ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ,ಇಡಿ,ಎನ್‌ಐಎ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ: ಸುಪ್ರೀಂ

|
Google Oneindia Kannada News

ನವದೆಹಲಿ,ಡಿಸೆಂಬರ್ 02: ಇನ್ನುಮುಂದೆ ಸಿಬಿಐ, ಇಡಿ, ಎನ್‌ಐಎ ಏಜೆನ್ಸಿಗಳ ಕಚೇರಿಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾವನ್ನು ಅಳವಿಡಸಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ.

ಮಾನವ ಹಕ್ಕುಗಳ ಉಲ್ಲಂಘನೆ ಪರಿಶೀಲನೆಗಾಗಿ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವಂತೆ ಉನ್ನತ ನ್ಯಾಯಾಲಯ 2018ರಲ್ಲಿ ಆದೇಶಿಸಿತ್ತು.

6 ತಿಂಗಳಿಗೂ ಕಡಿಮೆ ಇಲ್ಲದ ರೀತಿಯಲ್ಲಿ ಒಂದು ನಿರ್ದಿಷ್ಟ ಸಮಯದವರೆಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು, ಮಾನವ ಹಕ್ಕುಗಳ ಉಲ್ಲಂಘನೆ ಸಂದರ್ಭದಲ್ಲಿ ಸಂತ್ರಸ್ತರು ತಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ ಎಂದು ನ್ಯಾಯಪೀಠ ತಿಳಿಸಿದೆ.

CCTVs, Audio Recording At All Interrogation Rooms, Lock-Ups: Supreme Court

ಪ್ರತಿಯೊಂದು ಪೊಲೀಸ್ ಠಾಣೆಗಳ ಎಲ್ಲಾ ಆಗಮನ, ನಿರ್ಗಮನ ದ್ವಾರಗಳು, ಮುಖ್ಯ ದ್ವಾರ, ಲಾಕ್ ಆಪ್ ಗಳು, ಕಾರಿಡಾರ್ ಗಳು, ರಿಸೆಫ್ ಸನ್, ಮತ್ತು ಲಾಕ್ ಆಪ್ ಕೊಠಡಿಗಳ ಹೊರಗಡೆಯ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆಯನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಖಾತ್ರಿಪಡಿಸಿಕೊಳ್ಳಬೇಕು ಎಂದು ನ್ಯಾಯಾಧೀಶ ಆರ್.ಎಫ್. ನಾರಿಮನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಹೇಳಿದೆ.

ರಾತ್ರಿಯಲ್ಲೂ ನೋಡಬಹುದಾದ ಸಾಧನಗಳನ್ನು ಸಿಸಿಟಿವಿ ವ್ಯವಸ್ಥೆಗಳು ಹೊಂದಿರಬೇಕು, ಆಡಿಯೋ, ವಿಡಿಯೋ ಫುಟೇಜ್ ಹೊಂದಿರಬೇಕು.

ಕನಿಷ್ಠವೆಂದರೂ ಒಂದು ವರ್ಷದವರೆಗೂ ಮಾಹಿತಿಯನ್ನು ಸಂಗ್ರಹಿಸಿಡಬಲ್ಲಾ ಇಂತಹ ಸಿಸಿಟಿವಿ ಕ್ಯಾಮರಾಗಳನ್ನು ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕಡ್ಡಾಯವಾಗಿ ಖರೀದಿಸಬೇಕು ಎಂದು ನ್ಯಾಯಪೀಠ ಹೇಳಿತು.

English summary
All police stations in the country and investigation agencies including the CBI, National Investigation Agency and Enforcement Directorate, must install CCTV cameras with night vision and audio recording, the Supreme Court said today in a landmark order meant to prevent excesses in custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X