ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CBSE ಪ್ರಶ್ನೆ ಪತ್ರಿಕೆಯಲ್ಲಿ ದೋಷ: ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್

|
Google Oneindia Kannada News

ನವದೆಹಲಿ, ಏಪ್ರಿಲ್ 20: ಸಿಬಿಎಸ್ ಇ(ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ಪಠ್ಯದ ಹತ್ತನೇ ತರಗತಿಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ಮುದ್ರಣ ದೋಷವಾದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ 2 ಹೆಚ್ಚುವರಿ ಅಂಕ ನೀಡಲು ಸಿಬಿಎಸ್ ಇ ನಿರ್ಧರಿಸಿದೆ.

ಮೇ 7ಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶ: ಶಿಕ್ಷಣ ಸಚಿವ ತನ್ವೀರ್ ಸೇಠ್ಮೇ 7ಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶ: ಶಿಕ್ಷಣ ಸಚಿವ ತನ್ವೀರ್ ಸೇಠ್

ಮಾರ್ಚ್ 12 ರಂದು ನಡೆದ ಇಂಗ್ಲಿಷ್ ಪರೀಕ್ಷೆಯ ಪ್ರಶ್ನೆಯೊಂದರಲ್ಲಿ ಮುದ್ರಣ ದೋಷವಾಗಿತ್ತು. ಇದರಿಂದ ವಿದ್ಯಾರ್ಥಿಗಳು ಪತರಿತಪಿಸುವಂತಾಗಿತ್ತು. ಈ ಕುರಿತು ಕೆಲವು ಶಿಕ್ಷಕರು ಮತ್ತು ಪಾಲಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಿಬಿಎಸ್ ಇ ಪರೀಕ್ಷೆಗೆ ಹಾಜರಾದ ಎಲ್ಲ ಮಕ್ಕಳಿಗೂ ಎರಡು ಹೆಚ್ಚುವರಿ ಅಂಕ ನೀಡಲು ನಿರ್ಧರಿಸಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

CBSE to grant 2 marks for typo error in Class 10th English exam

10 ಮತ್ತು 12 ನೇ ತರಗತಿಯ ಸಿಬಿಎಸ್ ಇ ಪಠ್ಯದ ಪರೀಕ್ಷೆಗಳು ಮಾರ್ಚ್ 5 ರಂದು ಆರಂಭವಾಗಿದ್ದು, ಏಪ್ರಿಲ್ 25 ರಂದು ಮುಗಿಯಲಿವೆ. ಹತ್ತನೇ ತರಗತಿ ಪರೀಕ್ಷೆ ಫಲಿತಾಂಶ ಮೇ ಕೊನೆಯ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

English summary
The Central Board of Secondary Education (CBSE) on Friday announced that it will grant two extra marks to Class Xth students for a typing error in the English question paper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X