟ್ಟು 2251.25 ಮೆಗಾಹರ್ಟ್ಸ್ ಒಟ್ಟು 3,92,332.70 ಕೋಟಿ ರೂ.ಗಳ ಒಟ್ಟು ಮೌಲ್ಯವನ್ನ ನೀಡಲಾಗುತ್ತಿದೆ ಎಂದೂ ಸಚಿವರು ಮಾಹಿತಿ ನೀಡಿದರು.

English summary
Amid the ongoing farmers’ protest, the Union Cabinet on Wednesday met and took decisions related to agriculture, telecom and power sectors. Announcing the decisions, Union minister Prakash Javadekar said the Cabinet will provide subsidy on 60 lakh tonne sugar which will benefit five crore farmers and five lakh workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X